ಮಡಿಕೇರಿ, ಅ. ೩: ಕಾಡಾನೆ ದಾಳಿಯಿಂದ ಸುಮಾರು ಎರಡು ಎಕರೆಯಷ್ಟು ಸುವರ್ಣಗೆಡ್ಡೆ ಬೆಳೆ ನಾಶವಾಗಿರುವ ಘಟನೆ ನಡೆದಿದೆ. ಸುಂಟಿಕೊಪ್ಪ ವ್ಯಾಪ್ತಿಯ ಕಲ್ಲೂರು ಗ್ರಾಮದ ಕೆ.ಎಸ್. ಗಣೇಶ್ ಎಂಬವರಿಗೆ ಸೇರಿದ ಸುವರ್ಣಗೆಡ್ಡೆ ಬೆಳೆಯ ಮೇಲೆ ದಾಳಿ ಮಾಡಿರುವ ಕಾಡಾನೆ ಸಂಪೂರ್ಣ ನಾಶಗೊಳಿಸಿದೆ. ಸಂಬAಧಿಸಿದವರು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವಂತೆ ಗಣೇಶ್ ಒತ್ತಾಯಿಸಿದ್ದಾರೆ.