ಮಡಿಕೇರಿ, ಅ. ೨: ಮಡಿಕೇರಿಯಲ್ಲಿ ಕಳೆದ ೯ ತಿಂಗಳುಗಳಿAದ ಕಾರ್ಯನಿರ್ವಹಿಸುತ್ತಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಿಷ್ಣುಮೂರ್ತಿ ಅವರು ನಿವೃತ್ತಿ ಹೊಂದಿದ್ದು, ಜಿಲ್ಲಾ ಪಾಂಶುಪಾಲರ ಸಂಘ ಹಾಗೂ ಕಚೇರಿ ಸಿಬ್ಬಂದಿಗಳಿAದ ಬೀಳ್ಕೊಡಲಾಯಿತು.

ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಫಲ ತಾಂಬೂಲ ನೀಡಿ ಬೀಳ್ಕೊಡಲಾಯಿತು. ಮಡಿಕೇರಿಯ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ವಿಜಯ, ಇಲಾಖೆಯ ಪ್ರಭಾರ ಉಪನಿರ್ದೇಶಕ ಸತೀಶ್ ಬಾಬು ಹಾಗೂ ಇತರರು ಇದ್ದರು.