ಕಣಿವೆ, ಅ. ೨: ರಾಷ್ಟಿçÃಯ ಹೆದ್ದಾರಿಯಲ್ಲಿನ ಆನೆಕಾಡು ಅರಣ್ಯದಂಚಿನಲ್ಲಿ ದುರುಳರು ಕಸ ತ್ಯಾಜ್ಯಗಳನ್ನು ಸುರಿದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಸುಂದರ ಪರಿಸರವನ್ನು ಮಲಿನ ಮಾಡುತ್ತಿದ್ದಾರೆ.

ಅರಣ್ಯ ಇಲಾಖೆ ವತಿಯಿಂದ ಹೆದ್ದಾರಿಯಂಚಿನಲ್ಲಿ ಅಳವಡಿಸಿರುವ ಇಲ್ಲಿ ಕಸ ಸುರಿಯಬೇಡಿ... ಆನೆಗಳು ದಾಟುವ ಸ್ಥಳ ಎಚ್ಚರಿಕೆ... ಇಲ್ಲಿ ಪ್ಲಾಸ್ಟಿಕ್ ಕೈ ಚೀಲಗಳು, ಪ್ಲಾಸ್ಟಿಕ್ ನೀರಿನ ಬಾಟಲಿಗಳು ಸೇರಿದಂತೆ ಯಾವುದೇ ತ್ಯಾಜ್ಯಗಳನ್ಮು ಬಿಸಾಕಬೇಡಿ... ವಾಹನಗಳ ನಿಲುಗಡೆ ನಿಷೇಧಿಸಿದೆ... ಎಂಬಿತ್ಯಾದಿಗಳ ಎಚ್ಚರಿಕೆ ಫಲಕಗಳನ್ನು ಹಾಕಿರುವಲ್ಲಿಯೇ ದುರುಳರು ಎರಡು ಮೂರು ಟ್ರಾö್ಯಕ್ಟರ್‌ಗಳಷ್ಟು ಕಸವನ್ನು ಸುರಿದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆನೆಕಾಡು ನಿವಾಸಿಗಳು ಆಗ್ರಹಿಸಿದ್ದಾರೆ.