ಪೆರಾಜೆ, ಅ. ೨: ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ದೇವಾಲಯದ ಆಡಳಿತ ಮೊಕ್ತೇಸರ ಕುಂಬಳಚೇರಿ ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಶ್ರೀ ಶಾಸ್ತಾವು ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಕುರಿತು ಅಧ್ಯಕ್ಷ ವಿಶ್ವನಾಥ್ ಕುಂಬಳಚೇರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಭೆಯಲ್ಲಿ ಗತ ಮಹಾಸಭೆಯ ವರದಿಯನ್ನು ಹಾಗೂ ಆಡಳಿತ ಸಮಿತಿಯ ವರದಿಯನ್ನು ಸಹ ಕಾರ್ಯದರ್ಶಿ ಜೋಯಪ್ಪ ನಿಡ್ಯಮಲೆ ,ಮತ್ತು ಲೆಕ್ಕಪತ್ರ ಮಂಡನೆಯನನ್ನು ಕಾರ್ಯದರ್ಶಿ ಕೊಳಂಗಾಯ ಹೊನಪ್ಪ ಸಭೆಗೆ ತಿಳಿಸಿದರು. ಇತರ ವಿಷಯಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಾತ್ರಾ ಉತ್ಸವಗಳು ನಡೆಯದ ಕಾರಣ ಪ್ರಸ್ತುತ ಇರುವ ಆಡಳಿತ ಮಂಡಳಿಯನ್ನೇ ಮುಂದುವರೆಸುವುದೆAದು ಸಭೆಯಲ್ಲಿ ತೀರ್ಮಾನಕ್ಕೆ ಬರಲಾಯಿತು. ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥರುಗಳಾದ ಕೋಡಿ ಭಾಸ್ಕರ, ಕುಂಬಳಚೇರಿ ಗಣಪತಿ, ಮೂಲೆಮಜಲು ವಿಶ್ವನಾಥ, ನಿಡ್ಯಮಲೆ ಪುರುಷೋತ್ತಮ, ದೇವತಕ್ಕ ರಾಮಕಜೆ ರಾಜುಗೋಪಾಲ, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಮಾಜಿ ಮೊಕ್ತೇಸರುಗಳು, ಜನಪ್ರತಿನಿಧಿಗಳು, ಭಕ್ತಾದಿಗಳು ಇದ್ದರು.