ಸಿದ್ದಾಪುರ, ಸೆ. ೩೦: ಪರಸ್ತಿçÃಯೊಂದಿಗೆ ಅಕ್ರಮ ಸಂಬAಧ ಇಟ್ಟುಕೊಂಡಿದ್ದ ವ್ಯಕ್ತಿಯೋರ್ವ ಆಕೆಯೊಂದಿಗೆ ಕಲಹ ನಡೆಸಿ, ಮಾರಣಾಂತಿಕ ಹಲ್ಲೆ ನಡೆಸಿ, ಗಂಭೀರ ಗಾಯಗೊಳಿಸಿರುವ ಘಟನೆ ನೆಲ್ಯಹುದಿಕೇರಿ ಗ್ರಾಮದ ಎಂ.ಜಿ. ಕಾಲೋನಿಯಲ್ಲಿ ನಡೆದಿದೆ.
ನೆಲ್ಯಹುದಿಕೇರಿಯ ಎಂ.ಜಿ. ಕಾಲೋನಿ ನಿವಾಸಿ, ಚಾಲಕ ವೃತ್ತಿ ಮಾಡುತ್ತಿದ್ದ ಕುಮಾರ (ಕುಟ್ಟ-೪೦) ಎಂಬಾತ ಈ ಹಿಂದೆ ವಿವಾಹವಾಗಿದ್ದು, ಪತ್ನಿ ಹಾಗೂ ಮಕ್ಕಳು ಇದ್ದಾರೆ. ಆದರೆ ಈತ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬAಧ ಇರಿಸಿಕೊಂಡಿದ್ದ, ಈ ವಿಚಾರ ತಿಳಿದು ಈತನ ಪತ್ನಿ ಹಾಗೂ ಮಕ್ಕಳು ಈತನನ್ನು ತೊರೆದು ಬೇರೆ ಊರಿನಲ್ಲಿ ವಾಸವಾಗಿದ್ದಾರೆ. ಕುಮಾರ ಅಕ್ರಮ ಸಂಬAಧ ಇರಿಸಿಕೊಂಡಿರುವ ಮಹಿಳೆಗೂ ಎರಡು ಮಕ್ಕಳಿದ್ದು, ಈಕೆಯೊಂದಿಗೆ ಆಗಿಂದಾಗ್ಗೆ ಕಲಹ ನಡೆಸುತ್ತಿದ್ದನು. ಗುರುವಾರದಂದು ಮಧ್ಯಾಹ್ನ ಕುಮಾರ ಕಲಹ ನಡೆಸಿದ್ದು, ನಂತರ ಕತ್ತಿಯಿಂದ ಮುಖ, ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುವನ್ನು ಸ್ಥಳೀಯರು ಹಾಗೂ ಗ್ರಾ.ಪಂ. ಸದಸ್ಯರು ಸೇರಿ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಕೆಯ ಪುತ್ರ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿ ಕುಮಾರನನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.