ಮಡಿಕೇರಿ, ಅ. ೪: ಕೊಡಗು ಜಿಲ್ಲೆಯಲ್ಲಿ ೧,೭೨,೩೨೨ ಮಂದಿ ೪೫ ವರ್ಷ ಮೇಲ್ಪಟ್ಟವರು ಕೋವಿಡ್ ನಿರೋಧಕ ಲಸಿಕೆ ಪಡೆದುಕೊಂಡಿದ್ದಾರೆ. ೨೦೧೧ರ ಜನಗಣತಿ ಪ್ರಕಾರ ಶೇ.೧೦೬.೯೨ ಸಾಧನೆಯಾಗಿದೆ ಎಂದು ಜಿಲ್ಲಾ ಲಸಿಕಾ ಅಧಿಕಾರಿ ಡಾ. ಗೋಪಿನಾಥ್ ಅವರು ಮಾಹಿತಿ ನೀಡಿದ್ದಾರೆ.
೨೦೧೧ರ ಜನಗಣತಿ ಪ್ರಕಾರ ಈ ವಯೋಮಿತಿಯಲ್ಲಿ ಜಿಲ್ಲೆಯಲ್ಲಿ ೧,೬೧,೬೨೨ ಮಂದಿ ಇದ್ದರು. ಇದೀಗ ೧೦ ವರ್ಷಗಳು ಕಳೆದಿದ್ದು, ಸಂಖ್ಯೆ ಹೆಚ್ಚಾಗಿದ್ದರು, ಹಳೆ ಜನಗಣತಿ ಆಧಾರದಲ್ಲಿಯೇ ಶೇಕಡ ಲೆಕ್ಕಾಚಾರ ನಡೆಸುವ ಕಾರಣ ೧೦೬.೯೨ ಸಾಧನೆಯಾಗಿದೆ. ೪೫ ವರ್ಷ ಮೇಲ್ಪಟ್ಟವರ ಪೈಕಿ ೧,೧೧,೨೫೪ ಮಂದಿ ೨ನೆಯ ಡೋಸ್ ಪಡೆದುಕೊಂಡಿದ್ದು ಶೇ. ೬೪.೫೬ ರಷ್ಟು ಸಾಧನೆಯಾಗಿದೆ.
ಉಳಿದಂತೆ ೧೮ ರಿಂದ ೪೪ ವರ್ಷ ವಯೋಮಿತಿಯ ೧,೯೩,೩೩೯ ಮಂದಿ ಮೊದಲನೆಯ ಡೋಸ್ ವ್ಯಾಕ್ಸಿನ್
(ಮೊದಲ ಪುಟದಿಂದ) ಪಡೆದುಕೊಂಡು ಶೇ.೮೦.೦೯ ಸಾಧನೆಯಾಗಿದೆ. ಇದೇ ವಯೋಮಿತಿಯ ೫೨,೮೫೫ ಮಂದಿ ೨ನೆಯ ಡೋಸ್ ಪಡೆದುಕೊಂಡಿದ್ದು, ಶೇ.೨೭.೩೪ ಸಾಧನೆಯಾಗಿದೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಇದುವರೆಗೆ ೮,೭೮೧ ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಸರಕಾರದಿಂದ ನೀಡುತ್ತಿದ್ದ ಲಸಿಕೆಯ ಕೊರತೆಯಿಂದಾಗಿ ಖಾಸಗಿ ಸಂಸ್ಥೆಗಳಿAದ ಸಾರ್ವಜನಿಕರು ಹಣ ನೀಡಿ ಲಸಿಕೆ ಪಡೆಯುತ್ತಿದ್ದರು. ಆದರೆ ಇದೀಗ ಲಸಿಕೆಯ ಕೊರತೆ ಇಲ್ಲದಿರುವುದರಿಂದ ಖಾಸಗಿ ಸಂಸ್ಥೆಗಳಿAದ ಲಸಿಕೆ ಹಾಕಿಸಿಕೊಳ್ಳುತ್ತಿರು ವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದುವರೆಗೆ ೮,೭೮೧ ಮಂದಿ ಖಾಸಗಿ ಸಂಸ್ಥೆಗಳಿAದ ಲಸಿಕೆ ಪಡೆದುಕೊಂಡಿದ್ದಾರೆ.