ಮಡಿಕೇರಿ, ಅ. ೨: ಕೊಡಗಿನವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದರಲ್ಲಿ ಪ್ರಸ್ತುತದ ಸಮಾಜದಲ್ಲಿ ಹೆಚ್ಚಾಗಿ ಆಕರ್ಷಣೆಯಾಗಿರುವದು ಚಲನಚಿತ್ರರಂಗ... ಈ ಕ್ಷೇತ್ರದಲ್ಲಿಯೂ ಕೊಡಗಿನ ಹಲವಾರು ಮಂದಿ ಹೆಸರು ಮಾಡಿದ್ದಾರೆ. ಯುವತಿಯರು ಹೆಚ್ಚು ಹೆಸರು - ಸಾಧನೆ ಮಾಡಿದ್ದು, ಇವರ ನಡುವೆ ಇತ್ತೀಚಿನ ವರ್ಷಗಳಲ್ಲಿ ಯುವಕರು ಕೂಡ ಚಲನ ಚಿತ್ರರಂಗದಲ್ಲಿ ತಮ್ಮ ಪ್ರತಿಭೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇವರುಗಳೆಲ್ಲರ ಪೈಕಿ ಬಹುತೇಕರು ಗುರುತಿಸಿಕೊಂಡಿರುವದು ಸ್ಯಾಂಡಲ್‌ವುಡ್‌ನಲ್ಲಿ ಒಂದಷ್ಟು ಯುವ ನಟಿಯರು ಪ್ರಸ್ತುತ ಕನ್ನಡದೊಂದಿಗೆ ತಮಿಳು, ತೆಲುಗು, ಮಲೆಯಾಳಂ, ಬೋಜ್‌ಪುರಿ ಇತ್ಯಾದಿ ಭಾಷೆಗಳ ಚಿತ್ರಗಳಲ್ಲೂ ಗುರುತಿಸಲ್ಪಟ್ಟಿದ್ದು, ಬೇಡಿಕೆಯ ನಟಿಗಳಾಗಿದ್ದಾರೆ.
ಈ ಪ್ರತಿಭೆಗಳ ನಡುವೆ ಮತ್ತೊಬ್ಬ ಯುವಕ ಬಾಲಿವುಡ್‌ನಲ್ಲಿ ಮಿಂಚು ಹರಿಸುತ್ತಿರುವದು ವಿಶೇಷವಾಗಿದೆ. ಇವರು ಮೂಲತಃ ಕಕ್ಕಬ್ಬೆಯವರಾದ ಕಂಬೆಯAಡ ಗುಲ್ಷನ್ ದೇವಯ್ಯ. ಬೆಂಗಳೂರಿನಲ್ಲಿ ನಾಟಕ ರಂಗದ ಮೂಲಕ ಚಿತ್ರರಂಗದತ್ತ ಆಸಕ್ತಿ ತೋರಿ ಹಲವರಿಂದ ಗುರುತಿಸಲ್ಪಟ್ಟು ದೇಶದಲ್ಲಿ ಹಿಂದಿ ಚಿತ್ರರಂಗದ ಪ್ರಮುಖ ನಗರಿಯಾಗಿರುವ ಮುಂಬೈಯತ್ತ ದಾವಿಸಿದ ಗುಲ್ಷನ್ ತಮ್ಮ ಪ್ರತಿಭೆಯ ಮೂಲಕ ಹೆಸರು ಮಾಡುತ್ತಿದ್ದಾರೆ.
೨೦೦೦ ದಿಂದ ೨೦೦೮ರ ತನಕ ಬೆಂಗಳೂರಿನಲ್ಲಿ ನಾಟಕರಂಗದಲ್ಲಿ ಗಮನ ಸೆಳೆದಿದ್ದ ಗುಲ್ಷನ್ ೨೦೦೮ರಲ್ಲಿ ಮುಂಬೈ ಪ್ರವೇಶಿಸಿದ್ದಾರೆ. ಪ್ರಸ್ತುತ ಇವರು ಸುಮಾರು ೧೫ ಹಿಂದಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ನಾಯಕರಾಗಿ ಲೀಡ್‌ರೋಲ್, ಸಪೋಟಿಂಗ್ ರೋಲ್‌ನಂತಹ ಹಲವು ಪಾತ್ರಗಳನ್ನು ಯಶಸ್ವಿಯಾಗಿ ನಟಿಸಿರುವ ಗುಲ್ಷನ್ ಬಾಲಿವುಡ್‌ನಲ್ಲಿ ಹೆಸರು ಮಾಡುತ್ತಿದ್ದಾರೆ.
