ಪೆರಾಜೆ, ಸೆ. ೩೦: ಗ್ರಾಮ ಮಟ್ಟದ ಪೋಷಣಾ ಅಭಿಯಾನ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ , ಗ್ರಾಮಪಂಚಾಯತ್ ಸದಸ್ಯ ನಂಜಪ್ಪ ನಿಡ್ಯಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಶೀಲಾ ಕೆ. ದೀಪ ಬೆಳಗಿಸುದರ ಮೂಲಕ ಉದ್ಘಾಟಿಸಿ, ಗರ್ಭಿಣಿಯರ ಆಹಾರ ಪದ್ಧತಿ ಮತ್ತು ಆರೈಕೆ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ೮ಜನ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡಲಾಯಿತು. ನಂತರ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಈ ಸಂದರ್ಭ ಪೆರಾಜೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು.ಕೆ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಉದಯಚಂದ್ರ ಕುಂಬಳಚೇರಿ, ಸುಭಾಷ್ ಚಂದ್ರ ಬಂಗಾರಕೋಡಿ, ಪೂರ್ಣಿಮಾ ಉದಯಕುಮಾರ್, ಸುರೇಶ್ ಪೆರುಮುಂಡ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಕನಕಾಂಬಿಕೆ ಅಲ್ಲದೆ ವಿವಿಧ ಮಹಿಳಾ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ಉಷಾಕುಮಾರಿ ಪ್ರಾರ್ಥಿಸಿ ಅಂಗನವಾಡಿ ಕಾರ್ಯಕರ್ತೆ ಯುವಕಲಾ ಸ್ವಾಗತಿಸಿ, ಸರೋಜ ಎನ್.ಎಸ್. ನಿರೂಪಿಸಿದರು.