ಭಾಗಮಂಡಲ, ಅ. ೪: ಕಾವೇರಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ಇಂದು ಭಾಗಮಂಡಲದಲ್ಲಿ ಕಟ್ಟು ವಿಧಿಸುವ ಕಾರ್ಯ ಜರುಗಿತು.
ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಭಗಂಡೇಶ್ವರ ದೇವಾಲಯ ತಕ್ಕರು ಹಾಗೂ ತಲಕಾವೇರಿ ದೇವಾಲಯ ತಕ್ಕರು, ಗ್ರಾಮದ ಹಿರಿಯರು ಹಾಗೂ ನಾಲ್ಕು ಗ್ರಾಮದ ದೇವಾಲಯಗಳ ತಕ್ಕ ಮುಖ್ಯಸ್ಥರು, ಅರ್ಚಕರು ಸೇರಿ ಸ್ಥಳೀಯರಾದ ರವಿ ಹೆಬ್ಬಾರ್ ಮನೆಗೆ ತೆರಳಿ ಬಾಳೆಗೊನೆ ಕಡಿದು ನಾದಸ್ವರ ಮೆರವಣಿಗೆ ಮೂಲಕ ದೇವಾಲಯದ ಸನ್ನಿಧಿಗೆ ಬಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ ಕಟ್ಟಿ (ಕಟ್ಟು ಬೀಳುವುದು) ಆಜ್ಞಾ ಮುಹೂರ್ತ ಮಾಡಲಾಯಿತು.
ಬೆಳಿಗ್ಗೆ ೧೦.೩೫ಕ್ಕೆ ಆಜ್ಞಾ ಮುಹೂರ್ತ ನೆರವೇರಿತು. ತಾ. ೧೪ ರಂದು ಮಧ್ಯಾಹ್ನ ೧೨.೫ ಗಂಟೆಗೆ ಧನುರ್ ಲಗ್ನದಲ್ಲಿ ಅಕ್ಷಯಪಾತ್ರೆ ಇರಿಸುವುದು, ೧.೨೫ಕ್ಕೆ ಕಾಣಿಕೆ ಡಬ್ಬಿ ಇರಿಸುವ ಕಾರ್ಯಕ್ರಮಗಳು ನಡೆಯಲಿವೆ.
(ಮೊದಲ ಪುಟದಿಂದ) ಇಂದಿನಿAದ ನಾಡಿನಲ್ಲಿ ಮಾಂಸ ಸೇವನೆ, ಮರ ಕಡಿಯುವುದು, ಬಲಿ ಹಿಂಸಾಕೃತ್ಯಗಳು ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನಿಷೇಧ ಹೇರಲಾಗಿದೆ.
ಈ ಸಂದರ್ಭ ಭಾಗಮಂಡಲ ಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಅಪ್ಪಾಜಿ, ತಲಕಾವೇರಿ ದೇವಾಲಯ ತಕ್ಕರಾದ ಕೋಡಿ ಮೋಟಯ್ಯ, ಕಾರ್ಯನಿರ್ವಹಣಾಧಿ ಕಾರಿ ಕೃಷ್ಣಪ್ಪ, ರವಿ ಹೆಬ್ಬಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಸದಸ್ಯರಾದ ನಾಗೇಶ್, ಜಯಂತ್ ನಿತ್ಯಾನಂದ, ದುರ್ಗಾವತಿ, ಗೌಡ ಸಮಾಜದ ಅಧ್ಯಕ್ಷ ಕುದುಪಜೆ ಪಳಂಗಪ್ಪ, ಭಾಗಮಂಡಲ ಗ್ರಾಮಸ್ಥರು ಭಾಗವಹಿಸಿದ್ದರು.
ಜಿಲ್ಲಾಧಿಕಾರಿ ಭೇಟಿ: ಜಾತ್ರೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ತಲಕಾವೇರಿಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಅಗತ್ಯ ಮಾಹಿತಿ ಪಡೆದುಕೊಂಡರು.
ಮಾAಸ ಮಾರಾಟ ನಿಷೇಧ: ಭಾಗಮಂಡಲ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ಇಂದಿನಿAದ ನಿಷೇಧಿಸಲಾಗಿದೆ. ತಾ. ೫ ರಿಂದ (ಇಂದಿನಿAದ) ತಾ. ೧೭ರ ತೀರ್ಥೋದ್ಭವದವರೆಗೆ ಭಾಗಮಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನು, ಮಾಂಸ ಮಾರಾಟವನ್ನು ನಿಷೇಧಿಸಲಾಗಿದ್ದು, ಎಲ್ಲಾ ಮೀನು, ಮಾಂಸ ಮಾರಾಟ ಅಂಗಡಿಗಳನ್ನು ಮುಚ್ಚುವಂತೆ ತೆರೆದ ಅಂಗಡಿಗಳಲ್ಲಿ ಮಾರಾಟ ಮಾಡದಂತೆ ಗ್ರಾಮ ಪಂಚಾಯಿತಿಯಿAದ ನೋಟೀಸ್ ಜಾರಿ ಮಾಡಲಾಗಿದೆ. ಭಾವನಾತ್ಮಕ ಸಂಬAಧದೊAದಿಗೆ ಧಾರ್ಮಿಕ ಕಾರ್ಯಗಳು ತೀರ್ಥೋದ್ಭವ ಸಂದರ್ಭದಲ್ಲಿ ನೆರವೇರುವುದರಿಂದ ೧೩ ದಿನಗಳ ಕಾಲ ಎಲ್ಲಾ ಭಕ್ತರು ಸಹಕರಿಸುವಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಮನವಿ ಮಾಡಿದ್ದಾರೆ. -ಕುಯ್ಯಮುಡಿ ಸುನಿಲ್