ಮಡಿಕೇರಿ, ಸೆ. ೧: ಮಡಿಕೇರಿ ನಗರದ ಪೌರಕಾರ್ಮಿಕರಿಗೆ ವಸತಿಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸ ಲಾಗಿದ್ದು, ಜಿಲ್ಲಾಡಳಿತ ಉದ್ದೇಶಿತ ಯೋಜನೆಗೆ ೧ ಎಕರೆ ಜಾಗವನ್ನು ಗುರುತಿಸಿದೆ. ಈ ನಿಟ್ಟಿನಲ್ಲಿ ಮನೆಗಳ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ನಗರದ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರನ್ನು ಗೌರವಿಸುವ ಕೆಲಸವಾಗಬೇಕು. ಸಮಾಜದ ಶುಚಿತ್ವ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ಪೌರಕಾರ್ಮಿಕರು ವಹಿಸಿದ್ದಾರೆ. ಪೌರಕಾರ್ಮಿಕ ದಿನಾಚರಣೆ ಮೂಲಕ ಅವರಲ್ಲಿ ಸ್ಫೂರ್ತಿ ತುಂಬುವ ಕೆಲಸವಾಗಬೇಕು. ಪೌರ ಕಾರ್ಮಿಕರು ಇಲ್ಲದಿದ್ದಲ್ಲಿ ಸಮಾಜದ ಪರಿಸ್ಥಿತಿ ಬದಲಾಗುತ್ತದೆ. ಚಳಿ, ಗಾಳಿ, ಮಳೆ ಲೆಕ್ಕಿಸದೆ ಸಮಾಜದ ಆರೋಗ್ಯಕ್ಕೆ ಶ್ರಮಿಸುತ್ತಿದ್ದಾರೆ. ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವುದನ್ನು ತಡೆಗಟ್ಟಬೇಕು ಈ ನಿಟ್ಟಿನಲ್ಲಿ ನಗರಸಭಾ ಸದಸ್ಯರು ಮುತುವರ್ಜಿ ವಹಿಸಬೇಕು. ಸಾರ್ವಜನಿಕರು ಕಸ ಮುಕ್ತ ನಗರ ವನ್ನಾಗಿ ಮಾಡಲು ಆಡಳಿತದೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಮಕ್ಕಳ ಶಿಕ್ಷಣಕ್ಕೆ ಪೌರಕಾರ್ಮಿಕರು ಹೆಚ್ಚಿನ ಒತ್ತು ನೀಡಬೇಕು. ಮದ್ಯದ ದಾಸರಾಗಿ ಆರೋಗ್ಯ ಹಾಳುಮಾಡಿ ಕೊಳ್ಳುತ್ತಿರುವುದು ವಿಷಾದನೀಯ. ಹಾಗಾಗಿ ದುಶ್ಚಟ ಮುಕ್ತರಾಗಬೇಕು ಎಂದು ಕರೆ ನೀಡಿದರು.
(ಮೊದಲ ಪುಟದಿಂದ) ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾತನಾಡಿ, ಪೌರಾಡಳಿತದ ಕೇಂದ್ರಬಿAದು ಪೌರಕಾರ್ಮಿಕರಾಗಿದ್ದಾರೆ. ಸಮಾಜದಲ್ಲಿ ಜವಾಬ್ದಾರಿಯತ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ. ಪೌರಕಾರ್ಮಿಕರು ಒಂದು ರೀತಿಯ ಜನಸೇವಕರು. ಅವರಿಗೆ ಸರಕಾರದ ಸೌಲಭ್ಯ ಒದಗಿಸುವ ಕೆಲಸ ಪ್ರಾಮಾಣಿಕವಾಗಿ ಮಾಡಲಾಗುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದರು.
ಪೌರಕಾರ್ಮಿಕರಾದ ಹೋಬಳಿ, ಪುಟ್ಟಮ್ಮ, ಸುಂದರ, ಭೂತಣ್ಣ ಅವರ ಸೇವೆಯನ್ನು ಪರಿಗಣಿಸಿ ಈ ಸಂದರ್ಭ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಎಲ್ಲಾ ಪೌರಕಾರ್ಮಿಕರಿಗೆ ಎಲೆಕ್ಟಿçಕ್ ಕ್ಯಟಲ್ ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು.
ಕ್ರೀಡಾಕೂಟ ವಿಜೇತರು
ಪೌರಕಾರ್ಮಿಕರ ದಿನದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭ ಬಹುಮಾ ವಿತರಿಸಲಾಯಿತು.
