ಕೂಡಿಗೆ, ಸೆ. ೩೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದ ಕಡ್ಯದ ಮಾಚಯ್ಯ (ಮೋಹನ್-೫೬) ಎಂಬವರು ಹೆಜ್ಜೇನು ಕಡಿದು ಸಾವನ್ನಪ್ಪಿದ ಘಟನೆ ನಡೆದಿದೆ.
ಮಾಚಯ್ಯ ತಮ್ಮ ಮನೆಯಲ್ಲಿ ಸಾಕಿರುವ ಆಡುಗಳಿಗೆ ಸೊಪ್ಪು ತರಲು ಮಗನೊಂದಿಗೆ ಜಮೀನಿಗೆ ತೆರಳಿದ್ದರು. ಸಣ್ಣ ಮರದಲ್ಲಿದ್ದ ಹೆಜ್ಜೇನು ತಂದೆ-ಮಗನನ್ನು ಕಡಿದಿವೆ. ಆದರೆ ತಂದೆ ಮಾಚಯ್ಯನವರಿಗೆ ಹೆಚ್ಚು ಕಡಿದ ಪರಿಣಾಮವಾಗಿ ಕುಶಾಲನಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಗೆ ಕಳುಹಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ.