ಗೋಣಿಕೊಪ್ಪ ವರದಿ, ಅ. ೨: ಮಾಯಮುಡಿ ಗ್ರಾಮ ಪಂಚಾಯಿತಿ ಆವರಣದಲ್ಲಿ ರೂ. ೫ ಲಕ್ಷ ಅನುದಾನದಲ್ಲಿ ನಿರ್ಮಿಸಿರುವ ಸ್ವಚ್ಛ ಸಂಕೀರ್ಣವನ್ನು ಶಾಸಕ ಕೆ.ಜಿ. ಬೋಪಯ್ಯ ಶನಿವಾರ ಉದ್ಘಾಟಿಸಿದರು.
ಹೈಡ್ರಾಲಿಕ್ ಬೇಲರ್ ಯಂತ್ರ, ಇನ್ಫಿನಿರೇಟರ್ ಯಂತ್ರ, ಸ್ವಚ್ಛ ವಾಹಿನಿ ವಾಹನಕ್ಕೆ ಚಾಲನೆ ನೀಡಲಾಯಿತು. ಗ್ರಾ.ಪಂ. ಅಧ್ಯಕ್ಷೆ ಮೀನಾ, ಉಪಾಧ್ಯಕ್ಷೆ ಸುಮಿತ್ರ, ಇಒ ಕೊಣಿಯಂಡ ಅಪ್ಪಣ್ಣ, ಪಿಡಿಒ ಗಿರೀಶ್, ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಂಯೋಜಕ ಅಜ್ಜಿಕುಟ್ಟೀರ ಸೂರಜ್, ಸದಸ್ಯರು ಇದ್ದರು.