ಮಡಿಕೇರಿ, ಅ. ೪: ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿಯನ್ನು ಜಿಲ್ಲೆಯ ವಿವಿಧೆಡೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರಮದಾನದ ಮೂಲಕ ಗಾಂಧಿ ಹಾಗೂ ಶಾಸ್ತಿç ಅವರ ಸ್ಮರಣೆ ಮಾಡಲಾಯಿತು.ಗೋಣಿಕೊಪ್ಪ : ಇಲ್ಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಸರ್ವ ಧರ್ಮ ಪ್ರಾರ್ಥನೆಯನ್ನು ಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕರು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಭಗವದ್ಗೀತೆ, ಬೈಬಲ್, ಕುರಾನ್ ಮತ್ತು ಜೈನ ಗ್ರಂಥಗಳ ಸಾಲುಗಳನ್ನು ವಿದ್ಯಾರ್ಥಿಗಳು ಪಠಿಸಿದರು. ತದನಂತರ ಭಜನೆಗಳು, ಭಾಷಣಗಳು ನಡೆದವು. ಕಾರ್ಯಕ್ರಮ ದಲ್ಲಿ ಶಾಲೆಯ ಪ್ರಾಂಶುಪಾಲರು ದಿನದ ಮಹತ್ವದ ಕುರಿತು ಮಾತನಾಡಿದರು. ಗಾಂಧೀಜಿಯವರ ಸರಳ ಜೀವನ ಮತ್ತು ಆದರ್ಶ ತತ್ವಗಳು ನಮಗೆ ಎಂದೆAದಿಗೂ ದಾರಿ ದೀಪಗಳು. ಅವುಗಳನ್ನು ಮೈಗೂಡಿಸಿಕೊಳ್ಳೋಣ ಎಂದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವರ್ಗ, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಬೋಜಮ್ಮ ನಿರೂಪಿಸಿದರು.

*ಗೋಣಿಕೊಪ್ಪ : ಗಾಂಧಿ ಜಯಂತಿಯ ಪ್ರಯುಕ್ತ ನಡಿಕೇರಿ ಗ್ರಾಮದ ತಲಬಲೀಶ್ವರ ಯುವಕ ಸಂಘದ ವತಿಯಿಂದ ಗ್ರಾಮದ ಅಂಬಲ, ದೇವಸ್ಥಾನವನ್ನು ಸ್ವಚ್ಛಗೊಳಿಸಲಾಯಿತು. ಅಧ್ಯಕ್ಷ ಜೀವನ್ ಮತ್ತು ಕಾರ್ಯದರ್ಶಿ ಉಮೇಶ್ ಅವರ ಮುಂದಾಳತ್ವದಲ್ಲಿ ಸದಸ್ಯರುಗಳಾದ ಉದಯ, ಸುನಿಲ್, ಮಿಲನ್‌ಉತ್ತಪ್ಪ, ರೇಣ ಬೋಪಣ್ಣ, ಮಂದಣ್ಣ, ಬಬಿನ್ ಪೆಮ್ಮಯ್ಯ, ಜಾಲಮಾಚಯ್ಯ, ಸಂಜುಕುಶಾಲಪ್ಪ, ಮನುದೇವಯ್ಯ, ರೋಹನ್ ಬೋಪಣ್ಣ, ರಾಜೀವ್, ಅಪ್ಪಚ್ಚು, ಸ್ಕೇಟಿ ಮಂದಣ್ಣ, ಕಿಶನ್ ಪೂಣಚ್ಚ, ಗಗನ್ ಗಣಪತಿ, ಹನಿ ಪೂವಯ್ಯ, ಕವನ್ ಕಾವೇರಪ್ಪ ಶ್ರಮದಾನದಲ್ಲಿ ಭಾಗಿಯಾದರು. ನಾಪೋಕ್ಲು: ಇಲ್ಲಿನ ಶ್ರೀ ರಾಮಟ್ರಸ್ಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಕಲ್ಯಾಟಂಡ ಶಾರದಾ ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಪ್ರಾಂಶುಪಾಲ ಕಲ್ಯಾಟಂಡ ಪೂಣಚ್ಚ ಗಾಂಧೀಜಿ ಅವರ ಅಹಿಂಸಾತತ್ವ ಸರಳ ಜೀವನದ ಬಗ್ಗೆ ಹಾಗೂ ಶಾಸ್ತಿç ಅವರ ಆಡಳಿತದ ಬಗ್ಗೆ ಮಾತನಾಡಿದರು. ಶಿಕ್ಷಕರಾದ ಕಾಳಯ್ಯ ಮಹಾತ್ಮ ಗಾಂಧೀಜಿ ಅವರ ಸ್ವಾತಂತ್ರö್ಯ ಹೋರಾಟದ ಕುರಿತು ಹಾಗೂ ಶಾಸ್ತಿç ಅವರ ಬಾಲ್ಯದ ಕುರಿತು ಮಾತನಾಡಿದರು. ಶಿಕ್ಷಕಿ ಚಂದ್ರಕಲಾ ಪ್ರಾರ್ಥಿಸಿದರು, ಶಿಕ್ಷಕಿ ತನುಜಾ ಸ್ವಾಗತಿಸಿದರು. ಅನಿತ ವಂದಿಸಿದರು. ಶ್ರೀ ರಾಮಟ್ರಸ್ಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಮಹಾತ್ಮಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತಿç ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಚೆಯ್ಯಂಡಾಣೆ : ಭಾರತೀಯ ಜನತಾ ಪಾರ್ಟಿಯ ನರಿಯಂದಡ ಭಾಗ ೧ ಹಾಗೂ ಭಾಗ ೨ರ ಬೂತ್ ಸಮಿತಿಯ ವತಿಯಿಂದ ನರಿಯಂದಡ ಗ್ರಾಮದ ಅಯ್ಯಪ್ಪ ಯುವಕ ಸಂಘದ ಕಟ್ಟಡದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್‌ಶಾಸ್ತಿç ಭಾವಚಿತ್ರಕ್ಕೆ ಸ್ಥಾನೀಯ ಸಮಿತಿಯ ಅಧ್ಯಕ್ಷ ದನೋಜ್ ಪೊಕ್ಕೂಳಂಡ್ರ ಅವರ ನೇತೃತ್ವದಲ್ಲಿ ನಮನ ಸಲ್ಲಿಸಲಾಯಿತು. ಈ ಸಂದರ್ಭ ಬೂತ್ ಸಮಿತಿಯ ಅಧ್ಯಕ್ಷ ಮುಂಡ್ಯೊಳAಡ ದಿನು ಗಣಪತಿ, ಕೊಡಗು ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷ ಹಾಗೂ ಮಡಿಕೇರಿ ನಗರದ ಸಹ ಪ್ರಭಾರಿಯಾಗಿರುವ ಪವನ್ ತೊಟಂಬೈಲ್, ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪ, ಕಾರ್ಯಕರ್ತರಾದ ಬೊವ್ವೇರಿಯಂಡ ಲವಕುಮಾರ್ (ಸನ್ನು) ಪೊಕ್ಕೂಳಂಡ್ರ ತೀರ್ಥಪ್ರಸಾದ್, ಬೆಳಿಯಂಡ್ರ ಅಭಿಷೇಕ್ ಹಾಜರಿದ್ದರು.*ಗೋಣಿಕೊಪ್ಪ : ಭಾರತ್ ಸ್ಕೌಟ್ಸ್ ಗೈಡ್ಸ್ ಪೊನ್ನಂಪೇಟೆ ತಾಲೂಕು ಶಾಖೆ ವತಿಯಿಂದ ಗಾಂಧೀಜಿ ಹುಟ್ಟುಹಬ್ಬದ ದಿನದಂದು ಪ್ರಾರ್ಥನೆ ಮಾಡಲಾಯಿತು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮೂಕಳೇರ ಎಸ್. ಕುಶಾಲಪ್ಪ, ಸ್ಕೌಟ್ಸ್ ಸಂಸ್ಥೆಯ ಅಧ್ಯಕ್ಷರಾದ ಕಾಳಿಮಾಡ ಮೋಟಯ್ಯ, ಕಾರ್ಯದರ್ಶಿ ಓಮನ, ಪದಾಧಿಕಾರಿಗಳಾದ ಮೀರಾ, ಮುತ್ತಮ್ಮ, ಅಲಿಮ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ದೈಹಿಕ ಶಿಕ್ಷಕ ಮಹೇಶ್ ಉಪಸ್ಥಿತರಿದ್ದರು.

