ಕೂಡಿಗೆ, ಅ. ೫: ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಗುಡುಗು ಮಿಂಚು ಸಹಿತ ಕೂಡಿಗೆ, ಹೆಬ್ಬಾಲೆ ವ್ಯಾಪ್ತಿಯಲ್ಲಿ ಎರಡು ಇಂಚಿಗೂ ಹೆಚ್ಚು ಮಳೆ ಸುರಿಯಿತು. ಒಂದೂವರೆ ಗಂಟೆಗಳ ಕಾಲ ಕೂಡಿಗೆ, ಹೆಬ್ಬಾಲೆ, ತೊರೆನೂರು, ಸೀಗೆಹೊಸೂರು, ಹಾರಂಗಿ, ಮದಲಾಪುರ, ಹುದುಗೂರು, ಕೂಡುಮಂಗಳೂರು ವ್ಯಾಪ್ತಿಯಲ್ಲಿ ಭಾರೀ ಗುಡುಗು ಸಹಿತ ಮಳೆ ಸುರಿಯಿತು. ಮಳೆಯಿಂದಾಗಿ ವಾಹನಗಳ ಚಾಲನೆಗೂ ಅಡಚಣೆ ಉಂಟಾಯಿತು.