ಗೋಣಿಕೊಪ್ಪ, ಅ. ೧: ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದ ೨೦೨೦-೨೧ನೇ ಸಾಲಿನ ಜಮಾಬಂದಿ ಕಾರ್ಯಕ್ರಮವು ತಾ. ೫ರಂದು ಬೆಳಿಗ್ಗೆ ೧೧ ಗಂಟೆಗೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿ ಅಧಕ್ಷೆ ಹೆಚ್.ಕೆ. ಆಶಾ ಅಧ್ಯಕ್ಷತೆಯಲ್ಲಿ ಮತ್ತು ನೋಡೇಲ್ ಅಧಿಕಾರಿ, ತಾಲೂಕು ಯೋಜನಾಧಿಕಾರಿ ಚೆಲುವರಾಜು ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಮತಾ ಜಗದೀಶ್ ಮಾಹಿತಿ ನೀಡಿದ್ದಾರೆ.