ಸುಂಟಿಕೊಪ, ಸೆ. ೩: ಕಿರಿದಾದ ರಸ್ತೆಯಿಂದ ದಾರಿ ಬಿಡಲಾಗದೆ ಎರಡು ಭಾರಿ ವಾಹನಗಳು ವಾಲಿದ ಘಟನೆ ಕಂಬಿಬಾಣೆ ಸಮೀಪದ ಉಪ್ಪುತೋಡಿನಲ್ಲಿ ನಡೆದಿದೆ.
ಸುಂಟಿಕೊಪ್ಪದಿAದ ಕೊಡಗರಹಳ್ಳಿ ಕಂಬಿಬಾಣೆ ಮಾರ್ಗವಾಗಿ ರಂಗಸಮುದ್ರದ ಕಿರಿದಾದ ರಸ್ತೆಯಿಂದ ಅವಘಡಗಳು ಆಗಾಗ್ಗೆ ನಡೆಯುತ್ತಿವೆ. ಇದು ವಾಹನ ಚಾಲಕರ ಹಾಗೂ ಪ್ರಯಾಣಿಕರ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನ ಹೆಬ್ಬಾಳದ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಬಸ್ನಲ್ಲಿ ಕೊಡಗಿಗೆ ಆಗಮಿಸುತ್ತಿದ್ದರು, ಸುಂಟಿಕೊಪ್ಪದ ಕಡೆಯಿಂದ ಲಾರಿಯೊಂದು ತೆರಳುತ್ತಿತ್ತು. ರಸ್ತೆ ಕಿರಿದಾಗಿರುವ ಹಿನ್ನೆಲೆ ಎರಡು ವಾಹನಗಳು ದಾರಿ ಬಿಡಲಾಗದೆ ನಿಯಂತ್ರಣ ಕಳೆದುಕೊಂಡು ವಾಲಿಕೊಂಡಿವೆ. ಅದೃಷ್ಟವಶಾತ್ ೨ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ರೀತಿಯ ಘಟನೆಗಳು ಆಗಾಗ್ಗೆ ಸಂಭವಿಸುತ್ತಿರುವುದರಿAದ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಸೂಕ್ತ ಕ್ರಮವಹಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.