ಮಡಿಕೇರಿ, ಅ. ೨; ಹಿಂದೆ ನೂರು ಪುಸ್ತಕಗಳನ್ನು ಓದಿ ಒಂದು ಸಾಹಿತ್ಯ ಕೃತಿಯ ರಚನೆಯಾಗುತ್ತಿತ್ತು. ಆದರೆ, ಇಂದು ಒಂದೇ ಒಂದು ಪುಸ್ತಕವನ್ನೂ ಓದದೆ ಪುಸ್ತಕಗಳನ್ನು ಬರೆಯುವ ಪ್ರವೃತ್ತಿ ಕಾಣುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿ, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ನಮ್ಮ ಭಾಷಾ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವ ಪ್ರಯತ್ನ ಮಾಡಬೇಕು. ಉತ್ತಮ ಸಾಹಿತ್ಯ ಕೃತಿಗಳನ್ನು ಓದುವುದು ಒಂದು ಚಟವಾಗಬೇಕು ಎಂದು ಹಿರಿಯ ಸಾಹಿತಿ, ವಕೀಲ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಅಭಿಪ್ರಾಯಿಸಿದರು.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ಮೂರು ಸಾಹಿತ್ಯ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಹಲವು ಲೇಖಕರು ಸಾಹಿತ್ಯದ ಗಣಿಯನ್ನು ಅಗೆಯುತ್ತಿದ್ದು, ಇದು ನಿರಂತರವಾಗಿ ಮುಂದುವರೆಯುವ ನಿಟ್ಟಿನಲ್ಲಿ ಬರಹಗಾರರಿಗೆ ಅಗತ್ಯ ಪ್ರೋತ್ಸಾಹವನ್ನು ನೀಡುವುದು ನಮ್ಮ ನಿಮ್ಮೆಲ್ಲರ ಮಡಿಕೇರಿ, ಅ. ೨; ಹಿಂದೆ ನೂರು ಪುಸ್ತಕಗಳನ್ನು ಓದಿ ಒಂದು ಸಾಹಿತ್ಯ ಕೃತಿಯ ರಚನೆಯಾಗುತ್ತಿತ್ತು. ಆದರೆ, ಇಂದು ಒಂದೇ ಒಂದು ಪುಸ್ತಕವನ್ನೂ ಓದದೆ ಪುಸ್ತಕಗಳನ್ನು ಬರೆಯುವ ಪ್ರವೃತ್ತಿ ಕಾಣುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿ, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ನಮ್ಮ ಭಾಷಾ ಸಾಹಿತ್ಯದ ಕುರಿತು ಆಸಕ್ತಿ ಮೂಡಿಸುವ ಪ್ರಯತ್ನ ಮಾಡಬೇಕು. ಉತ್ತಮ ಸಾಹಿತ್ಯ ಕೃತಿಗಳನ್ನು ಓದುವುದು ಒಂದು ಚಟವಾಗಬೇಕು ಎಂದು ಹಿರಿಯ ಸಾಹಿತಿ, ವಕೀಲ ಕೆ.ಪಿ. ಬಾಲಸುಬ್ರಮಣ್ಯ ಕಂಜರ್ಪಣೆ ಅಭಿಪ್ರಾಯಿಸಿದರು.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಏರ್ಪಡಿಸಲಾಗಿದ್ದ ಮೂರು ಸಾಹಿತ್ಯ ಕೃತಿಗಳ ಲೋಕಾರ್ಪಣೆ ಸಮಾರಂಭವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಹಲವು ಲೇಖಕರು ಸಾಹಿತ್ಯದ ಗಣಿಯನ್ನು ಅಗೆಯುತ್ತಿದ್ದು, ಇದು ನಿರಂತರವಾಗಿ ಮುಂದುವರೆಯುವ ನಿಟ್ಟಿನಲ್ಲಿ ಬರಹಗಾರರಿಗೆ ಅಗತ್ಯ ಪ್ರೋತ್ಸಾಹವನ್ನು ನೀಡುವುದು ನಮ್ಮ ನಿಮ್ಮೆಲ್ಲರ ಪ್ರಬಂಧ ಸಂಕಲನ ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಕೊಡಗು ಸಾಹಿತ್ಯ ಕೃಷಿಯನ್ನು ಗಟ್ಟಿಯಾಗಿ ಬೆಳೆಸುತ್ತಿರುವ ಜಿಲ್ಲೆಯಾಗಿದ್ದು, ನವ ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಸ್ಮಿತಾ ಅವರ ಪ್ರಬಂಧಗಳಲ್ಲಿ ಬದುಕಿನ ನೋವುಗಳು, ಜೀವನದ ಪಾಠಗಳಿವೆ, ಮಹಿಳೆಯರು ಅಡುಗೆ ಮನೆ ಕಿಟಕಿಯಿಂದಲೇ ಪ್ರಪಂಚವನ್ನು ನೋಡುತ್ತಿದ್ದು, ಅವಮಾನ, ಅಪಮಾನಗಳನ್ನು ದಾಟಿಕೊಂಡು ಹೊರ ಬಂದರೆ ಸನ್ಮಾನಕ್ಕೆ ಭಾಜನರಾಗುತ್ತಾರೆ ಎಂಬುದಕ್ಕೆ ಪ್ರಬುದ್ಧ ಬರವಣಿಗೆಗಳು ಸಾಕ್ಷಿಯಾಗಿವೆ ಎಂದು ಹೇಳಿದರು.

