ಪೊನ್ನಂಪೇಟೆ.ಅ.೪: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ೨೦೨೧-೨೨ನೇ ಸಾಲಿನ ಮೊದಲನೇ ಹಂತದ ವಾರ್ಡ್ ಸಭೆಗಳ ದಿನಾಂಕ ನಿಗದಿಯಾಗಿದ್ದು ತಾ. ೭ ರಿಂದ ೧೧ ರವರೆಗೆ ವಿವಿಧ ವಾರ್ಡ್ಗಳ ಸಭೆ ನಡೆಯಲಿವೆ. ೧ನೇ ವಾರ್ಡಿನ ಸಭೆಯು ತಾ.೭ರಂದು ಬೆಳಿಗ್ಗೆ ೧೧ ಗಂಟೆಗೆ ಎಂ.ಜಿ. ಸುಮಿತ ಅಧ್ಯಕ್ಷತೆಯಲ್ಲಿ ಎಂ.ಜಿ. ನಗರದ ಸಮುದಾಯ ಭವನದಲ್ಲಿ, ೨ನೇ ವಾರ್ಡಿನ ಸಭೆಯು ತಾ. ೯ ರಂದು ಮಧ್ಯಾಹ್ನ ೩ ಗಂಟೆಗೆ ಅಮ್ಮತ್ತೀರ ಆರತಿ ಸುರೇಶ್ ಅಧ್ಯಕ್ಷತೆಯಲ್ಲಿ ಗಣಪತಿನಗರದ ಕೊಡವ ಕೂಟ ಕಟ್ಟಡದಲ್ಲಿ, ೩ನೇ ವಾರ್ಡಿನ ಸಭೆಯು ತಾ. ೧೧ ರಂದು ಮಧ್ಯಾಹ್ನ ೪ ಗಂಟೆಗೆ ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಜನತಾ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ, ೪ನೇ ವಾರ್ಡಿನ ಸಭೆಯು ತಾ .೮ ರಂದು ಮಧ್ಯಾಹ್ನ ೩ ಗಂಟೆಗೆ ಅಣ್ಣೀರ ಎಂ. ಹರೀಶ್ ಅಧ್ಯಕ್ಷತೆಯಲ್ಲಿ ತ್ಯಾಗರಾಜ ರಸ್ತೆಯ ಕೆಳಭಾಗದ ಅಂಗನವಾಡಿ ಕೇಂದ್ರದಲ್ಲಿ, ೫ನೇ ವಾರ್ಡಿನ ಸಭೆಯು ತಾ. ೭ ರಂದು ಮಧ್ಯಾಹ್ನ ೪.೩೦ ಗಂಟೆಗೆ ಡಿ.ವಿ. ದಶಮಿ ಅಧ್ಯಕ್ಷತೆಯಲ್ಲಿ ಕೊಡವ ಸಮಾಜದ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಹಾಗೂ ೬ ನೇ ವಾರ್ಡಿನ ಸಭೆಯು ತಾ. ೮ ರಂದು ಮಧ್ಯಾಹ್ನ ೪ ಗಂಟೆಗೆ ವಿಮಲ ಅಧ್ಯಕ್ಷತೆಯಲ್ಲಿ ಕೃಷ್ಣ ಕಾಲೋನಿ ರಾಮಮಂದಿರದಲ್ಲಿ ನಡೆಯಲಿದೆ ಎಂದು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಪ್ರಕಟಣೆ ತಿಳಿಸಿದೆ.