ಸೋಮವಾರಪೇಟೆ : ರಾಷ್ಟçಪಿತ ಮಹಾತ್ಮ ಗಾಂಧೀಜಿಯ ಜೀವನ, ಸಮಾಜಕ್ಕೆ ಹಾಕಿಕೊಟ್ಟ ಮಾರ್ಗದರ್ಶನ, ತತ್ವಾದರ್ಶಗಳು ಸಾರ್ವಕಾಲಿಕ ವಾಗಿವೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು. ಭಾರತೀಯ ಜನತಾ ಪಕ್ಷದ ವತಿಯಿಂದ ಇಲ್ಲಿನ ಗಾಂಧೀಜಿ ವೃತ್ತದ ಬಳಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಸತ್ಯ,ಅಹಿಂಸೆಯ ಪ್ರಬಲ ಪ್ರತಿಪಾದಕರಾಗಿದ್ದ ಗಾಂಧೀಜಿಯ ಜೀವನ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

ರಾಷ್ಟçಪಿತನ ಸ್ಮರಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಷ್ಟು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸ್ವಚ್ಛ ಭಾರತ್ ಯೋಜನೆಯ ಮೂಲಕ ದೇಶದ ಸ್ವಚ್ಛತೆಗೆ ಪ್ರಧಾನಿ ಮೋದಿ ಪಣತೊಟ್ಟಿದ್ದಾರೆ. ಈ ಯೋಜನೆಯ ಮೂಲಕ ಹಳ್ಳಿಹಳ್ಳಿಯಲ್ಲೂ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿದೆ ಎಂದು ಅಭಿಪ್ರಾಯಿಸಿದರು. ಕಾರ್ಯಕ್ರಮದಲ್ಲಿ ಶ್ರಮಿಕ ಸಮ್ಮಾನ್ ಹಿನ್ನೆಲೆ ಕಾಗಡಿಕಟ್ಟೆಯ ಶಿಲ್ಪಿ ಮಂಜುನಾಥ್ ಆಚಾರ್ಯ ಹಾಗೂ ಪಟ್ಟಣದ ಸವಿತಾ ಸಮಾಜದ ಲಿಂಗರಾಜು ಅವರುಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ, ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೇರೂರು, ಜಿ. ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಕೆ. ಮಾದಪ್ಪ, ಜಿಲ್ಲಾ ಸಮಿತಿಯ ರೂಪ ಸತೀಶ್, ಪಕ್ಷದ ಪ್ರಮುಖರಾದ ರೇಣುಕಾ ವೆಂಕಟೇಶ್, ಲೀಲಾ ನಿರ್ವಾಣಿ, ತಾಲೂಕು ಉಪಾಧ್ಯಕ್ಷ ಐಗೂರು ಪ್ರಭ, ನಾಪಂಡ ಉಮೇಶ್, ಯುವ ಮೋರ್ಚಾ ಕಾರ್ಯದರ್ಶಿಗಳಾದ ಪದ್ಮನಾಭ್, ಮೋಹಿತ್, ಗೌತಮ್, ಎಂ. ಡಿ. ಕೃಷ್ಣಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪೊನ್ನಂಪೇಟೆ : ಇಲ್ಲಿನ ಅಪ್ಪಚ್ಚಕವಿ ವಿದ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹುದ್ದೂರ್ ಶಾಸ್ತಿç ಜಯಂತಿಯನ್ನು ಆಚರಿಸ ಲಾಯಿತು. ಈ ಪ್ರಯುಕ್ತ ಶಾಲೆಯ ಆವರಣದಲ್ಲಿ ಶ್ರಮದಾನ ಮಾಡಲಾಯಿತು.

