ಸೋಮವಾರಪೇಟೆ, ಅ. ೧: ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ನೀರು ಪೋಲಾಗುತ್ತಿದ್ದು, ತಕ್ಷಣ ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಐಗೂರು ಪ್ರೌಢಶಾಲೆಯ ಹಿಂಭಾಗ ಕಳೆದ ಹತ್ತು ದಿನಗಳ ಹಿಂದೆಯೇ ಪೈಪ್‌ಲೈನ್ ಒಡೆದು ನೀರು ಫೋಲಾಗುತ್ತಿದೆ. ಇದರಿಂದಾಗಿ ಶಾಲೆಯ ಗೋಡೆಗಳಲ್ಲಿ ಶೀತ ಹೆಚ್ಚಾಗುತ್ತಿದೆ. ತಕ್ಷಣ ಪೈಪ್‌ಲೈನ್ ದುರಸ್ತಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.