ಚೆಟ್ಟಳ್ಳಿ, ಅ. ೨: ಕೊಡವ ರೈರ್ಸ್ ಕ್ಲಬ್ ವತಿಯಿಂದ ಕಾವೇರಿ ಚಂಗ್ರಾದಿಯ ಪ್ರಯುಕ್ತ ಕ್ಲೀನ್ಡ್ರೆöÊವ್@ತಲಕಾವೇರಿ ಎಂಬ ಕಾರ್ಯಕ್ರಮದ ಮೂಲಕ ೧೩೫ಕ್ಕೂ ಹೆಚ್ಚು ಸದಸ್ಯರು ತಲಕಾವೇರಿಯಲ್ಲಿ ಶುಚಿತ್ವ ಕಾರ್ಯವನ್ನು ನಡೆಸಿದರು.
ಕೊಡವ ರೈಡರ್ಸ್ ಕ್ಲಬ್ನ ಸದಸ್ಯರು ತಾ. ೨ ರಂದು ಬೈಕ್ರೈಡ್ ಮೂಲಕ ಬೆಳಗಿನ ಜಾವ ಬೆಂಗಳೂರಿನಿAದ ಹೊರಟು ಗೋಣಿಕೊಪ್ಪದ ಮೂಲಕ ವೀರಾಜಪೇಟೆಗೆ ಬಂದು ಸುಮಾರು ೭೦ ಬೈಕ್ ಹಾಗೂ ಕಾರಿನಲ್ಲಿ ೧೩೫ ಸದಸ್ಯರ ತಂಡ ಭಾಗಮಂಡಲಕ್ಕೆ ತೆರಳಿದರು. ಭಗಂಡೇಶ್ವರನ ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಿತು. ನಂತರ ತಲಕಾವೇರಿಗೆ ತೆರಳಿ ಸ್ವಚ್ಛತಾ ಕಾರ್ಯ ನಡೆಸಿತು. ಕ್ಲಬ್ನ ವತಿಯಿಂದ ಶುಚಿತ್ವ ಸಾಮಗ್ರಿಗಳನ್ನು ದೇವಾಲಯ ಸಮಿತಿಗೆ ನೀಡಲಾಯಿತು.
ಕೊಡವ ರೈಡರ್ಸ್ ಕ್ಲಬ್ ಸಂಚಾಲಕ ಅಜ್ಜಿಕುಟ್ಟೀರ ಪ್ರಥ್ವಿ ಸುಬ್ಬಯ್ಯ, ಸಣ್ಣುವಂಡ ದರ್ಶನ್ ಕಾವೇರಪ್ಪ, ಪದಾಧಿಕಾರಿಗಳಾದ ಅಪ್ಪಂಡೆರAಡ ದೇವಯ್ಯ, ಮರುವಂಡ ಸುಮಾ ಕುಟ್ಟಪ್ಪ, ಬೊಮ್ಮಂಡ ರೋಶನ್ ಕಾರ್ಯಪ್ಪ, ಮೊಣ್ಣಂಡ ಗಗನ್ ಮಂದಣ್ಣ, ಗುಡಿಯಂಗಡ ಲಿಖಿನ್ ಬೋಪಣ್ಣ, ಅಖಿಲ ಕೊಡವ ಸಮಾಜ ಯೂತ್ವಿಂಗ್ ಅಧ್ಯಕ್ಷ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ, ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ ಬೋಪಯ್ಯ, ಪೊನ್ನಂಪೇಟೆಯ ಜಿಸಿಐ ಪದಾಧಿಕಾರಿಗಳು, ಕೊಡವ ರೈಡರ್ಸ್ ಕ್ಲಬ್ ಸದಸ್ಯರು ಹಾಗೂ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.
-ಪುತ್ತರಿರ ಕರುಣ್ಕಾಳಯ್ಯ