ಆಲೂರು ಸಿದ್ದಾಪುರ, ಅ. ೨: ಆಲೂರುಸಿದ್ದಾಪುರ ಗ್ರಾ.ಪಂ.ಯ ಗ್ರಾಮಸಭೆ ಅಂಕನಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷ ಮೋಹನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆ ಪ್ರಾರಂಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗ್ರಾಮಸ್ಥರಾದ ರಾಜಪ್ಪ ಮತ್ತಿತರರು ಕಳೆದ ಫೆಬ್ರವರಿಯಲ್ಲಿ ಅಂಕನಹಳ್ಳಿ ವ್ಯಾಪ್ತಿಯಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ನಮ್ಮ ವ್ಯಾಪ್ತಿಯಲ್ಲಿ ತೋಟದ ಬೆಳೆ, ಜೋಳ, ಹಸಿರು ಮೆಣಸು, ಕಾಫಿ, ಕಾಳು ಮೆಣಸು, ಬಾಳೆ, ತೆಂಗು ಸೇರಿದಂತೆ ರೈತರು ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣ ವಾಗಿ ನಾಶಗೊಂಡು ರೈತರಿಗೆ ಹಾನಿ ಯಾಗಿತ್ತು. ಜಿಲ್ಲಾಧಿಕಾರಿ ಸೇರಿದಂತೆ ಸಂಬAಧಪಟ್ಟ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು. ತಿಂಗಳುಗಳು ಕಳೆದರೂ ರೈತರಿಗೆ ಪರಿಹಾರ ಬಂದಿಲ್ಲ. ಇದರ ಆಲೂರು ಸಿದ್ದಾಪುರ, ಅ. ೨: ಆಲೂರುಸಿದ್ದಾಪುರ ಗ್ರಾ.ಪಂ.ಯ ಗ್ರಾಮಸಭೆ ಅಂಕನಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷ ಮೋಹನ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆ ಪ್ರಾರಂಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿ ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಗ್ರಾಮಸ್ಥರಾದ ರಾಜಪ್ಪ ಮತ್ತಿತರರು ಕಳೆದ ಫೆಬ್ರವರಿಯಲ್ಲಿ ಅಂಕನಹಳ್ಳಿ ವ್ಯಾಪ್ತಿಯಲ್ಲಿ ಅಕಾಲಿಕ ಆಲಿಕಲ್ಲು ಮಳೆಯಿಂದಾಗಿ ನಮ್ಮ ವ್ಯಾಪ್ತಿಯಲ್ಲಿ ತೋಟದ ಬೆಳೆ, ಜೋಳ, ಹಸಿರು ಮೆಣಸು, ಕಾಫಿ, ಕಾಳು ಮೆಣಸು, ಬಾಳೆ, ತೆಂಗು ಸೇರಿದಂತೆ ರೈತರು ಬೆಳೆದ ಎಲ್ಲಾ ಬೆಳೆಗಳು ಸಂಪೂರ್ಣ ವಾಗಿ ನಾಶಗೊಂಡು ರೈತರಿಗೆ ಹಾನಿ ಯಾಗಿತ್ತು. ಜಿಲ್ಲಾಧಿಕಾರಿ ಸೇರಿದಂತೆ ಸಂಬAಧಪಟ್ಟ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರು. ತಿಂಗಳುಗಳು ಕಳೆದರೂ ರೈತರಿಗೆ ಪರಿಹಾರ ಬಂದಿಲ್ಲ. ಇದರ ಸಿಬ್ಬಂದಿಯನ್ನು ಕಳಿಸಿಕೊಡುವು ದರಿಂದ ಗ್ರಾಮಸ್ಥರಿಗೆ, ರೈತರಿಗೆ ಸೂಕ್ತ ಮಾಹಿತಿ ಸಿಗುವುದಿಲ್ಲ ಎಂದರು.

