ಸುಂಟಿಕೊಪ್ಪ, ಅ. ೪: ಗರಗಂದೂರು ಎ ವಾರ್ಡ್ನ ಮಲ್ಲಿಕಾರ್ಜುನ ಕಾಲೋನಿಗೆ ತೆರಳುವ ಮುಖ್ಯದ್ವಾರವನ್ನು ಗ್ರಾಮಸ್ಥರೇ ನಿರ್ಮಿಸಿ ಅಳವಡಿಸಲಾಗಿದ್ದು, ನಾಮಫಲಕದ ದ್ವಾರವನ್ನು ಶಾಸಕ ಅಪ್ಪಚ್ಚು ರಂಜನ್ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು.

ಈ ಕಾಲೋನಿಗೆ ತೆರಳುವ ರಸ್ತೆಗೆ ರೂ. ೧೦ ಲಕ್ಷ ವೆಚ್ಚದಲ್ಲಿ ನೂತನ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಅದಕ್ಕೂ ಶಾಸಕರು ಚಾಲನೆ ನೀಡಿದರು.

ಗ್ರಾ.ಪಂ. ಹಾಗೂ ಮಲ್ಲಿಕಾರ್ಜುನ ಕಾಲೋನಿಯ ನಿವಾಸಿಗಳು ಸೇರಿ ನಿರ್ಮಿಸಿದ್ದ ದ್ವಾರವನ್ನು ಶಾಸಕರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಸದಸ್ಯರು ಸ್ಥಳಕ್ಕೆ ಆಗಮಿಸಿ ಉದ್ಘಾಟಿಸುತ್ತಿರುವಾಗ ಮಾತಿನ ಚಕಮಕಿ ನಡೆಯಿತು.

ಮಲ್ಲಿಕಾರ್ಜುನ ಕಾಲೋನಿಯ ನಾಮಫಲಕದ ದ್ವಾರ ಉದ್ಘಾಟನೆ ಯಾಗುತ್ತಿದ್ದಂತೆ ಕಾಲೋನಿಯ ನಿವಾಸಿ ನಿಯಾಜ್ ಎಂಬಾತ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾಲೋನಿ ಬದಲು ನಗರ ಎಂದು ನಾಮಕರಣ ಗೊಳಿಸಬೇಕು. ಹಳದಿ ಬಣ್ಣದ ಬದಲಾಗಿ ಬಿಳಿ ಬಣ್ಣ ದ್ವಾರದ ಫಲಕಕ್ಕೆ ಬಳಿಯಬೇಕೆಂದು ಹೇಳುತ್ತಿದ್ದಂತೆ ೨ ಗುಂಪುಗಳ ನಡುವೆ ಜಟಾಪಟಿ ಏರ್ಪಟ್ಟು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ನಂತರ ಕಾರ್ಯಕ್ರಮ ಮುಗಿಸಿ ವಾಪಸ್ಸಾಗುತ್ತಿದ್ದ ಕೆಲ ಕಿಡಿಗೇಡಿಗಳು ಮತ್ತೊಂದು ಗುಂಪಿನ ಯುವಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಸೋಮವಾರಪೇಟೆ ಡಿವೈಎಸ್‌ಪಿ ಹಾಗೂ ಕುಶಾಲನಗರ ವೃತ್ತ ನಿರೀಕ್ಷಕರ ಸಮ್ಮುಖದಲ್ಲಿ ಸಂಧಾನ ಏರ್ಪಟ್ಟು ಗ್ರಾಮದಲ್ಲಿ ಸಾಮರಸ್ಯ ಕಾಪಾಡಿಕೊಳ್ಳುವಂತೆ ಸೂಚಿಸಿ ಕಳುಹಿಸಿದ್ದರು.

ಮತ್ತೆ ಗಲಭೆ: ಸಂಜೆ ಹಿಂದೂ ಸಂಘಟನೆಯ ಯುವಕರು ಮಲ್ಲಿಕಾರ್ಜುನ ಕಾಲೋನಿಯ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ರಸ್ತೆಗೆ ಅಡ್ಡಲಾಗಿ ಮರದ ಕೊಂಬೆಯನ್ನು ಇರಿಸ ಲಾಗಿದ್ದು, ಕಾರಿನಲ್ಲಿ ಆಗಮಿಸುತ್ತಿದ್ದ ಮಾದಾಪುರದ ಸುನಿಲ್ ಎಂಬವರ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಕಾರಿನ ಹಿಂಬದಿ ಹಾಗೂ ಬಾಗಿಲಿನ ಬದಿಯ ಗಾಜುಗಳನ್ನು ಪುಡಿಗಟ್ಟಿದ್ದಾರೆ. ಅದೃಷ್ಟವಶಾತ್ ಕಾರಿನಲ್ಲಿ ಸುನಿಲ್ ಓರ್ವನೇ ಇದ್ದು, ಅಪಾಯದಿಂದ ಪಾರಾಗಿದ್ದಾನೆ.

ವಿಷಯ ತಿಳಿದ ಹಿಂದೂ ಸಂಘಟನೆಯ ಯುವಕರ ಗುಂಪು ಸುಂಟಿಕೊಪ್ಪ ಠಾಣೆಗೆ ಆಗಮಿಸಿ ಆರೋಪಿಗಳನ್ನು ಬಂಧಿಸುವAತೆ, ಗ್ರಾಮದಲ್ಲಿ ಅಶಾಂತಿಗೆ ಕಾರಣರಾದ ವರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿತು.

ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸ್ ಎ.ಎಸ್.ಐ. ಕಾವೇರಪ್ಪ ಹಾಗೂ ಸಿಬ್ಬಂದಿಗಳು ತೆರಳಿದ್ದು ಸೋಮವಾರಪೇಟೆ ಡಿವೈಎಸ್‌ಪಿ ಶೈಲೆಂದ್ರ ಹಾಗೂ ಕುಶಾಲನಗರ ವೃತ್ತ ನಿರೀಕ್ಷಕ ಮಹೇಶ್ ಆಗಮಿಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಮೊಕದ್ದಮೆ ದಾಖಲು

ಮಲ್ಲಿಕಾರ್ಜುನ ಕಾಲೋನಿಯ ಘಟನೆಗೆ ಸಂಬAಧಿಸಿದAತೆ ಸೆಕ್ಷನ್ ೮೪/೨೧/೩೪೧/೧೪೩/೧೪೪/೧೪೭/೫೦೬/೪೨೭/ರೆಡ್‌ವಿತ್ ೧೪೯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾನೂನಿನಡಿ ರಫೀಕ್, ಲತೀಫ್, ರಾಶೀದ್, ಹಾರಿಫ್ ಇತರರ ಮೇಲೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳ ಲಾಗುವುದು ಎಂದು ಡಿವೈಎಸ್‌ಪಿ ಶೈಲೇಂದ್ರ ಹಾಗೂ ವೃತ್ತ ನೀರೀಕ್ಷಕ ಮಹೇಶ್ ತಿಳಿಸಿದ್ದಾರೆ. -ರಾಜುರೈ