ಮಡಿಕೇರಿ, ಅ. ೪ : ಪ್ರಸಕ್ತ(೨೦೨೧-೨೨) ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ ೪ ವರ್ಷದ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸವಿತಾ ಸಮಾಜದ ವಿದ್ಯಾರ್ಥಿಗಳಿಗೆ ಪಾರಂಪರಿಕ ಕಲೆಗಳಾದ ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳಲ್ಲಿ ೪ ವರ್ಷದ ತರಬೇತಿಯನ್ನು ಉಚಿತ ಊಟ, ವಸತಿ ಶಿಕ್ಷಣ ಮತ್ತು ತರಬೇತಿ ಭತ್ಯೆಯೊಂದಿಗೆ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ನೀಡಲಾಗುವುದು.

ಸವಿತಾ ಸಮಾಜದ ಆಸಕ್ತ ವಿದ್ಯಾರ್ಥಿಗಳು ಅರ್ಜಿ ನಮೂನೆಯನ್ನು ಕೊಡಗು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌAಡ್, ಮಡಿಕೇರಿ ಈ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅಕ್ಟೋಬರ್, ೧೬ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕೊಡಗು ಜಿಲ್ಲಾ ಕಚೇರಿ ದೂ.ಸಂ.೦೮೨೭೨-೨೯೫೬೨೮ ಮತ್ತು ವೆಬ್‌ಸೈಟ್ hಣಣಠಿs://bಛಿತಿಜ.ಞಚಿಡಿಟಿಚಿಣಚಿಞಚಿ.gov.iಟಿ ಅನ್ನು ನೋಡುವುದು. ಸಹಾಯವಾಣಿ ಸಂಖ್ಯೆ:೮೦೫೦೭೭೦೦೦೪ ನ್ನು ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅವರು ತಿಳಿಸಿದ್ದಾರೆ.