ಮಡಿಕೇರಿ : ಬೆಟ್ಟಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರು ರಾಷ್ಟçಪಿತ ಮಹಾತ್ಮ ಗಾಂಧೀಜಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಂತರ ಶಾಲೆಯ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ಮಾಡಿದರು. ಈ ಸಂದರ್ಭ ಎಸ್.ಡಿ.ಎಂ.ಸಿ ಅಧ್ಯಕ್ಷ ಲವ, ಉಪಾಧ್ಯಕ್ಷ ರಫೀಕ್, ಸದಸ್ಯರಾದ ಉಸ್ಮಾನ್, ದಯಾನಂದ, ಅಶೋಕ, ನವೀನ, ಜಯಲಕ್ಷಿö್ಮ, ಟೀನಾ, ರುಕ್ಮಿಣಿ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.

ಮೂರ್ನಾಡು: ಇಲ್ಲಿನ ಫ್ರೆಂಡ್ಸ್ ವಾಹನ ಮಾಲೀಕರ ಹಾಗೂ ಚಾಲಕರ ಸಂಘ, ಇವರ ವತಿಯಿಂದ ಶ್ರಮದಾನ ಕಾರ್ಯಕ್ರಮ ನಡೆಸಲಾಯಿತು. ಸಂಘದ ಅಧ್ಯಕ್ಷÀ ಅಬುಬಕ್ಕರ್ ಅವರ ನೇತೃತ್ವದಲ್ಲಿ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಮೂರ್ನಾಡುವಿನ ಪೊಲೀಸ್ ಉಪಠಾಣೆಯ ಸುತ್ತಮುತ್ತ ಹಾಗೂ ಸರಕಾರಿ ಪ್ರಾಥಮಿಕ ಶಾಲೆ, ಕಾಲೇಜಿಗೆ ಹೋಗುವ ಮಾರ್ಗದ ನಾಪೋಕ್ಲು ರಸ್ತೆ ಹಾಗೂ ಬಲಮುರಿ ರಸ್ತೆಯ ಎರಡೂ ಬದಿಗಳಲ್ಲಿ ಬೆಳೆದ ಕಾಡುಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ವಿನೋದ್, ಗೌರವ ಅಧ್ಯಕ್ಷ ರಾಮಚಂದ್ರ, ಕಾರ್ಯದರ್ಶಿ ರಶಿಕ, ಸಹ ಕಾರ್ಯದರ್ಶಿ ಶಶಿ, ಖಜಾಂಚಿ ಅಬ್ದುಲ್ಲಾ, ನಿರ್ದೇಶಕರು ಹಾಗೂ ಸದಸ್ಯರುಗಳಾದ ಖಾದರ್, ನಿಸಾರ್, ರಿಯಾಜ್ ಅಹಮ್ಮದ್, ಸುಲ್ತಾನ್, ಜತ್ತಪ್ಪ, ಮನೋಜ್, ವಾಸು, ದೊಡ್ಡ ಸ್ವಾಮಿ, ಪರಮಶಿವ, ಭೀಮಯ್ಯ, ಕುಮಾರ, ಜಯಂತ್, ಭಾಸ್ಕರರವರು ಭಾಗವಹಿಸಿದ್ದರು.

