ಮಡಿಕೇರಿ, ಅ. ೧: ಗುತ್ತಿಗೆದಾರ ರೊಬ್ಬರಿಂದ ಕಾಮಗಾರಿಗಳಿಗೆ ಸಂಬAಧಿಸಿದAತೆ ಹಣಕ್ಕಾಗಿ ಬೇಡಿಕೆ ಇಟ್ಟು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಂದ ಬಂಧಿತರಾಗಿ ಜೈಲು ಸೇರಿರುವ ಅಧಿಕಾರಿಗಳನ್ನು ಈಗಾಗಲೇ ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರ್ ಸಿಂಗ್ ಮೀನಾ ಅವರು ಈ ಅಧಿಕಾರಿಗಳು ಬಂಧಿತರಾದ ಒಂದೆರಡು ದಿನಗಳಲ್ಲೇ ಈ ಬಗ್ಗೆ ಪರಿಶೀಲಿಸಿ ತಮಗಿರುವ ಅಧಿಕಾರದಂತೆ ಅಮಾನತು ಆದೇಶ ಜಾರಿಗೊಳಿಸಿದ್ದಾರೆ.

ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮ ೧೯೫೭ರ, ೧೦ ರಡಿಯಲ್ಲಿ ಇರುವ ಅಧಿಕಾರದಂತೆ ಈ ವಿಚಾರವನ್ನು ಸರಕಾರದ ಸಂಬAಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೂ ತರುವದ ರೊಂದಿಗೆ ಅಮಾನತು ಆದೇಶ ಜಾರಿಗೊಳಿಸಲಾಗಿದೆ.

ಪಂಚಾಯತ್‌ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರಾದ ಶ್ರೀಕಂಠಯ್ಯ, ಕಚೇರಿಯ ತಾಂತ್ರಿಕ ಸಹಾಯಕ ತೌಸಿಫ್, ಕಂಪ್ಯೂಟರ್ ಆಪರೇಟರ್ ಕವನ್, ದ್ವಿತೀಯ ದರ್ಜೆ ಸಹಾಯಕ ರಮೇಶ್ ಹಾಗೂ ಚಾಲಕ ಸಂತೋಷ್ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದರು. ಗುತ್ತಿಗೆದಾರ ನಂದಕುಮಾರ್ ಅವರ ದೂರಿನ ಅನ್ವಯ ಈ ಕ್ರಮಕೈಗೊಳ್ಳಲಾಗಿತ್ತು. ಸರಕಾರಿ ಸೇವೆಯಲ್ಲಿದ್ದ ಶ್ರೀಕಂಠಯ್ಯ, ತೌಸಿಫ್ ಹಾಗೂ ರಮೇಶ್ ಈ ಮೂವರನ್ನು ಅಮಾನತಿಗೆ ಒಳಪಡಿಸಲಾಗಿದ್ದು, ಗುತ್ತಿಗೆ ಆಧಾರದಲ್ಲಿನ ಇನ್ನಿಬ್ಬರಾದ ಕವನ್ ಹಾಗೂ ಸಂತೋಷ್ ವಿರುದ್ಧ ಕ್ರಮಕ್ಕೆ ಆ ಏಜೆನ್ಸಿಗೆ ಸೂಚಿಸಲಾಗಿದೆ.

(ಮೊದಲ ಪುಟದಿಂದ) ಮುಂದಿನ ಆದೇಶದ ತನಕ ಇವರುಗಳು, ಕೇಂದ್ರ ಸ್ಥಾನ ಬಿಟ್ಟು ಹೋಗುವಂತಿಲ್ಲ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿರುವ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್ ಸಿಂಗ್ ಮೀನಾ ಅವರು ಎಸಿಬಿ ದಾಳಿ ನಡೆದ ಒಂದೆರಡು ದಿನದಲ್ಲೇ ಈ ವರದಿಯ ಆಧಾರದಂತೆ ಕ್ರಮ ಜರುಗಿಸಲಾಗಿದೆ. ಈ ಸ್ಥಾನಕ್ಕೆ ಪ್ರಬಾರವಾಗಿ ಬೇರೆ ಅಧಿಕಾರಿ - ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.