ಕುಶಾಲನಗರ, ಅ. ೪: ಕೊಡಗು ಪರಿವರ್ತನಾ ವೇದಿಕೆ ಆಶ್ರಯದಲ್ಲಿ ದೇಶದ ಅಭಿವೃದ್ಧಿಯಲ್ಲಿ ಸಂವಿಧಾನದ ಪಾತ್ರ ಕುರಿತು ಒಂದು ದಿನದ ಕಾರ್ಯಾಗಾರ ಕುಶಾಲನಗರದಲ್ಲಿ ನಡೆಯಿತು.
ಸ್ಥಳೀಯ ಖಾಸಗಿ ಸಭಾಂಗಣ ದಲ್ಲಿ ನಡೆದ ಕಾರ್ಯಾಗಾರವನ್ನು ಹಾಸನ ಜಿಲ್ಲೆಯ ಗ್ರಾಹಕರ ಆಯೋಗದ ಅಧ್ಯಕ್ಷ ಎ.ಲೋಕೇಶ್ ಕುಮಾರ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕಿದೆ. ಸಂವಿಧಾನದ ಆಶಯದಂತೆ ಜೀವಿಸುವ ಮೂಲಕ ನಮಗೆ ದೊರಕಿರುವ ಸ್ವಾತಂತ್ರ‍್ಯಕ್ಕೆ ಗೌರವ ಸಲ್ಲಿಸುವಂತಾಗಬೇಕಿದೆ ಎಂದರು.
ಕೊಡಗು ಪರಿವರ್ತನಾ ವೇದಿಕೆ ಸಂಯೋಜಕ ವಕೀಲ ಕೆ.ಎಂ. ಕುಂಞ ಅಬ್ದುಲ್ಲಾ ಮಾತನಾಡಿ, ಜಿಲ್ಲೆಯಲ್ಲಿ ಸಮಾನ ಮನಸ್ಕರ ಬಳಗ ರಚಿಸಿ ಆ ಮೂಲಕ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಇಂದಿನ ಯುವ ಪೀಳಿಗೆಗೆ ಸುಂದರ, ನೆಮ್ಮದಿಯ ಸಮಾಜ ಕಟ್ಟುವಲ್ಲಿ ವೇದಿಕೆ ಮುಂದಾಗಲಿದೆ ಎಂದರು.
ಹಾಸನ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ
ಸಿ.ಎಂ. ಮಹಾಲಿಂಗಯ್ಯ ಮಾತನಾಡಿದರು.
ಈ ಸಂದರ್ಭ ಬೆಂಗಳೂರಿನ ಅಕ್ಕ ಐಎಎಸ್ ಅಕಾಡೆಮಿ ಸ್ಥಾಪಕರಾದ ಡಾ. ಶಿವಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ್, ಜಾನಕಿ ಮತ್ತಿತರರು ಇದ್ದರು.