೭ನೇ ಹೊಸಕೋಟೆ : ತೋಂಡೂರು ಶ್ರೀ ಕೃಷ್ಣ ದೇವಸ್ಥಾನದ ಆವರಣದಲ್ಲಿ ೭ನೇ ಹೊಸಕೋಟೆ ಮಂಡಲ ಶಕ್ತಿ ಕೇಂದ್ರ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಕ್ತಿಕೇಂದ್ರ ಪ್ರಮುಖ್ ರಾಮಚಂದ್ರ ,ಓಬಿಸಿ ಮೋರ್ಚ ಅಧ್ಯಕ್ಷರು ಪ್ರಕಾಶ್ ಟಿವಿ, ಉಪಾಧ್ಯಕ್ಷೆ ಶ್ರೀಜಾ, ಪಂಚಾಯತ್ ಅಧ್ಯಕ್ಷ ರಮೇಶ್, ಸದಸ್ಯ ಸೌಮ್ಯ ಹಾಗೂ ಕಾರ್ಯಕರ್ತರು ಮತ್ತು ಪುಟಾಣಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮೇಶ್ ಅವರು ಉದ್ಘಾಟಿಸಿದರು. ಗೋಣಿಕೊಪ್ಪಲು : ವೀರಾಜಪೇಟೆ ಬಿಜೆಪಿ ಮಂಡಲದ ವತಿಯಿಂದ ರಾಷ್ಟçಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತಿçಜೀ ಅವರ ಜನ್ಮ ದಿನ ಆಚರಿಸಲಾಯಿತು. ಗೋಣಿಕೊಪ್ಪ ಬಸ್ ನಿಲ್ದಾಣದ ಸಮೀಪ ಬಿಜೆಪಿ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಅಧ್ಯಕ್ಷತೆಯಲ್ಲಿ ಮಹಾನ್ ನಾಯಕರುಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಗುಮ್ಮಟ್ಟೀರ ಕಿಲನ್ ಗಣಪತಿ ಮಹಾತ್ಮ ಗಾಂಧೀಜಿ ಅವರ ಜಯಂತಿಯನ್ನು ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಿರಿಸದೆ ಇವರು ಹಾಕಿ ಕೊಟ್ಟ ಮಾರ್ಗ ದಂತೆ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛತೆಗೆ ಆದ್ಯತೆ ನೀಡಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಇದನ್ನು ಪ್ರತಿ ಬೂತ್ ಮಟ್ಟದಲ್ಲೂ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಿ.ಕೆ.ಬೋಪಣ್ಣ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಗ್ರಾ.ಪಂ.ಅಧ್ಯಕ್ಷೆ ಚೈತ್ರ, ಸುಬ್ರಮಣಿ, ಬಿ. ಎನ್. ಪ್ರಕಾಶ್ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕು ಒಬಿಸಿ ಘಟಕದ ಅಧ್ಯಕ್ಷ ಕೆ. ರಾಜೇಶ್ ಕಾರ್ಯದರ್ಶಿ ನವೀನ್ ಉತ್ತಯ್ಯ ಬಿಜೆಪಿ ಪ್ರಮುಖರಾದ ಮಲ್ಚೀರ ಗಾಂದಿ ದೇವಯ್ಯ, ಸುರೇಶ್ ರೈ, ಕಿರಣ್, ಗ್ರಾ.ಪಂ.ಸದಸ್ಯರಾದ ಪುಷ್ಪ, ಸೌಮ್ಯಬಾಲು, ಗೀತಾ, ಹಕೀಮ್, ರಾಮಕೃಷ್ಣ ಮುಂತಾದವರು ಉಪಸ್ಥಿತರಿದ್ದರು. ಬಿಜೆಪಿ ಪ್ರಮುಖರಾದ ಸುಬ್ರಮಣಿ ಸ್ವಾಗತಿಸಿ ವಂದಿಸಿದರು.ಮಡಿಕೇರಿ : ಸಂತ ಮೈಕಲರ ವಿದ್ಯಾಸಂಸ್ಥೆಯಲ್ಲಿ ಗಾಂಧಿಜಯAತಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ರೆವರೆಂಡ್ ಫಾದರ್ ನವೀನ್ ಕುಮಾರ್ ಅವರು ವಹಿಸಿದ್ದರು. ಗಿಡ ನೆಡುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ, ದಿನದ ಮಹತ್ವದ ಕುರಿತು ಶಿಕ್ಷಕಿ ಡಾಲ್ಸಿ ಹಾಗೂ ವಿದ್ಯಾರ್ಥಿನಿ ಚೋಂದಮ್ಮ ಮಾತನಾಡಿದರು. ಅಧ್ಯಕ್ಷರ ಭಾಷಣದಲ್ಲಿ ಫಾದರ್ ನವೀನ್ ಕುಮಾರ್ ಅವರು ಗಾಂಧಿ ಜಯಂತಿಯ ಮಹತ್ವ ತಿಳಿಸಿದರು. ಸ್ವಾಗತ ಭಾಷಣ ಶಿಕ್ಷಕಿ ಸಂಧ್ಯಾ ಅವರು ಮಾಡಿದರು. ವಂದನಾರ್ಪಣೆಯನ್ನು ಶಿಕ್ಷಕÀ ಗಾಡ್ವಿನ್ ರೊನಾಲ್ಡ್ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಸವರಿನ್ ಡಿಸೋಜರವರು ನಡೆಸಿಕೊಟ್ಟರು. ಶಿಕ್ಷಕರು ಹಾಗೂ ವಿದ್ಯಾರ್ಥಿ ಗಳಿಂದ ಶ್ರಮದಾನ ನಡೆಯಿತು. ಸಿಹಿ ವಿತರಣೆಯ ನಂತರ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

ಕಣಿವೆ : ಕುಶಾಲನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕೇಂದ್ರದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು. ಸೆಸ್ಕ್ ಶಾಖಾಧಿಕಾರಿ ವಿನಯ್ ಕುಮಾರ್, ಮೇಲ್ವಿಚಾರಕ ಪ್ರದೀಪ್, ಯಂತ್ರಕರ್ಮಿಗಳಾದ ಕರುಣಾಕರ, ಮಂಜುನಾಥ ಸ್ವಾಮಿ, ಪವರ್‌ಮೆನ್ ಶಶಿಕುಮಾರ್, ಮಹೇಶ್ ಹಾಗೂ ಇತರರಿದ್ದರು.ಸಂಪಾಜೆ: ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಸಂಪಾಜೆ ಲಯನ್ಸ್ ಕ್ಲಬ್ ಮತ್ತು ಕಾಲೇಜು ವತಿಯಿಂದ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತಿçಯವರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಸಂಚಾಲಕ ಎಂ. ಶಂಕರನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲ್ಲಿ ಸಂಪಾಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಟೀನಾ ದೇವಿಚರಣ್, ಕಾರ್ಯದರ್ಶಿ ಕಿಶೋರ್ ಕುಮಾರ್ ಕೆ, ಕೋಶಾಧಿಕಾರಿ ಧನಲಕ್ಷಿ÷್ಮ, ನವೀನ್ ಸೇರಿರಂತೆ ಇನ್ನಿತರರು ಹಾಜರಿದ್ದರು.

ಕಣಿವೆ : ಇಲ್ಲಿಗೆ ಸಮೀಪದ ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಕೂಡಿಗೆಯ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಸ್ವಚ್ಛತಾ ಸೇವೆ ಮಾಡುವ ಮೂಲಕ ಗಾಂಧಿ ಜಯಂತಿ ಆಚರಿಸಲಾಯಿತು. ಅದಕ್ಕೂ ಮುನ್ನಾ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭ ಶಕ್ತಿ ಕೇಂದ್ರದ ಅಧ್ಯಕ್ಷ ಕೆ.ಜಿ. ಮಂಜುನಾಥ್ ಮತ್ತು ಪ್ರವೀಣ್ ಕುಮಾರ್ ನೇತೃತ್ವದಲ್ಲಿ ಪಕ್ಷದ ಪ್ರಮುಖರಾದ ಕೆ. ವರದ, ಪಂಚಾಯಿತಿ ಸದಸ್ಯರಾದ ಕೆ.ಕೆ. ಬೋಗಪ್ಪ, ರಾಜ್ಯ ಎಸ್.ಟಿ. ಮೋರ್ಚಾದ ಕಾರ್ಯದರ್ಶಿ ಮಂಜುಳಾ, ಜಿಲ್ಲಾ ಎಸ್‌ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರಭಾಕರ, ಮಾಜಿ ತಾಲೂಕು ಪಂಚಾಯ್ತಿ ಸದಸ್ಯರಾದ ಗಣೇಶ, ಜಿಲ್ಲಾ ಎಸ್ಸಿ ಮೋರ್ಚಾದ ಉಪಾಧ್ಯಕ್ಷರಾದ ಕುಮಾರಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಾಂಚೀರ ಮನು ನಂಜುAಡ, ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ ನಾಯಕ್, ಸದಸ್ಯರಾದ ಚಂದ್ರಶೇಖರ ಮೂಡ್ಲಿಗೌಡ, ಚೈತ್ರಾ ಮಂಜುನಾಥ್, ಗೌರಮ್ಮ ಜಯಣ್ಣ, ಕುಮಾರ್ ಮೊದಲಾದವರಿದ್ದರು.