ಮಡಿಕೇರಿ, ಅ. ೩: ಅಂರ‍್ರಾಷ್ಟಿçÃಯ ವಿಕೋಪ ಅಪಾಯ ತಗ್ಗಿಸುವಿಕೆ ದಿನಾಚರಣೆ ಅಂಗವಾಗಿ ತಾ. ೧೧ ರಂದು ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರವು 'ವಿಕೋಪ ನಿರ್ವಹಣೆಯಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಉಪಯೋಗಗಳು' ವಿಷಯದ ಮೇಲೆ ೧೮ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಸ್ಪರ್ಧಾರ್ಥಿಗಳಿಗೆ ತಮ್ಮ ತಮ್ಮ ಪ್ರಬಂಧಗಳನ್ನು ಎರಡು ರೀತಿಯಲ್ಲಿ ಕಳುಹಿಸಲು ಅವಕಾಶ ನೀಡಲಾಗಿದ್ದು, ಟೈಪ್ ಮಾಡಿ ಇ-ಮೇಲ್ ಮೂಲಕ ವರ್ಡ್ ಪೈಲ್ ಡಾಕ್ಯುಮೆಂಟ್ ಮತ್ತು ಕೈಬರಹದಲ್ಲಿ ಬರೆಯುವವರು ಪೋಸ್ಟ್ ಮೂಲಕ ಕಳುಹಿಸಬಹುದಾಗಿದೆ.

ಪ್ರಬಂಧಗಳನ್ನು ಸ್ವೀಕರಿಸಲು ಕೊನೆಯ ನವೆಂಬರ್, ೧೫ ಆಗಿದೆ. ತರಿಸಿದ ಪ್ರಬಂಧವನ್ನು ಕನ್ನಡ ಅಥವಾ ಇಂಗ್ಲೀಷ್ ಭಾಷೆಗಳಲ್ಲಿ ಡ್ರೆöÊವ್ ಮಾಡಿ ತಿoಡಿಜ ಜoಛಿumeಟಿಣ ಚಿಜಿiesಥಿಅomಠಿeಣiಣioಟಿ@gmಚಿiಟ.ಛಿom ಗೆ ಇ-ಮೇಲ್ ಮಾಡಬೇಕು ಹಾಗೂ ಕೈ ಬರಹದಲ್ಲಿ ಬರೆದ ಪ್ರಬಂಧಗಳ (ಊಚಿಡಿಜ ಛಿoಠಿಥಿ) ಅನ್ನು ಮಾನ್ಯ ಮಹಾ ನಿರ್ದೇಶಕರು, ಆಡಳಿತ ತರಬೇತಿ ಸಂಸ್ಥೆ, ಲಲಿತ ಮಹಲ್ ರಸ್ತೆ, ಮೈಸೂರು-೫೭೦೦೧೧) ಇಲ್ಲಿನ ವಿಳಾಸಕ್ಕೆ ನವೆಂಬರ್, ೧೫ ರ ಸಂಜೆ ೫ ಗಂಟೆಯ ಒಳಗೆ ಕಳುಹಿಸಬೇಕು.

ಕನ್ನಡ ಅಥವಾ ಇಂಗ್ಲೀಷ್ ಭಾಷೆಗಳ ಪ್ರಬಂಧಗಳಿಗೆ ಪ್ರತ್ಯೇಕ ನಗದು ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಮೊದಲ ಬಹುಮಾನ-೧೦ ಸಾವಿರ, ದ್ವಿತೀಯ ಬಹುಮಾನ ರೂ. ೮ ಸಾವಿರ, ತೃತೀಯ ಬಹುಮಾನ ರೂ. ೫ ಸಾವಿರವನ್ನು ಆಡಳಿತ ತರಬೇತಿ ಸಂಸ್ಥೆ ಮೈಸೂರು ಇಲ್ಲಿ ಹಮ್ಮಿಕೊಳ್ಳುವ ಕಾರ್ಯಾಗಾರದಲ್ಲಿ ನೀಡಲಾಗುವುದು.

ಸ್ಪರ್ಧಾರ್ಥಿಗಳು ಸಂಬAಧಪಟ್ಟ ಮಾಹಿತಿಯನ್ನು hಣಣಠಿ://ಚಿಣimಥಿsoಡಿe.gov.iಟಿ ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಸಂಯೋಜಕರು ಮೊ. ೯೭೪೦೭೬೮೯೩೧ ಮತ್ತು ೯೯೦೧೨೧೨೨೧೫ ನ್ನು ಸಂಪರ್ಕಿಸಬಹುದು ಎಂದು ಆಡಳಿತ ತರಬೇತಿ ಸಂಸ್ಥೆಯ ಮಹಾ ನಿರ್ದೇಶಕರು ತಿಳಿಸಿದ್ದಾರೆ.