ಮಾದಾಪುರ, ಸೆ. ೩೦: ಮೂವತ್ತೊಕ್ಲು ನಿವಾಸಿ ಮಂಡಿರ ಕಾರ್ಯಪ್ಪ ಅವರು ಮಾದಾಪುರದ ಅಂಗಡಿಯೊAದರಿAದ ಖರೀದಿಸಿ ತಂದಿದ್ದ ಮೊಟ್ಟೆಯೊಳಗೆ ಕಬ್ಬಿಣದ ಚೂರುಗಳು ಕಾಣಿಸಿಕೊಂಡಿದ್ದು ಈ ಅಚ್ಚರಿಯ ಪ್ರಕರಣದಿಂದ ಗ್ರಾಮಸ್ಥರು ಆತಂಕಗೊAಡಿದ್ದಾರೆ.
ಶನಿವಾರ ಮಾದಾಪುರದ ಅಂಗಡಿಯೊAದರಿAದ ಹನ್ನೆರಡು ಮೊಟ್ಟೆಗಳನ್ನು ಖರೀದಿಸಿ, ತಂದಿದ್ದ ಮೊಟ್ಟೆಯನ್ನು ನಿನ್ನೆ ರಾತ್ರಿ ಬೇಯಿಸಿ, ತಿನ್ನುವಾಗ ಬಾಯಲ್ಲಿ ಏನೋ ಗಟ್ಟಿ ಚೂರು ಸಿಕ್ಕಿ ತಕ್ಷಣ ಕಾರ್ಯಪ್ಪ ಅವರು ಉಗಿದಿದ್ದಾರೆ. ಇದನ್ನು ಗಮನಿಸಿದ ಅವರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿದ್ದ ಅವರ ಮಗಳಿಗೆ ದೂರವಾಣಿ ಮೂಲಕ ತಿಳಿಸಿದ್ದು ಮೊಟ್ಟೆಯನ್ನು ಹಾಗೆ ಎತ್ತಿಟ್ಟಿದ್ದಾರೆ. ಬೆಳಗ್ಗಿನ ಜಾವ ಅವರದೆ ಕುಟುಂಬದ ಪಕ್ಕದ ಮನೆ ನಿವಾಸಿ ನವೀನ್ ಈ ವಿಷಯ ಅರಿತು, ಮನೆಗೆ ಬಂದು ಪರೀಕ್ಷಿಸಿದಾಗ ರಾತ್ರಿ ಸಿಕ್ಕ ಚೂರಿಗಿಂತಲೂ ಸ್ವಲ್ಪ ದೊಡ್ಡ ಕಬ್ಬಿಣದ ಚೂರು ಬೆಳಿಗ್ಗೆಯೂ ಸಿಕ್ಕಿದೆ.
ಉಳಿದ ಮೊಟ್ಟೆಗಳನ್ನು ಪರೀಕ್ಷಿಸಿದಾಗ ಕೆಲ ಮೊಟ್ಟೆಗಳ ಒಳಗಡೆ ಅಲ್ಲಾಡಿಸುವಾಗ ಸದ್ದು ಬರುತ್ತಿದ್ದು. ಇನ್ನೂ ಕೆಲವು ಬೇಯಿಸಿದ ಮೊಟ್ಟೆಗಳ ಚೂರುಗಳು ರಬ್ಬರ್‌ನಂತೆ ಭಾಸವಾಗುತ್ತಿದೆ. ಇದು ನಕಲಿ ಮೊಟ್ಟೆ ಎನ್ನುವ ಸಂಶಯವನ್ನು ವ್ಯಕ್ತಪಡಿಸಿರುವ ಕಾರ್ಯಪ್ಪನವರು ಈಗಾಗಲೇ ಆಹಾರ ಇಲಾಖೆ ಅವರಿಗೆ ದೂರವಾಣಿ ಮೂಲಕ ದೂರು ಸಲ್ಲಿಸಿದ್ದು ಅವರು ಬಂದು ಪರೀಕ್ಷಿಸುವುದಾಗಿ ಅಭಯ ನೀಡಿದ್ದಾರೆ.
ಪ್ಲಾಸ್ಟಿಕ್ ಅಕ್ಕಿ, ನಕಲಿ ಮೊಟ್ಟೆ ಬೇರೆ ಊರುಗಳಲ್ಲಿ ಈ ಹಿಂದೆ ಸುದ್ದಿಯಾಗಿದ್ದು. ಕೃತಕ ಮೊಟ್ಟೆಗಳ ಆವಿಷ್ಕಾರದಲ್ಲಿ ವಿಜ್ಞಾನಿಗಳು ಶ್ರಮಿಸುತ್ತಿರುವ ಈ ಆಧುನಿಕ ಯುಗದಲ್ಲಿ ನಕಲಿ ಮೊಟ್ಟೆಗಳು ಕೊಡಗಿನ ಗ್ರಾಮದ ಮಾರುಕಟ್ಟೆಗೂ ಬಂದಾಯ್ತೆ? ಎನ್ನುವುದು ಇದೀಗ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಅಸಲಿಯತ್ತು ಏನು ಎಂಬುದನ್ನು ಇನ್ನು ಆರೋಗ್ಯ ಇಲಾಖೆಯವರು ಪರೀಕ್ಷಿಸಿ ಹೇಳಬೇಕಿದೆ. - ವರದಿ: ರಂಜಿತ್ ಕವಲಪಾರ