ಮಡಿಕೇರಿ, ಅ. ೨: ಪೋಡಮಾಡ ಜಾನಕಿ, ಕೂತಂಡ ಪಾರ್ವತಿ, ಕೋಳೇರ ಕಾವೇರಿ ಇವರ ಹೆಸರುಗಳು ಇತಿಹಾಸ ಪುಟಗಳಲ್ಲಿ ದಾಖಲಾಗಿಲ್ಲ. ಅವರ ತ್ಯಾಗ ಇಂದಿನ ಪೀಳಿಗೆಗೆ ತಿಳಿದಿಲ್ಲ. ಇದೀಗ ಈ ಮೂವರು ಮಾತೆಯರ ತ್ಯಾಗ, ಬಲಿದಾನದ ಚರಿತ್ರೆ ದೃಶ್ಯ ರೂಪ ದೊರೆತಿದೆ.

ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ವಿದ್ಯಾ ಭವನದಲ್ಲಿ ಸ್ವಾತಂತ್ರö್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸಾಕ್ಷö್ಯಚಿತ್ರ ಸ್ಪರ್ಧೆಯಲ್ಲಿ ಈ ಮೂವರ ಜೀವನಚರಿತ್ರೆ ಕಣ್ಣೀರು ತರಿಸಿತು. ಜೊತೆಗೆ ಹೆಮ್ಮೆಯೂ ಮೂಡಿಸಿತು. ಇದರೊಂದಿಗೆ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಅಚ್ಚಳಿಯದ ಮಡಿಕೇರಿ, ಅ. ೨: ಪೋಡಮಾಡ ಜಾನಕಿ, ಕೂತಂಡ ಪಾರ್ವತಿ, ಕೋಳೇರ ಕಾವೇರಿ ಇವರ ಹೆಸರುಗಳು ಇತಿಹಾಸ ಪುಟಗಳಲ್ಲಿ ದಾಖಲಾಗಿಲ್ಲ. ಅವರ ತ್ಯಾಗ ಇಂದಿನ ಪೀಳಿಗೆಗೆ ತಿಳಿದಿಲ್ಲ. ಇದೀಗ ಈ ಮೂವರು ಮಾತೆಯರ ತ್ಯಾಗ, ಬಲಿದಾನದ ಚರಿತ್ರೆ ದೃಶ್ಯ ರೂಪ ದೊರೆತಿದೆ.

ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ವಿದ್ಯಾ ಭವನದಲ್ಲಿ ಸ್ವಾತಂತ್ರö್ಯ ದಿನಾಚರಣೆ ಅಮೃತ ಮಹೋತ್ಸವ ಹಾಗೂ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸಾಕ್ಷö್ಯಚಿತ್ರ ಸ್ಪರ್ಧೆಯಲ್ಲಿ ಈ ಮೂವರ ಜೀವನಚರಿತ್ರೆ ಕಣ್ಣೀರು ತರಿಸಿತು. ಜೊತೆಗೆ ಹೆಮ್ಮೆಯೂ ಮೂಡಿಸಿತು. ಇದರೊಂದಿಗೆ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಅಚ್ಚಳಿಯದ ಛಾಯಗ್ರಹಣ ಮನಮೋಹಕ ವಾಗಿತ್ತು. ಮಾದೇಟೀರ ಬೆಳ್ಯಪ್ಪ ಅವರ ಮನಮುಟ್ಟುವ ಹಿನ್ನೆಲೆ ಧ್ವನಿ, ಸಂಕಲನ ಸಾಕ್ಷö್ಯಚಿತ್ರದ ಜೀವಾಳವಾಗಿತ್ತು.