‘ದೆಟ್ ಗರ್ಲ್ ಇನ್ ಯಲ್ಲೋ ಮೂಡ್’ ಇವರ ನಟನೆಯ ಪ್ರಥಮ ಚಿತ್ರ. ಆದರೆ, ಮೊದಲು ತೆರೆಗೆ ಬಂದಿದ್ದು ಮಾತ್ರ ಬಾಲಿವುಡ್‌ನ ಹೆಸರಾಂತ ನಟ ಅಭಿಷೇಕ್ ಬಚ್ಚನ್ ಜತೆ ಅಭಿನಯಿಸಿದ ದಮ್ಮಾರೆ ದಮ್ ಚಿತ್ರ. ಅಭಿಷೇಕ್ ಬಚ್ಚನ್, ಬಿಪಾಷಾ ಬಸು ಅವರೊಂದಿಗೆ ಗುಲ್ಷನ್ ಇದರಲ್ಲಿ ನಟಿಸಿದ್ದಾರೆ. ಸೈತಾನ್, ಕಲ್ಕಿ, ಹಂಟರ್, ಕಮಾಂಡೋ -೩ ಯಂತಹ ಸುಮಾರು ೧೫ ಚಿತ್ರಗಳಲ್ಲಿ ಈ ತನಕ ಗುಲ್ಷನ್ ಅಭಿನಯಿಸಿದ್ದಾರೆ. ಹಲವು ಖ್ಯಾತನಾಮ ನಟ - ನಟಿಯರೊಂದಿಗೆ ತಮ್ಮ ಪ್ರತಿಭೆ ತೋರಿರುವ ಇವರು ಬಾಲಿವುಡ್ ‘ಟಫ್’ ಇದೆ. ಹಲವಾರು ಟ್ಯಾಲೆಂಟ್ಸ್ ಆಸಕ್ತಿಯಿಂದ ಬರುತ್ತಾರೆ. ಆದರೆ ಅವಕಾಶಗಳು ವಿರಳ. ಈ ವಿಚಾರದಲ್ಲಿ ತಾವು ಅದೃಷ್ಟವಂತರು ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದರು. ಇದು ಬಹುದೊಡ್ಡ ಇಂಡಸ್ಟಿç... ಎಷ್ಟಾಬ್ಲಿಷ್ ಆಗುವದು ಹೇಳಿದಷ್ಟು ಸುಲಭವಲ್ಲ ಎಂಬದು ಇವರ ಅನುಭವದ ಮಾತು. ಇವರು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಅನ್ನೂ ಮಾಡಿದ್ದಾರೆ.
ತಂದೆ - ತಾಯಿ ಬೆಂಗಳೂರಿನಲ್ಲಿ ಬಿಇಎಲ್ ಸಂಸ್ಥೆಯಲ್ಲಿದ್ದರು. ಇವರಿಗೂ ಸಂಗೀತ - ನಾಟಕದಲ್ಲಿ ಆಸಕ್ತಿ ಇದ್ದು, ಇದರಲ್ಲಿ ತೊಡಗಿಸಿಕೊಂಡಿದ್ದರು. ಕನ್ನಡ, ಇಂಗ್ಲಿಷ್, ಕೊಡವ ಭಾಷೆಗಳಲ್ಲಿ ತಂದೆ ಕಂಬೆಯAಡ ದೇವಯ್ಯ ಹಾಗೂ ತಾಯಿ ಪುಷ್ಪ ದೇವಯ್ಯ ತಮ್ಮ ಕಲೆಯನ್ನು ಈ ಹಿಂದೆ ಪ್ರದರ್ಶಿಸಿದ್ದಾರೆ. ಇವರುಗಳಿಗಿದ್ದ ಆಸಕ್ತಿಯೇ ಗುಲ್ಷನ್ ದೇವಯ್ಯರಿಗೂ ಪ್ರೇರಣೆಯಾಗಿದ್ದು, ಕೊಡಗಿನ ಏಕೈಕ ಬಾಲಿವುಡ್ ನಟರಾಗಿ ಇದೀಗ ಗುರುತಿಸಲ್ಪಡುತ್ತಿದ್ದಾರೆ. ಇದೀಗ ಗುಲ್ಷನ್ ದೇವಯ್ಯ ಹಾಗೂ ತಾಪ್ಸಿ ಪನ್ನು ಅವರೊಂದಿಗೆ ‘ಬ್ಲರ್’ ಎಂಬ ಹೊಸ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರೀಕರಣದ ಹಂತದಲ್ಲಿದೆ.
- ಶಶಿ ಸೋಮಯ್ಯ