ಮಡಿಕೇರಿ, ಸೆ. ೩೦ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವತಿಯಿಂದ ಕುಸುಮ ಸಾರಂಗ ರಂಗ ಘಟಕ ವಿದ್ಯಾರ್ಥಿಗಳಿಗೆ ಅರೆಭಾಷೆ ರಂಗ ತರಬೇತಿ ಶಿಬಿರವು ಅಕ್ಟೋಬರ್, ೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನಲ್ಲಿ ನಡೆಯಲಿದೆ.

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷಿö್ಮÃನಾರಾಯಣ ಕಜೆಗದ್ದೆ, ಸುಬ್ರಹ್ಮಣ್ಯ ಕೆಎಸ್‌ಎಸ್ ಮಹಾವಿದ್ಯಾಲಯದ ಸಂಚಾಲಕ ಮೋಹನ್‌ರಾಂ ಸುಳ್ಳಿ, ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎಸ್. ಗೋವಿಂದ, ನಿವೃತ್ತ ಶಾರೀರಿಕ ಶಿಕ್ಷಣ ನಿರ್ದೇಶಕ ತುಕಾರಾಂ ಏನೆಕಲ್ಲು, ಕುಸುಮ ಸಾರಂಗ ತಂಡದ ನಿರ್ದೇಶಕಿ ಪುಷ್ಪಾ ಡಿ., ಶಿಬಿರದ ನಿರ್ದೇಶಕ ಪ್ರವೀಣ ಎಡಮಂಗಲ, ಶಿಬಿರದ ಸಹನಿರ್ದೇಶಕ ಭೂಮಿನಾಥನ್ ಇತರರು ಪಾಲ್ಗೊಳ್ಳಲಿದ್ದಾರೆ.