ಗ್ರಾ.ಪಂ.ಯಿAದ ಮನೆ ಮತ್ತು ವಾಣಿಜ್ಯ ಮುಂತಾದ ಕಟ್ಟಡ ನಿರ್ಮಾಣ ಸಂದರ್ಭ ಎನ್.ಒ.ಸಿ ನೀಡುವ ಬಗ್ಗೆ ಸತೀಶ್ ಎಂಬವರು ಪ್ರಸ್ತಾಪಿಸಿದ ವೇಳೆ ಗ್ರಾಮಸ್ಥರಿಗೆ ಉತ್ತರ ನೀಡಿದ ಗ್ರಾ.ಪಂ. ಪಿಡಿಒ ಪೂರ್ಣಿಮ ಸರಕಾರದ ಆದೇಶದಂತೆ ಮನೆ, ವಾಣಿಜ್ಯ ಸಂಕಿರಣ ಮುಂತಾದ ಕಟ್ಟಡ ನಿರ್ಮಾಣ ಮಾಡುವ ಮೊದಲು ಮಾಲೀಕರು ಮೊದಲು ಜಾಗದ ಭೂ ಪರಿವರ್ತನೆ ದಾಖಲಾತಿ ಪತ್ರವನ್ನು ಗ್ರಾ.ಪಂ.ಗೆ ನೀಡಿದರೆ ಮಾತ್ರ ಎನ್.ಒ.ಸಿ ನೀಡಲಾಗುತ್ತದೆ ಎಂದು ಸ್ಪಷ್ಟ ಪಡಿಸಿದರು. ಸಭೆಯಲ್ಲಿ ಕೃಷಿ, ಹೈನುಗಾರಿಕೆ, ಕಂದಾಯ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಲಾಯಿತು.

ಆಲೂರು-ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುಪರ್ಣ ಮಾಹಿತಿ ನೀಡಿ-ಕೋವಿಡ್ ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂದು ಜನರು ಉದಾಸೀನ ಮಾಡುವುದು ಬೇಡ, ಲಸಿಕೆ ಹಾಕಿಸಿಕೊಂಡವರ ಮಾರ್ಗಸೂಚಿಯನ್ನು ಪಾಲಿಸದಿದ್ದರೆ ಕೊರೊನಾ ಸೋಂಕು ಬರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಪಾಲಿಸುವುದು ಅಗತ್ಯ ಎಂದರು.

ಶಾಲೆಗಳು ಪ್ರಾರಂಭವಾಗಿದ್ದು ೧ ರಿಂದ ೬ನೇ ತರಗತಿ ಮುಂದಿನ ತಿಂಗಳು ೧೬ ರಿಂದ ಪ್ರಾರಂಭ ಗೊಳ್ಳುತ್ತದೆ. ಸರಕಾರಿ ಶಾಲೆಗಳಲ್ಲಿ ಹಂತ ಹಂತವಾಗಿ ಇಂಗ್ಲೀಷ್ ಮಾಧ್ಯಮ ಎಲ್.ಕೆ.ಜಿ ತರಗತಿ ಪ್ರಾರಂಭಗೊಳ್ಳುತ್ತದೆ ಎಂದು ಶಿಕ್ಷಣ ಅಧಿಕಾರಿ ಚಿಣ್ಣಪ್ಪ ಸಮಗ್ರ ಮಾಹಿತಿ ನೀಡಿದರು. ಗ್ರಾಮಸಭೆಯಲ್ಲಿ ಪಶು ವೈದ್ಯಾಧಿಕಾರಿ ಡಾ. ಸತೀಶ್ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಗ್ರಾ.ಪಂ.ಉಪಾಧ್ಯಕ್ಷೆ ದಮಯಂತಿ ಕರುಂಬಯ್ಯ, ಗ್ರಾ.ಪಂ. ಸದಸ್ಯರುಗಳು, ಗ್ರಾ.ಪಂ. ಕಾರ್ಯದರ್ಶಿ ಚಂದ್ರೇಗೌಡ, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.