ಚೆಯ್ಯಂಡಾಣೆ, ಅ. ೩ ಎಮ್ಮೆಮಾಡಿನಲ್ಲಿ ಎಸ್.ವೈ.ಎಸ್ ಶಾಖೆ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ಎಸ್.ವೈ.ಎಸ್ ಶಾಖೆಯ ಪುರ‍್ರಚನೆ ಹಾಗೂ ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಮಹ್ಮೂದ್ ಉಸ್ತಾದರ ಅನುಸ್ಮರಣೆಯನ್ನು ನಡೆಸಲಾಯಿತು. ಜಿಲ್ಲಾ ಸಹಾಯ್ ಚೇರ್ಮನ್ ಸಯ್ಯದ್ ಇಲ್ಯಾಸ್ ಅಲ್ ಹೈದರೂಸಿ ಸಖಾಫಿ ದುಆಗೆ ನೇತೃತ್ವ ನೀಡಿ, ಸಭೆಯನ್ನು ಉದ್ಘಾಟನೆ ಮಾಡಿದರು. ಕೆ.ಸಿ.ಎಫ್. ರಾಷ್ಟಿçÃಯ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ಹಾಗೂ ಮಡಿಕೇರಿ ತಾಲೂಕು ಕೆ.ಯಂ.ಜೆ ಉಪಾಧ್ಯಕ್ಷ ಅಬೂಬಕ್ಕರ್ ಸಖಾಫಿ ಮಾತನಾಡಿದರು.
ಬಳಿಕ ರಿಟರ್ನಿಂಗ್ ಆಫೀಸರ್ ಹಮೀದ್ ಉಸ್ತಾದ್ ನಿರ್ದೇಶನದಂತೆ ಕಾರ್ಯದರ್ಶಿ ವರದಿ ಹಾಗೂ ಆಯವ್ಯಯ ಮಂಡಿಸಿದರು. ನೂತನ ಸಾಲಿನ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಪಿ.ಎ., ಉಪಾಧ್ಯಕ್ಷರಾಗಿ ಕುನ್ನಿಕೋಯಾ ತಂಘಳ್, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಅಶ್ರಫ್ ಬಿ.ಯು, ಕೋಶಾಧಿಕಾರಿ ಅಶ್ರಫ್ ಸಖಾಫಿ ಪರಂಬು, ದಹ್ವಾ ಕಾರ್ಯದರ್ಶಿ ಅಬೂಬಕರ್ ಅಶ್ರಫಿ, ಇಸಾಬ ಕಾರ್ಯದರ್ಶಿಯಾಗಿ ಮಹಮ್ಮದ್ ಹಳೇತಾಲೂಕು ಇವರುಗಳನ್ನು ಆಯ್ಕೆ ಮಾಡಲಾಯಿತು. ನಂತರ ಶೈಖುನಾ ಮಹ್ಮೂದ್ ಉಸ್ತಾದ್, ಮೂಸ ಹಾಜಿ ಬರಾಕೊಲ್ಲಿ, ರಫೀಕ್ ಕೆ.ಪಿ ಹೆಸರಿನಲ್ಲಿ ತಹ್ಲೀಲ್ ಸಮರ್ಪಿಸಿ ಸಯ್ಯದ್ ಇಲ್ಯಾಸ್ ತಂಘಳ್ ಪ್ರಾರ್ಥನೆಗೆ ಮುಂದಾಳತ್ವ ವಹಿಸಿದ್ದರು. ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಮುಜೀಬ್ ಅವರುಗಳನ್ನು ಸನ್ಮಾನಿಸಲಾಯಿತು. ಮುಜೀಬ್ ಸಿ.ಎಂ. ಸ್ವಾಗತಿಸಿ, ನೂತನ ಕಾರ್ಯದರ್ಶಿ ಮುಹಮ್ಮದ್ ಅಶ್ರಫ್ ಬಿ.ಯು. ವಂದಿಸಿದರು.