ಐಮಂಡ ಗೋಪಾಲ್ ಸೋಮಯ್ಯ ನಿರ್ಮಾಣ, ನಿರ್ದೇಶನದಲ್ಲಿ ಸ್ವಾತಂತ್ರ‍್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿ ಗಲ್ಲಿಗೇರಿದ ಗುಡ್ಡೆಮನೆ ಅಪ್ಪಯ್ಯಗೌಡರ ಜೀವನವನ್ನು ‘ಪಡೆಯಾಳಿ' ಎಂಬ ಶೀರ್ಷಿಕೆಯ ಚಿತ್ರದ ಮೂಲಕ ಪರದೆ ಮೇಲೆ ಚಿತ್ರ ತಂಡ ತೆರೆದಿಟ್ಟಿತು. ಚಿತ್ರದ ಛಾಯಾಗ್ರಹಣವನ್ನು ವಿಜಯ್ ಉತ್ತಮವಾಗಿ ಮಾಡಿದ್ದಾರೆ. ಪುಸ್ತಕಗಳಲ್ಲಿ ದಾಖಲಾಗಿರುವ ಅಪ್ಪಯ್ಯಗೌಡರ ಜೀವನ ಇದೀಗ ದೃಶ್ಯರೂಪವಾಗಿರುವುದು ಉತ್ತಮ ಕೆಲಸವಾಗಿದೆ ಎಂಬ ಪ್ರಶಂಸೆಗೆ ಪಾತ್ರವಾಯಿತು.

ಸ್ವಾತಂತ್ರ‍್ಯ ಹೋರಾಟದ ತುಡಿತ, ಸ್ವಾತಂತ್ರ‍್ಯ

(ಮೊದಲ ಪುಟದಿಂದ) ಚಳುವಳಿಯಲ್ಲಿ ಭಾಗವಹಿಸಬೇಕೆಂಬ ಕಿಚ್ಚು ಹೊಂದಿ, ಮದುವೆಯ ಹಿಂದಿನ ರಾತ್ರಿ ಗುಂಡು ಹೊಡೆದುಕೊಂಡು ಪ್ರಾಣಾರ್ಪಣೆ ಮಾಡಿದ ಪೋಡಮಾಡ ಜಾನಕಿ ಅವರ ಜೀವನವನ್ನು ನಿರ್ದೇಶಕ ಮಂದನೆರವAಡ ಯುಗದೇವಯ್ಯ ಉತ್ತಮವಾಗಿ ನಿರೂಪಿಸಿದ್ದಾರೆ. ತನ್ನ ೧೭ನೇ ವರ್ಷದಲ್ಲಿ ಜೀವವನ್ನು ಸ್ವಾತಂತ್ರ‍್ಯಕ್ಕಾಗಿ ಮುಡಿಪಾಗಿಟ್ಟ ಜಾನಕಿ ಪಾತ್ರವನ್ನು ಯುವಕಲಾವಿದೆ ಕೊಟ್ಟಂಗಡ ದೇವಮ್ಮ ಮನೋಜ್ಞವಾಗಿ ನಟಿಸಿ ಪ್ರಶಂಸೆಗೆ ಪಾತ್ರರಾದರು. ವಿಜಯ್ ಛಾಯಗ್ರಾಣ, ರಿಜ್ವಾನ್ ಹುಸೈನ್ ಸಂಕಲನ, ಕಿಶೋರ್ ರೈ ಹಿನ್ನೆಲೆ ಧ್ವನಿ ಚಿತ್ರ ಸೊಗಸಾಗಿ ಮೂಡಿಬರಲು ಮತ್ತಷ್ಟು ಕಾರಣವಾಯಿತು.

ಸ್ವಾತಂತ್ರ‍್ಯ ಬರುವ ತನಕ ಮದುವೆಯಾಗಲ್ಲ ಎಂದು ಅಭಿಲಾಷೆ ಹೊತ್ತಿದ್ದ ಜಾನಕಿ ಮದುವೆಯನ್ನು ಕುಟುಂಬಸ್ಥರು ಗೊತ್ತು ಮಾಡಿದರು. ನಂತರ ಮದುವೆ ಆಗುವ ಬದಲು ದೇಶಕ್ಕಾಗಿ ಗುಂಡು ಹೊಡೆದುಕೊಂಡು ಪ್ರಾಣ ಕಳೆದುಕೊಂಡರು.