ಸಹನಾ ಕಾಂತಬೈಲು ಅವರು ಬರೆದ ಇದು ಬರಿ ಮಣ್ಣಲ್ಲ ಪ್ರಬಂಧ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಸಾಹಿತಿ, ಮಕ್ಕಳ ತಜ್ಞ ಡಾ.ಮೇ.ಕುಶ್ವಂತ್ ಕೋಳಿಬೈಲು ಮಾತನಾಡಿ, ಸಹನಾ ಅವರ ಸಂಕಲನದಲ್ಲಿ ಆತ್ಮಕತೆಗಳೇ ಪ್ರಬಂಧಗಳಾಗಿವೆ. ಲೇಖಕಿಯ ಬಗ್ಗೆ ಅನುಕಂಪ ಮೂಡಿಸುವ ಶಕ್ತಿ ಬರಹಗಳಲ್ಲಿದೆ, ದಿನ ನಿತ್ಯ ನಡೆಯುವ ಘಟನೆಗಳನ್ನೇ ಸರಳವಾಗಿ ಬರೆದಿದ್ದಾರೆ ಎಂದು ಹೇಳಿದರು. ವಿಶ್ವ ವಿದ್ಯಾಲಯ ಗಳಲ್ಲಿ ಹುಟ್ಟುವ ಬರಹಗಳಿಗಿಂತ ಸಾಹಿತ್ಯ ಕ್ಷೇತ್ರದಲ್ಲಿನ ಬರಹಗಳಿಗೆ ಹೆಚ್ಚಿನ ಶಕ್ತಿಯಿರುತ್ತದೆ. ಸಾಹಿತ್ಯದಲ್ಲಿ ಓದುಗರನ್ನು ಸೆಳೆಯುವ ಗುಣಗಳಿರುತ್ತದೆ ಎಂದರು.

ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಬಳಗದ ವತಿಯಿಂದ ಸಾಹಿತ್ಯ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು. ಲೇಖಕರುಗಳಾದ ಪ್ರಭಾಕರ ಶಿಶಿಲ, ಸ್ಮಿತಾ ಅಮೃತರಾಜ್ ಹಾಗೂ ಸಹನಾ ಕಾಂತಬೈಲು ಅವರುಗಳು ಅನಿಸಿಕೆ ಗಳನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಲೇಖಕರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದೇಶ ಭಕ್ತಿ ಗೀತೆ ಗಾಯನ ಏರ್ಪಡಿಸಲಾಗಿತ್ತು. ಅನ್ವಿತ್ ಕುಮಾರ್, ಟಿ.ವಿ. ಬಿಂದು, ಕಡ್ಲೇರ ತುಳಸಿ, ಚಿತ್ರ ಆರ್.ಎನ್., ಬಿ.ಸಿ.ವನಜ, ಅಂಚಲ್ ಜೋಶಿ, ಕೆ.ಜಿ. ರಮ್ಯ ತಂಡ, ಸೌಮ್ಯ ತಂಡ, ಲಹರಿ ತಂಡ ಹಾಗೂ ಅಂಬಿಕಾ ರಾವ್ ತಂಡದವರು ಗೀತೆಗಳನ್ನು ಹಾಡಿದರು. ವಿದ್ಯಾರ್ಥಿನಿ ಸಹೋದರಿಯರಾದ ಸ್ನೇಹ ಮಧುಕರ್ ಹಾಗೂ ಸ್ವಪ್ನ ಮಧುಕರ್ ಪ್ರಾರ್ಥಿಸಿದರೆ, ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ನಿರೂಪಿಸಿದರು. ಲೋಕನಾಥ್ ಅಮೆಚೂರ್ ಸ್ವಾಗತಿಸಿದರೆ, ಉಪಾಧ್ಯಕ್ಷೆ ರೇವತಿ ರಮೇಶ್ ಹಾಗೂ ಕೋಶಾಧಿಕಾರಿ ತುಳಸಿ ಮೋಹನ್ ಲೇಖಕರ ಪರಿಚಯ ಮಾಡಿದರು. ಪ್ರಧಾನ ಕಾರ್ಯದರ್ಶಿ ವಿಲ್ಫೆçಡ್ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು. ಅಂಬೆಕಲ್ ನವೀನ್ ಕುಶಾಲಪ್ಪ ವಂದಿಸಿದರು.