ಬಾಡಗರಕೇರಿ, ಅ. ೩: ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಸ್ಥಾನದ ಹೊಸ ಆಡಳಿತ ಮಂಡಳಿ ಅಧ್ಯಕ್ಷರಾಗಿ ಬಲ್ಯಮೀದೇರೀರ ಸುರೇಶ, ಕಾರ್ಯದರ್ಶಿಯಾಗಿ ಅಣ್ಣೀರ ಪ್ರತೀಕ್ ಪೊನ್ನಣ್ಣ, ಉಪಾಧ್ಯಕ್ಷರಾಗಿ ಚೋನಿರ ಮಧು ಕಾರ್ಯಪ್ಪ, ಖಜಾಂಚಿಯಾಗಿ ಕಾಯಪಂಡ ಸತು ಚಿಣ್ಣಪ್ಪ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಅಣ್ಣೀರ ಮಂಜುನಾಥ್ (ಸರು), ಚೋನಿರ ಜೀವನ್, ಬಲ್ಯಮೀದೇರಿರ ಸೋಮಯ್ಯ (ಅರುಣ), ಕುಪ್ಪುಡಿರ ಅಯ್ಯಣ್ಣ, ಅಮ್ಮತ್ತೀರ ಗಣೇಶ್, ಮಲ್ಲೇಂಗಡ ಸೂರಜ್ ದೇವಯ್ಯ, ಅಯ್ಯಮಾಡ ಕಿಶೋರ್, ಬಲ್ಯಮೀದೇರಿರ ನವೀನ್, ಮೀದೇರೀರ ವಿಜಯ ನೇಮಕಗೊಂಡಿದ್ದಾರೆ.
ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಬೆಳಗ್ಗೆ ೧೧.೩೦ ಗಂಟೆಯ ಒಳಗೆ ಬಂದು ಟಿಕೆಟ್ ತೆಗೆದುಕೊಳ್ಳಬೇಕು. ನಂತರ ಬಂದ ಭಕ್ತಾದಿಗಳಿಗೆ ಪೂಜೆ ಮಾಡಿಸಲು ಅವಕಾಶವಿರುವುದಿಲ್ಲ. ಭಕ್ತಾದಿಗಳು ಕಡ್ಡಾಯವಾಗಿ ಡ್ರೆಸ್ಕೋಡ್ ಪಾಲಿಸಬೇಕು.
ಹೆಚ್ಚಿನ ಮಾಹಿತಿಗೆ ಅಧ್ಯಕ್ಷರು ೭೭೬೦೧೭೪೫೯೦, ೯೪೪೯೨೫೫೦೧೯, ಕಾರ್ಯದರ್ಶಿ ೮೭೬೨೬೦೪೩೯೭, ೮೧೦೫೪೨೪೦೯೧ ಅವರುಗಳನ್ನು ಸಂಪರ್ಕಿ ಸಬಹುದಾಗಿ ಪ್ರಕಟಣೆ ತಿಳಿಸಿದೆ.