ಮಡಿಕೇರಿ, ಅ. ೪: ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ ದುಬಾರೆ. ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಜಲಕ್ರೀಡೆ (ರಿವರ್ ರ‍್ಯಾಫ್ಟಿಂಗ್) ಇದೀಗ ಪುನರಾರಂಭ ಗೊಂಡಿದ್ದು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ವಿಧಿಸಿದ್ದ ಲಾಕ್‌ಡೌನ್‌ನಿಂದ, ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿತ್ತು.

ಅನ್‌ಲಾಕ್ ನಂತರ ಜಿಲ್ಲೆಯ ಪ್ರವಾಸಿ ತಾಣಗಳಿಗೆ, ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿತ್ತು. ಆದರೆ ಕೋವಿಡ್ ನಿಯಮಗಳÀÄ ಉಲ್ಲಂಘನೆಯಾಗುತ್ತಿದೆ ಎಂದು ಸರ್ಕಾರ ರಾಜ್ಯದಾದ್ಯಂತ ಜಲಕ್ರೀಡೆಗೆ ಜುಲೈ ತಿಂಗಳಲ್ಲಿ ನಿರ್ಬಂಧ ವಿಧಿಸಿತು. ಇದರಿಂದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾದ ದುಬಾರೆ, ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿತ್ತು. ಇದೀಗ ಮತ್ತೆ ಜಲಕ್ರೀಡೆಗೆ ಅವಕಾಶ ನೀಡಿದ್ದು, ನಷÀ್ಟದ ಸುಳಿಯಲ್ಲಿ ಸಿಲುಕಿದ್ದ, ರ‍್ಯಾಫ್ಟಿಂಗ್ ಮಾಲೀಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

ರಸ್ತೆ ಕಾಮಗಾರಿಯಿಂದ ತೊಂದರೆ

ಗುಡ್ಡೆಹೊಸೂರು-ಕಬ್ಬಿನಗದ್ದೆ ರಸ್ತೆಯಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸೆಪ್ಟೆಂಬರ್ ೨೨ ರಿಂದ ನವೆಂಬರ್ ೨ ರವರೆಗೆ ನಿರ್ಬಂಧಿಸಲಾಗಿದೆ. ಇದರಿಂದ ಪ್ರವಾಸಿಗರಿಗೆ ದುಬಾರೆಗೆ ತೆರಳಲು ಅನಾನುಕೂಲವಾಗಿದೆ.

ಕುಶಾಲನಗರ ಮಾರ್ಗವಾಗಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು, ಕುಶಾಲನಗರ-ಕೊಡಗರಹಳ್ಳಿ-ಕಂಬಿಬಾಣೆ- ರಂಗಸಮುದ್ರ ಮಾರ್ಗವಾಗಿ ದುಬಾರೆ ತಲುಪಬೇಕಾ ಗಿದೆ. ಆದರೆ ಗುಂಡಿಗಳಿAದ ಕೂಡಿರುವ ಚಿಕ್ಲಿಹೊಳೆ-ಕಂಬಿಬಾಣೆ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಗಳು ಬೃಹತ್ ಗುಂಡಿಗಳಿAದ ಕೂಡಿದ್ದು, ಈ ರಸ್ತೆಯಲ್ಲಿ ವಾಹನ ಚಲಾಯಿಸಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದಾರೆ.

ಮಡಿಕೇರಿ ಭಾಗದಿಂದ ದುಬಾರೆಗೆ ತೆರಳಲು ಪ್ರವಾಸಿಗರಿಗೆ ಮಡಿಕೇರಿ-ಚೆಟ್ಟಳ್ಳಿ-ಕಂಡಕರೆ- ವಾಲ್ನೂರು ಹತ್ತಿರದ ಮಾರ್ಗವಾಗಿದೆ.

ರಸ್ತೆ ಕಾಮಗಾರಿ ನಡೆಯುತ್ತಿರು ವದರಿಂದ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ,ದುಬಾರೆಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ದುಬಾರೆ ಪ್ರವಾಸಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ೧.೦೫ ಕಿಲೋಮೀಟರ್ ದೂರದವರೆಗೆ ಮಾತ್ರ ರ‍್ಯಾಫ್ಟಿಂಗ್ ಅನ್ನು ಸೀಮಿತಿಗೊಳಿಸಲಾಗಿದೆ.

ರಸ್ತೆ ಕಾಮಗಾರಿ ಮುಗಿದ ನಂತರ, ವೈಟ್ ವಾಟರ್ ರ‍್ಯಾಫ್ಟಿಂಗ್ ಮುಂದುವರಿಸಲು ದುಬಾರೆ, ರ‍್ಯಾಫ್ಟಿಂಗ್ ಮತ್ತು ಅಡ್ವೆಂಚರ್ ಮಾಲೀಕರು ನಿರ್ಧರಿಸಿದ್ದಾರೆ.

-ಕೆ.ಎಂ ಇಸ್ಮಾಯಿಲ್ ಕಂಡಕರೆ