ಸ್ವಾತAತ್ರ‍್ಯ ಸಂಗ್ರಾಮಕ್ಕಾಗಿ ಜೀವವನ್ನು ತ್ಯಾಗ ಮಾಡಿದ ಹುದಿಕೇರಿಯ ಕೋಳೇರ ಕಾವೇರಿ ಅವರ ಜೀವನವನ್ನು ಕಳ್ಳಿಚಂಡ ಡಿಂಪಲ್ ನಾಚಪ್ಪ ಚಿತ್ರಿಸಿದರು. ಬಾಲ್ಯದಲ್ಲೇ ಸ್ವಾತಂತ್ರ‍್ಯ ಚಳುವಳಿಗೆ ಧುಮುಕಿ, ಜನರನ್ನು ಒಗ್ಗೂಡಿಸುವ ಪ್ರಯತ್ನದ ನಡುವೆ ಕುಟುಂಬ ಹೋರಾಟ ಮಾಡದಂತೆ ಅಡ್ಡಿಪಡಿಸಿದಾಗ ಕೆರೆಗೆ ಹಾರಿ ಜೀವ ಕಳೆದುಕೊಂಡ ಬಗ್ಗೆ ಡಿಂಪಲ್ ಮತ್ತು ತಂಡ ಚಿತ್ರದ ಮೂಲಕ ಅನಾವರಣ ಮಾಡಿದರು. ಇದರಲ್ಲಿ ಹಿರಿಯ ಕಲಾವಿದ ನೆರವಂಡ ಉಮೇಶ್ ಅವರು ಕಾವೇರಿ ಅವರ ತಂದೆಯಾಗಿ ಮಾಡಿದ ನಟನೆ ಕಣ್ಣೀರು ತರಿಸಿತು. ಮಗಳ ಕನಸ್ಸನ್ನು ಅಪ್ಪ ಮುಂದೆ ಈಡೇರಿಸುವ ಬಗ್ಗೆ ಮಗಳ ಮೃತದೇಹದ ಮುಂದೆ ಆಣೆ ಮಾಡುವ ದೃಶ್ಯ ರೋಮಾಂಚಕವಾಗಿತ್ತು.

ಅನಿಲ್ ಸಿನಿಮಾಕ್ಕೆ ಪ್ರಥಮ

ಸಾಕ್ಷö್ಯಚಿತ್ರ ಸ್ಪರ್ಧೆಯಲ್ಲಿ ಅನಿಲ್ ಎಚ್.ಟಿ. ನಿರ್ದೇಶನದ ಕೂತಂಡ ಪಾರ್ವತಿ ಸಾಕ್ಷö್ಯಚಿತ್ರ ಪ್ರಥಮ, ಐಮಂಡ ಗೋಪಾಲ್ ಸೋಮಯ್ಯ ನಿರ್ದೇಶನದ ಪಡಿಯಾಳಿ ಚಿತ್ರ ದ್ವಿತೀಯ, ಯುಗದೇವಯ್ಯ ನಿರ್ದೇಶನದ ಪೋಡಮಾಡ ಜಾನಕಿ ಸಾಕ್ಷö್ಯಚಿತ್ರ ತೃತೀಯ ಸ್ಥಾನ ಪಡೆದುಕೊಂಡಿತು.

