ಮಡಿಕೇರಿ, ಅ. ೫: ಮಡಿಕೇರಿ ಬಳಿಯ ತಾಳತ್‌ಮನೆಯಲ್ಲಿರುವ ದುರ್ಗಾಭಗವತಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ ತಾ. ೭ ರಿಂದ ೧೫ ರವರೆಗೆ ಪ್ರತಿ ದಿನ ಬೆಳಿಗ್ಗೆ ೯ ಗಂಟೆಗೆ ವಿಶೇಷ ಅಲಂಕಾರ ಪೂಜೆಯನ್ನು ಏರ್ಪಡಿಸಲಾಗಿದೆ. ಭಕ್ತಾಭಿಮಾನಿಗಳು ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಶ್ರೀ ಮಹಾಕಾಳಿ, ಶ್ರೀ ಮಾಹಾಲಕ್ಷಿö್ಮಯಾದ ಶ್ರೀ ದುರ್ಗಾಭಗವತಿ ದೇವಿಗೆ ವಿಶೇಷ ಅಲಂಕಾರ ಪೂಜೆಯನ್ನು ಸಲ್ಲಿಸಲು ಅವಕಾಶವಿರುತ್ತದೆ. ಅಲಂಕಾರ ಪೂಜೆಯನ್ನು ಮಾಡಿಸುವ ಭಕ್ತರು ತಮ್ಮ ಸೇವೆಯ ದಿನಾಂಕವನ್ನು ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೪೪೯೪೭೬೧೩೮, ೯೪೪೮೩೦೩೬೫೩, ೯೪೪೯೯೩೩೪೫೭, ೯೪೪೯೬೭೯೪೬೦ ಸಂಪರ್ಕಿಸಬಹುದಾಗಿದೆ.