ಮಡಿಕೇರಿ, ಅ. ೨: ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ನಿಗಮ ಮಂಡಳಿಯ ನಿರ್ದೇಶಕ ಛಾಯಾಪತಿಯವರ ಸಹಕಾರದೊಂದಿಗೆ ಪುರೋಹಿತರು, ಅರ್ಚಕರು ಹಾಗೂ ಬಾಣಸಿಗರನ್ನು ಅಸಂಘಟಿತ ಕಾರ್ಮಿಕ ವರ್ಗದವರೆಂದು ಗುರುತಿಸಿ, ಕಾರ್ಮಿಕ ಇಲಾಖೆ ವತಿಯಿಂದ ಆಹಾರದ ಕಿಟ್‌ನ್ನು ಕೊಡಗು ಜಿಲ್ಲಾ ಬ್ರಾಹ್ಮಣರ ಸಂಘದ ಸಹಯೋಗದೊಂದಿಗೆ ವಿತರಿಸಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಡಾ. ಮಹಾಭಲೇಶ್ವರ್ ಭಟ್, ಧಾರ್ಮಿಕತೆ, ಪರಂಪರೆ, ಉತ್ತಮ ಸಂಸ್ಕೃತಿ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಅಭಿವೃದ್ಧಿಗೆ ನಿಗಮ ಮಂಡಳಿಯನ್ನು ರಚಿಸಿದೆ. ಆ ಮೂಲಕÀ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ಅನೇಕ ಯೋಜನೆಗಳನ್ನು ರೂಪಿಸಿವೆ. ಇವುಗಳನ್ನು ಸುದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಂಘದ ಕಾರ್ಯದರ್ಶಿ ಕೆ.ಎಸ್. ರಾಮದಾಸ್, ಖಜಾಂಚಿ ಹೆಚ್.ಆರ್. ಮುರುಳಿ, ಪ್ರಕಾಶ್, ಸದಸ್ಯರುಗಳಾದ ಶಾಭಟ್ ಮೈತಾಡಿ, ಕುಮಾರ್ ಸುಹಾಸ್ ಈ ಸಂದರ್ಭ ಹಾಜರಿದ್ದರು.