ಸಭಾ ಕಾರ್ಯಕ್ರಮ

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲಾವಿದ, ನಿರ್ದೇಶಕ ಡಾ.ಕಾಳಿಮಾಡ ದಿನೇಶ್ ನಾಚಪ್ಪ, ಸಂಸ್ಕೃತಿ, ಪರಂಪರೆ, ಜೀವನಚರಿತ್ರೆಯನ್ನು ಸಾಕ್ಷö್ಯಚಿತ್ರದ ಮೂಲಕ ಪರಿಣಾಮಕಾರಿಯಾಗಿ ಅನಾವರಣ ಮಾಡಬಹುದು. ತುಳು, ಲಂಬಾಣಿ ಸೇರಿದಂತೆ ಇನ್ನಿತರ ಪ್ರಾದೇಶಿಕ ಭಾಷೆಗಳಿಗೆ ಚಲನಚಿತ್ರ ಕ್ಷೇತ್ರದಲ್ಲಿ ಅಪಾರ ಮನ್ನಣೆ ಇದ್ದು, ಕೊಡವ ಸಿನಿಮಾ ಜಾಗತೀಕ ಮಟ್ಟದಲ್ಲಿ ಸಾಧನೆ ಮಾಡುವಂತಾಗಬೇಕು. ಈ ನಿಟ್ಟಿನ ಪ್ರಯತ್ನಗಳಾಗಬೇಕು. ಕೊಡವ ಸಂಸ್ಕೃತಿ ಉಳಿವಿಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಸಾಕ್ಷ್ಯಚಿತ್ರ ನಿರ್ದೇಶಕ, ನಿರ್ಮಾಪಕ ಸಿರಿಗಂಧ ಶ್ರೀನಿವಾಸ್ ಮೂರ್ತಿ ಮಾತನಾಡಿ, ಕೊಡಗಿನ ಹಿರಿಯ ಸಾಹಿತಿಗಳಾದ ಅಪ್ಪಚ್ಚಕವಿ, ನಡಿಕೇರಿಯಂಡ ಚಿಣ್ಣಪ್ಪ ಸೇರಿದಂತೆ ೬೬ ಸಾಕ್ಷ್ಯಚಿತ್ರಗಳನ್ನು ನಾನು ನಿರ್ದೇಶಿಸಿದ್ದೇನೆ. ಕೊಡಗಿನ ನಿವಾಸಿ ಅಲ್ಲದ ನಾನು ಕೊಡಗಿನ ಬಗ್ಗೆ ಸಾಕ್ಷ್ಯಚಿತ್ರ ಮಾಡಿರುವಾಗ ಇಲ್ಲಿನ ನಿವಾಸಿಗಳು ಈ ರೀತಿಯ ಪ್ರಯತ್ನಗಳನ್ನು ಹೆಚ್ಚಾಗಿ ಮಾಡಬೇಕು. ಸಾಕ್ಷ್ಯಚಿತ್ರ ಉತ್ತಮವಾಗಿ ಮೂಡಿಬರಬೇಕಾದರೆ ಆಳವಾದ ಸಂಶೋಧನೆ ಮುಖ್ಯವಾಗಿದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಸಾಕ್ಷö್ಯಚಿತ್ರಗಳನ್ನು ಗುಣಮಟ್ಟದಲ್ಲಿ ತಯಾರಿಸಬಹುದು. ರಾಜ್ಯದ ಯಾವುದೇ ಅಕಾಡೆಮಿ ಸಾಕ್ಷ್ಯಚಿತ್ರ ಸ್ಪರ್ಧೆ ಮಾಡಿಲ್ಲ. ಕೊಡವ ಅಕಾಡೆಮಿಯ ವಿನೂತನ ಪ್ರಯತ್ನ ಶ್ಲಾಘನೀಯ ಎಂದ ಅವರು, ಕೊಡಗಿನ ೧೦೦ ಸಾಧಕರ ಬಗ್ಗೆ ಸಾಕ್ಷö್ಯಚಿತ್ರ ತಯಾರಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಕೊಡವ ಅಕಾಡೆಮಿ ಸರಕಾರದ ಗಮನ ಸೆಳೆದು ಯೋಜನೆ ರೂಪಿಸಬೇಕೆಂದು ಸಲಹೆ ನೀಡಿದರು.

ಅಕಾಡೆಮಿ ಅಧ್ಯಕ್ಷ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಸಾಕ್ಷö್ಯಚಿತ್ರ ಸ್ಪರ್ಧೆಗೆ ೧೦ ಅರ್ಜಿಗಳು ಬಂದಿದ್ದವು. ಆದರೆ, ೪ ತಂಡ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಿವೆ ಎಂದರು.

ಅಕಾಡೆಮಿ ರಿಜಿಸ್ಟ್ರಾರ್ ಅಜ್ಜಿಕುಟ್ಟೀರ ಗಿರೀಶ್, ನಿರ್ದೇಶಕರಾದ ಮಾಚಿಮಾಡ ಜಾನಕಿ ಮಾಚಯ್ಯ, ಬಾಚಮಂಡ ಗೌರಮ್ಮ ಮಾದಮಯ್ಯ, ನಾಪಂಡ ರವಿ ಕಾಳಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- ಹೆಚ್.ಜೆ.ರಾಕೇಶ್