ಟಿ ದಶಮಂಟಪ ಸಮಿತಿ ಸಭೆಯಲ್ಲಿ ನಿರ್ಧಾರ ಟಿ ನಗರ ಪ್ರದಕ್ಷಿಣೆ ಮಾಡಲಿವೆ ಕರಗಗಳು
ಮಡಿಕೇರಿ, ಅ. ೪: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವದಲ್ಲಿ ಈ ಬಾರಿ ಹತ್ತು ಮಂಟಪಗಳಿಗೆ ತಲಾ ೧.೫೦ ಲಕ್ಷ, ನಾಲ್ಕು ಕರಗÀ ಸಮಿತಿಗಳಿಗೆ ತಲಾ ೧.೫೦ ಲಕ್ಷ ಅನುದಾನವನ್ನು ಒದಗಿಸಿ ಕೊಡುವಂತೆ ದಸರಾ ಸಮಿತಿಯನ್ನು ಮನವಿ ಮಾಡಲು ದಶಮಂಟಪ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆದ ದಶಮಂಟಪ ಸಮಿತಿ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ ಉಮೇಶ್ ಸುಬ್ರಮಣಿ ದಸರಾಗೆ ಮೀಸಲಾಗಿರುವ ೨೫ ಲಕ್ಷ ಹಣದಲ್ಲಿ ಮಂಟಪ ಹಾಗೂ ಕರಗ ಸಮಿತಿಗಳಿಗೆ ತಲಾ ೧.೫೦ ಲಕ್ಷ ಹಣವನ್ನು ನೀಡಬೇಕೆಂದು ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್ ಅವರ ಗಮನ ಸೆಳೆದರು. ಇದಕ್ಕೆ ಧನಿಗೂಡಿಸಿದ ಮಂಟಪ ಹಾಗೂ ಕರಗ ಸಮಿತಿಗಳ ಪದಾಧಿಕಾರಿಗಳು ಕೊರೊನಾದಿಂದ ಸಾಂಪ್ರದಾಯಿಕ ಆಚರಣೆ ಹಿನ್ನೆಲೆಯಲ್ಲಿ ವಂತಿಕೆ ಸಂಗ್ರಹವೂ ಅಸಾಧ್ಯವಾದ್ದರಿಂದ ದಶಮಂಟಪ ಸಮಿತಿಯ ಬೇಡಿಕೆಗೆ ದಸರಾ ಸಮಿತಿ ಸ್ಪಂದಿಸಬೇಕೆAದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್. ರಮೇಶ್ ನಗರದ ಹತ್ತು ದೇವಾಲಯಗಳ ಮುಖ್ಯ ರಸ್ತೆ, ಪ್ರಮುಖ ಕಟ್ಟಡಕ್ಕೆ ದೀಪಲಂಕಾರ ಮಾಡುವುದರ ಜೊತೆಗೆ ಪ್ರಮುಖ ದೇವಾಲಯಗಳಲ್ಲಿ ದಸರಾ ಸಮಿತಿಯಿಂದ ಪೂಜೆ ಸಲ್ಲಿಸುವ ಕ್ರಮವನ್ನು ಈ ಬಾರಿಯೂ ಮುಂದುವರಿಸಲಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನು ಗಮನಿಸಿ ಉಳಿದ ಹಣವನ್ನು
(ಮೊದಲ ಪುಟದಿಂದ) ಮಂಟಪ ಹಾಗೂ ಕರಗ ಸಮಿತಿಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕೆಂಬುದು ದಸರಾ ಸಮಿತಿಯ ಅಭಿಪ್ರಾಯವಾಗಿದ್ದು, ದಶಮಂಟಪ ಹಾಗೂ ಕರಗ ಸಮಿತಿಗಳ ಬೇಡಿಕೆಯನ್ನು ದಸರಾ ಸಮಿತಿಯ ಮುಂದಿಟ್ಟು ಸ್ಪಂದಿಸುವ ಭರವಸೆ ನೀಡಿದರು.
ಒಂದು ಟ್ರಾö್ಯಕ್ಟರ್ - ಒಂದು ಹೆಚ್ಚುವರಿ ವಾಹನ
ಸಾಂಪ್ರದಾಯಿಕ ದಸರಾ ಆಚರಣೆ ಹಿನ್ನೆಲೆಯಲ್ಲಿ ಈ ಬಾರಿ ಮಂಟಪಗಳು ತಲಾ ಒಂದೊAದು ಟ್ರಾö್ಯಕ್ಟರ್ ಹಾಗೂ ಧ್ವನಿವರ್ಧಕಕ್ಕೆ ಒಂದೊAದು ಹೆಚ್ಚುವರಿ ವಾಹನವನ್ನು ಬಳಸಿಕೊಳ್ಳಲಿವೆ. ರಾತ್ರಿ ಶೋಭಾಯಾತ್ರೆ ನಡೆಸಿ ಬೆಳಗ್ಗಿನ ಜಾವ ಬನ್ನಿ ಕಡಿಯಲಾಗುತ್ತದೆ. ಇದು ದಶಮಂಟಪ ಸಮತಿಯ ತೀರ್ಮಾನ ಎಂದು ಉಮೇಶ್ ಸುಬ್ರಮಣಿ ಹೇಳಿದ್ದು, ಅಲ್ಲದೇ ವಿಜಯದಶಮಿ ಯಂದು ಮದ್ಯದ ಅಂಗಡಿಗಳನ್ನು ಹೊರತುಪಡಿಸಿ ಉಳಿದಂತೆ ರಾತ್ರಿ ಹೊಟೇಲ್ ಹಾಗೂ ಅಂಗಡಿಗಳು ತೆರೆಯಲು ಅವಕಾಶ ನೀಡಬೇಕು ಎಂದರಲ್ಲದೆ ಈ ಎಲ್ಲ ಕೋರಿಕೆಗಳನ್ನು ದಸರಾ ಸಮಿತಿಯ ಸಭೆಯಲ್ಲೂ ಮುಂದಿಡಲಾಗುವುದೆAದರು.
