ಮಡಿಕೇರಿ ಅ. ೪: ತಲಕಾವೇರಿ ತೀರ್ಥೋದ್ಭವ ಸಂಬAಧ ಜಿಲ್ಲಾಧಿಕಾರಿಗಳು ತಲಕಾವೇರಿ ಮತ್ತು ಭಾಗಮಂಡಲಕ್ಕೆ ಭೇಟಿ ನೀಡಿ ತುಲಾ ಸಂಕ್ರಮಣದ ಪೂರ್ವಭಾವಿ ಸಿದ್ಧತೆಗಳನ್ನು ಪರಿಶೀಲಿಸಿದರು.
ತೀರ್ಥೋದ್ಭವ ಸಂದರ್ಭ, ನಂತರದಲ್ಲಿ ಕೇತ್ರಕ್ಕೆ ಬರುವ ಭಕ್ತಾದಿಗಳ ವಾಹನ ನಿಲುಗಡೆಗಾಗಿ ಭಾಗಮಂಡಲದಲ್ಲಿ ಕಾವೇರಿ ಕಾಲೇಜು ಮತ್ತು ಪ್ರಾಥಮಿಕ ಶಾಲೆಯ ಮೈದಾನ ಹಾಗೂ ಚೆಟ್ಟಿಮಾನಿ ಶಾಲೆಯ ಮೈದಾನ, ಚೇರಂಬಾಣೆಯ ಅರುಣ ಕಾಲೇಜು ಮತ್ತು ಪ್ರಾಥಮಿಕ ಶಾಲೆಯ ಮೈದಾನವನ್ನು ಗುರುತಿಸಲಾಯಿತು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ, ಮಡಿಕೇರಿ ತಹಶೀಲ್ದಾರ್, ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಮತ್ತಿತರ ಅಧಿಕಾರಿಗಳು ಹಾಜರಿದ್ದರು.