ಮಡಿಕೇರಿ, ಅ. ೪ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಕ್ಟೋಬರ್ ಮಾಹೆಯಲ್ಲಿ ಮಹಿಳಾ ಸಂತಾನಹರಣ ಶಸ್ತçಚಿಕಿತ್ಸಾ ಶಿಬಿರ ನಡೆಯಲಿದೆ.
ತಾ. ೫ ರಂದು (ಇಂದು) ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆ, ತಾ. ೧೧ ರಂದು ಕುಶಾಲನಗರ, ತಾ. ೨೧ ರಂದು ಗೋಣಿಕೊಪ್ಪ, ತಾ. ೨೫ ರಂದು ಸಿದ್ದಾಪುರ, ತಾ. ೨೬ ರಂದು ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಲ್ಯಾಪ್ರೋಸ್ಕೋಪಿಕ್ ಚಿಕಿತ್ಸೆ ಮತ್ತು ತಾ. ೨೨ ರಂದು ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಟ್ಯುಬೆಕ್ಟಮಿ ಚಿಕಿತ್ಸೆ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್ ಅವರು ತಿಳಿಸಿದ್ದಾರೆ.