ಸಭೆಯಲ್ಲಿ ದಶಮಂಟಪ ಸಮಿತಿ ಪದಾಧಿಕಾರಿಗಳಾದ ಜಿ.ವಿ. ರವಿಕುಮಾರ್, ಕೆ.ಟಿ. ಪ್ರಶಾಂತ್, ಭೌತಮ್ ದಸರಾ ಸಮಿತಿ ಪದಾಧಿಕಾರಿ ಗಳಾದ ಗಜೇಂದ್ರ, ಡಿಶು, ಕೃಷ್ಣ, ಜೀವನ್ ಮತ್ತಿತರರಿದ್ದರು.
ಕರಗ ಉತ್ಸವ
ಈ ಬಾರಿ ಕರಗಗಳು ನಗರ ಪ್ರದಕ್ಷಿಣೆ ಮಾಡಲಿದ್ದು, ಕರಗ ಸಮಿತಿಗಳು ಈ ನಿಟ್ಟಿನಲ್ಲಿ ತೀರ್ಮಾನ ಕೈಗೊಂಡು ತಾ. ೭ರಂದು ನಗರದ ಪಂಪಿನ ಕೆರೆಯಿಂದ ಸಂಜೆ ಸುಮಾರು ೬ ಗಂಟೆಗೆ ಸಾಂಪ್ರದಾಯಿಕ ಪೂಜೆಯೊಂದಿಗೆ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯ, ದಂಡಿನ ಮಾರಿಯಮ್ಮ ದೇವಾಲಯ, ಕೋಟೆ ಮಾರಿಯಮ್ಮ ದೇವಾಲಯ ಹಾಗೂ ಕಂಚಿಕಾಮಾಕ್ಷಿ ದೇವಾಲಯಗಳ ಕರಗಗಳು ಪಂಪಿನ ಕೆರೆಯಿಂದ ಹೊರಟು ಬನ್ನಿ ಮಂಟಪದ ಮೂಲಕ ಕೋದಂಡ ರಾಮ ದೇವಾಲಯಕ್ಕೆ ತೆರಳಿ ಅಲ್ಲಿಂದ ಬಸವೇಶ್ವರ ದೇವಾಲಯ, ಚೌಡೇಶ್ವರಿ ದೇವಾಲಯ, ಕನ್ನಿಕಾಪರಮೇಶ್ವರಿ ದೇವಾಲಯ ಮುಖಾಂತರ ಪೇಟೆ ಶ್ರೀರಾಮಮಂದಿರ ದೇವಾಲಯಕ್ಕೆ ಬಂದು ನಂತರ ತಮ್ಮ ತಮ್ಮ ದೇವಾಲಯಗಳಿಗೆ ತೆರಳಲಿವೆ.
ಕರಗ ಸಾಗುವ ಮಾರ್ಗ
ಕುಂದುರುಮೊಟ್ಟೆ ಚೌಟಿಮಾರಿಯಮ್ಮ ದೇವಾಲಯ ಕರಗ : ತಾ. ೮ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಹೊರಟು ಜಿ.ಟಿ. ರಸ್ತೆ, ಅಶ್ವಿನಿ ಆಸ್ಪತ್ರೆ, ಶಾಂತಿನಿಕೇತನ, ಜಯನಗರ, ಬಾಣೆಮೊಟ್ಟೆ, ಪುಟಾಣಿನಗರ, ದೇಚೂರು, ತಾ.೯ರಂದು ಓಂಕಾರೇಶ್ವರ ದೇವಾಲಯ ರಸ್ತೆ, ಸಿ.ವಿ.ಎಸ್., ಗೌಡ ಸಮಾಜ, ದಾಸವಾಳ, ತಾ. ೧೧ರಂದು ಪೆನ್ಷನ್‌ಲೇನ್, ಗೌಳಿಬೀದಿ, ಕೊಹಿನೂರು ರಸ್ತೆ, ತಾ. ೧೨ರಂದು ಸ್ಟೋನ್ ಹಿಲ್ ಸುತ್ತಮುತ್ತ, ಡಿ.ಎ.ಆರ್. ಕ್ವಾಟ್ರರ್ಸ್, ಕಾನ್ವೆಂಟ್ ಜಂಕ್ಷನ್, ಕಾವೇರಿ ಲೇಔಟ್.
