ಮಡಿಕೇರಿ, ಸೆ. ೩೦: ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ, ಮತ್ತು ಆಡಳಿತ ಮಂಡಳಿಯಲ್ಲಿ ಸುದೀರ್ಘ ೨ ದಶಕಗಳ ಕಾಲ ಸೇವೆ ಸಲ್ಲಿಸಿದ್ದ ಶ್ರೀಮಂಗಲ ಕುರ್ಚಿ ಗ್ರಾಮದ ಅಜ್ಜಮಾಡ ಶಂಕರು ನಾಚಪ್ಪ (೭೮) ಇಂದು ಬೆಳಿಗ್ಗೆ ಮೈಸೂರಿನಲ್ಲಿ ನಿಧನರಾದರು.

ಕೊಡಗು ಬೆಳೆಗಾರ ಒಕ್ಕೂಟದ ಉಪಾಧ್ಯಕ್ಷ, ಅಧ್ಯಕ್ಷರಾಗಿ ೨ ದಶಕಗಳ ಕಾಲ ಹೋರಾಟ ನಡೆಸಿ, ಕಾಡು ಪ್ರಾಣಿಗಳ ಹಾವಳಿ ತಡೆಗಟ್ಟಲು, ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ, ಬೆಳೆಗಾರರಿಗೆ ಪರಿಹಾರ, ಸಾಲ ಮನ್ನಾ ಮಾಡಲು ದೆಹಲಿ, ಬೆಂಗಳೂರು, ಜಿಲ್ಲಾ ಮಟ್ಟ ಮತ್ತು ಜನಪ್ರತಿನಿಧಿಗಳ ಗಮನ ಸೆಳೆಯುತ್ತ ಬೆಳೆಗಾರರನ್ನು ಸಂಘಟಿಸುತ್ತ ಹೋರಾಟ ನಡೆಸಿ ಸಾರ್ಥಕ ಬದುಕು ಸಾಧಿಸಿದ್ದರು. ನಾಚಪ್ಪ ಅವರ ಅಗಲಿಕೆ ತುಂಬಲಾರದ ನಷ್ಟವಾಗಿದೆ ಎಂದು ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷರು, ಆಡಳಿತ ಮಂಡಳಿ, ಸರ್ವ ಸದಸ್ಯರು ಮತ್ತು ಬೆಳೆಗಾರರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.