ಲೆಮೆನ್ ಆ್ಯಂಡ್ ಸ್ಪೂನ್ ಸ್ಪರ್ಧೆಯಲ್ಲಿ ಭಾಗ್ಯಮ್ಮ (ಪ್ರ), ಲಕ್ಷಿ÷್ಮ (ದ್ವಿ) ಮಂಜುಳಮ್ಮ (ತೃ), ೪೦ ವರ್ಷದೊಳಗಿನವರ ಗೋಣಿಚೀಲ ಓಟದಲ್ಲಿ ಶಂಕರ್ (ಪ್ರ), ಮಂಜುನಾಥ್ (ದ್ವಿ), ಅಣ್ಣಪ್ಪ (ತೃ), ೪೦ ವರ್ಷ ಮೇಲ್ಪಟ್ಟ ಗೋಣಿಚೀಲ ಓಟದಲ್ಲಿ ನೌಶದ್ (ಪ್ರ), ಹನುಮಂತ (ದ್ವಿ), ಈರಪ್ಪ (ತೃ), ೨೦೦ ಮೀ ಓಟ ನೌಶದ್ (ಪ್ರ), ಅಣ್ಣಪ್ಪ (ದ್ವಿ), ಶಿವಕುಮಾರ್ (ತೃ), ಮಹಿಳೆಯರ ವಿಭಾಗ ಓಟದಲ್ಲಿ ಭಾಗ್ಯಮ್ಮ(ಪ್ರ), ಲಕ್ಷ÷್ಮಮ್ಮ (ದ್ವಿ), ಮಂಜುಳ ಪಿ (ತೃತೀಯ)., ಸಂಗೀತ ಕುರ್ಚಿಯಲ್ಲಿ ನೌಷದ್ (ಪ್ರ), ಭಾಗ್ಯಮ್ಮ (ದ್ವಿ), ಹನುಮಂತ (ತೃ), ಕಚೇರಿ ಸಿಬ್ಬಂದಿಗಳಿಗೆ ನಡೆದ ಸಂಗೀತ ಕುರ್ಚಿಯಲ್ಲಿ ಹರಿಣಿ (ಪ್ರ), ಶಮಂತ್ (ದ್ವಿ), ಜ್ಯೋತಿ (ತೃ), ಹಗ್ಗಜಗ್ಗಾಟದಲ್ಲಿ ಪೌರಕಾರ್ಮಿಕರ ತಂಡ ಪ್ರಥಮ, ಕಚೇರಿ ಸಿಬ್ಬಂದಿಗಳ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರು.
ಪೌರಕಾರ್ಮಿಕರ ವಿಶೇಷ ಭತ್ಯೆ ೩ ಸಾವಿರದಿಂದ ೭ ಸಾವಿರಕ್ಕೆ ಹೆಚ್ಚಿಸಿದ್ದು, ಅದರ ಚೆಕ್ ಹಾಗೂ ಐಎಎಸ್ ತರಬೇತಿ ಪಡೆಯುತ್ತಿರುವ ಪೌರಕಾರ್ಮಿಕ ರಂಗಪ್ಪ ಅವರ ಪುತ್ರಿ ರಮ್ಯ ಅವರಿಗೆ ನಗರಸಭೆ ನಿಧಿಯಿಂದ ರೂ. ೧.೫೦ ಲಕ್ಷದ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ನಗರಸಭೆ ಪೌರಾಯುಕ್ತ ರಾಮದಾಸ್ ಮಾತನಾಡಿ, ಪೌರ ಕಾರ್ಮಿಕರ ಸವಲತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಉಪವಿಭಾಗಧಿಕಾರಿ ಈಶ್ವರ್ ಕುಮಾರ್ ಖಾಂಡು, ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ನಗರಸಭೆ ಸದಸ್ಯರುಗಳು ಉಪಸ್ಥಿತರಿದ್ದರು.
ನಗರಸಭೆ ಲೆಕ್ಕಾಧಿಕಾರಿ ತಾಹಿರ್ ಸ್ವಾಗತಿಸಿ, ಪರಿಸರ ವಿಭಾಗದ ಎಇಇ ಸೌಮ್ಯ ನಿರೂಪಿಸಿ, ರಾಜೇಂದ್ರ ಕುಮಾರ್ ವಂದಿಸಿದರು.
ಮನೆ ಮಾಡಿದ ಸಂಭ್ರಮ
ದಿನನಿತ್ಯ ಸಮಾಜಕ್ಕಾಗಿ ದುಡಿಯುವ ಪೌರಕಾರ್ಮಿಕರು ಇಂದು ಸಂಭ್ರಮದಲ್ಲಿದ್ದರು, ಮನೆ ಕಾರ್ಯಕ್ರಮದ ರೀತಿಯಲ್ಲಿ ಕಾರ್ಮಿಕರು ಹಾಗೂ ಅವರ ಕುಟುಂಬ ಹೊಸ ಬಟ್ಟೆ ತೊಟ್ಟು ಓಡಾಡುತ್ತಿದ್ದರು. ಕಾವೇರಿ ಕಲಾಕ್ಷೇತ್ರವನ್ನು ಸಿಂಗರಿಸಿ, ಮಹಿಳೆಯರು ರಂಗೋಲಿ ಬಿಡಿಸಿ ಹಬ್ಬದಂತೆ ದಿನಾಚರಣೆ ಆಚರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅವರಲ್ಲಿನ ಪ್ರತಿಭೆಗಳು ಈ ಸಂದರ್ಭ ಅನಾವರಣವಾಯಿತು.