ಶ್ರೀ ದಂಡಿನ ಮಾರಿಯಮ್ಮ ದೇವಾಲಯ ಕರಗ : ತಾ. ೮ರಂದು ಮಧ್ಯಾಹ್ನ ೧ ಗಂಟೆಗೆ ಕುಂದುರುಮೊಟ್ಟೆ ದೇವಾಲಯ, ಮುನೀಶ್ವರ ದೇವಾಲಯ, ಬಾಣೆಮೊಟ್ಟೆ, ದೇಚೂರು, ತಾ. ೯ರಂದು ದಾಸವಾಳ, ರಾಣಿಪೇಟೆ, ವಿನಾಯಕ ರೈಸ್ ಮಿಲ್, ಎಲ್‌ಐಸಿ, ತಾ. ೧೧ರಂದು ಪೆನ್ಷನ್‌ಲೇನ್, ಕೋm ೆಮಾರಿಯಮ್ಮ ದೇವಾಲಯ, ಹೊಸಬಡಾವಣೆ, ಗೌಳಿಬೀದಿ.
ಶ್ರೀ ಕೋಟೆ ಮಾರಿಯಮ್ಮ ದೇವಾಲಯ ಕರಗ : ತಾ. ೮ರಂದು ಮಧ್ಯಾಹ್ನ ೧೨.೩೦ ಗಂಟೆಗೆ ಶಾಂತಿನಿಕೇತನ, ಸುದರ್ಶನ್ ಅತಿಥಿ ಗೃಹ ಕೆಳಭಾಗ, ಜಯನಗರ, ಬ್ರಾಹ್ಮಣರ ಬೀದಿ, ಅಶ್ವತ್ಥಕಟ್ಟೆ, ದೇವೂರು ರಾಮಮಂದಿರ, ತಾ. ೯ರಂದು ಓಂಕಾರೇಶ್ವರ ದೇವಾಲಯ, ಬ್ರಾಹ್ಮಣರ ಬೀದಿ, ದೇಚೂರು, ಜೂನಿಯರ್ ಕಾಲೇಜು ರಸ್ತೆ, ದಾಸವಾಳ, ಅಪ್ಪಚ್ಚಕವಿ ರಸ್ತೆ, ಕೈಗಾರಿಕಾ ಬಡಾವಣೆ, ಡೈರಿ ಫಾರಂ ರಸ್ತೆ, ರಿಮ್ಯಾಂಡ್ ಹೋಂ ಹಿಂಭಾಗ, ಎಲ್‌ಐಸಿ ಕಚೇರಿ, ರೇಸ್‌ಕೋರ್ಸ್ ರಸ್ತೆ, ತಾ. ೧೦ರಂದು ಪೆನ್ಷನ್‌ಲೇನ್, ರಾಜ್‌ದರ್ಶನ್ ಹಿಂಭಾಗ, ಮುನೀಶ್ವರ ದೇವಾಲಯ, ಚೌಟಿ ಮಾರಿಯಮ್ಮ ದೇವಾಲಯ, ಜಡ್ಜ್ ಕ್ವಾಟ್ರರ್ಸ್, ಸ್ಟಿವರ್ಟ್ ಹಿಲ್, ಪ್ರಸನ್ನ ಗಣಪತಿ ದೇವಾಲಯ, ಹೊಸ ಬಡಾವಣೆ, ಗೌಳಿಬೀದಿ.
ಶ್ರೀ ಕಂಚಿಕಾಮಾಕ್ಷಿ ದೇವಾಲಯ ಕರಗ : ತಾ. ೮ರಂದು ಮಧ್ಯಾಹ್ನ ೧೨ ಗಂಟೆಗೆ ಶಾಂತಿನಿಕೇತನ, ಬ್ರಾಹ್ಮಣರ ಬೀದಿ, ದೇಚೂರು, ಪುಟಾಣಿನಗರ, ತಾ. ೯ರಂದು ದೇಚೂರು ಹಿಂಭಾಗ, ಜೂನಿಯರ್ ಕಾಲೇಜು ರಸ್ತೆ, ದಾಸವಾಳ ಪೆನ್ಷನ್‌ಲೇನ್, ತಾ. ೧೦ರಂದು ರಾಣಿಪೇಟೆ, ಮೈತ್ರಿ ಸುತ್ತಮುತ್ತ, ರೇಸ್ ಕೋರ್ಸ್ ರಸ್ತೆ, ತಾ. ೧೧ರಂದು ಹೊಸ ಬಡಾವಣೆ, ಗೌಳಿಬೀದಿ ಸುತ್ತಮುತ್ತ.
ಉಳಿದಂತೆ ತಾ. ೧೫ರ ನವರಾತ್ರಿಯಂದು ರಾತ್ರಿ ನಾಲ್ಕು ಕರಗ ದೇವತೆಗಳು ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ದಸರಾ ಉತ್ಸವಕ್ಕೆ ತೆರೆ ಬೀಳಲಿದೆ.