ಮಡಿಕೇರಿ, ಅ. ೨: ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಯುವ ಸಾಧ್ಯತೆ ಇದ್ದು, ಜಿಲ್ಲೆಯ ರಾಜಕೀಯ ಪಕ್ಷಗಳು ಬೂತ್ ಮಟ್ಟದಿಂದಲೇ ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಮುಂದಾಗುತ್ತಿವೆ.
ಹೆಚ್ಚು ಜಿಲ್ಲಾ ಪಂಚಾಯತ್ ಸ್ಥಾನಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳಲು ಪ್ರಮುಖ ಪಕ್ಷಗಳು ತಯಾರಿ ನಡೆಸುತ್ತಿವೆ.
ಜುಲೈ ೦೧ ರಂದು ಪ್ರಕಟಗೊಂಡ ಕರಡು ಮೀಸಲಾತಿಗೆ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಆಕ್ಷೇಪಣೆ ವ್ಯಕ್ತವಾಗಿದ್ದು, ಆಕಾಂಕ್ಷಿಗಳು ಚುನಾವಣಾ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಅಲ್ಲದೇ ಕ್ಷೇತ್ರ ಪುನರ್ ವಿಂಗಡಣೆಯ ಬಗ್ಗೆ ಎಲ್ಲಾ ಪಕ್ಷಗಳು ತಕರಾರು ಎತ್ತಿವೆ.
ಇದೀಗ ಚುನಾವಣಾ ಆಯೋಗ ಹಾಗೂ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆಯ ಬಗ್ಗೆ ಸಮಿತಿ ರಚಿಸಲು ಮುಂದಾಗಿದ್ದು,
ಅAತಿಮವಾಗಿ ಕ್ಷೇತ್ರದ ಪುನರ್ ವಿಂಗಡಣೆಯ ಬಗ್ಗೆ ಸಮಿತಿ ವರದಿ ಯಾವಾಗ ನೀಡಲಿದೆ ಎಂಬುದರ ಮೇಲೆ ಯಾವಾಗ ಚುನಾವಣೆ ನಡೆಯುತ್ತದೆ ಎಂಬುದು ನಿರ್ಧಾರವಾಗುತ್ತದೆ.
ಭದ್ರಕೋಟೆ ಸುಭದ್ರಗೊಳಿಸಲು ಕಮಲ ಪಡೆ ಚಿತ್ತ
ಕಳೆದ ಎರಡು ದಶಕಗಳಿಂದ ಕೊಡಗು ಬಿಜೆಪಿಯ ಭದ ್ರಕೋಟೆಯಾಗಿದೆ. ಜಿಲ್ಲಾ ಪಂಚಾಯತ್ ಹಾಗೂ ಮೂರು ತಾಲೂಕು ಪಂಚಾಯತ್ಗಳಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.
೨೦೧೬ ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ೨೯ ಸ್ಥಾನಗಳಲ್ಲಿ ೧೮ ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು.
ಹಾಗೂ ಮೂರು ತಾಲೂಕು ಪಂಚಾಯತ್ ಕೂಡ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು.
ಇದೀಗ ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕು ಹೊಸದಾಗಿ ಘೋಷಣೆಯಾಗಿ ಕಾರ್ಯರೂಪಕ್ಕೆ ಬಂದಿದ್ದು, ಈ ಬಾರಿಯ ಚುನಾವಣೆ ಹೊಸ ಸವಾಲಾಗಿದೆ.
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಜಿಲ್ಲಾ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿಯಲು ಕಮಲ ಪಾಳಯ ತನ್ನ ಪ್ರಯತ್ನದಲ್ಲಿದೆ.
ಕೈ ಪಾಳಯಕ್ಕೆ ಪುಟಿದೇಳುವ ತವಕ
ಒಂದಾನೊAದು ಕಾಲದಲ್ಲಿ ಕೊಡಗು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಕಳೆದ ಎರಡು ದಶಕಗಳಿಂದ ಪಂಚಾಯತ್ ಚುನಾವಣೆಯಲ್ಲಿ ಕೂಡ ಗೆಲ್ಲಲು ಕೈ ಪಾಳಯ ಪರದಾಡುವಂತಹ ಪರಿಸ್ಥಿತಿ ಕಾಂಗ್ರೆಸ್ನಲ್ಲಿ ನಿರ್ಮಾಣವಾಗಿದೆ.
೨೦೧೬ ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ೨೯ ಸ್ಥಾನಗಳಲ್ಲಿ, ೧೦ ಸ್ಥಾನಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಮೂರು ತಾಲೂಕು ಪಂಚಾಯತ್ ಅಧಿಕಾರ ಕೂಡ ಕೈ ತಪ್ಪಿತ್ತು.