ಮಡಿಕೇರಿ, ಸೆ. ೨೯: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್, ಇನ್ನರ್ ವೀಲ್ ಸಹಯೋಗದಲ್ಲಿ ನಗರಸಭೆ ಮತ್ತು ಕೆ.ಎಸ್.ಆರ್.ಟಿ.ಸಿ. ಡಿಪೋದಲ್ಲಿ ಮಧುಮೇಹ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಈ ಸಂದರ್ಭ ೨೨೦ ಮಂದಿಯ ಮಧುಮೇಹ ತಪಾಸಣೆ ಕೈಗೊಳ್ಳಲಾಯಿತು ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷೆ ಅನಿತಾ ಪೂವಯ್ಯ ಮಾಹಿತಿ ನೀಡಿದರು. ಮಡಿಕೇರಿ ಇನ್ನರ್ ವೀಲ್ ಸಹಯೋಗದಲ್ಲಿ ಜರುಗಿದ ಮಧುಮೇಹ ತಪಾಸಣಾ ಶಿಬಿರದಲ್ಲಿ ಕೆ.ಎಸ್.ಆರ್.ಟಿ.ಸಿ. ಡಿಪೋದ ಸಿಬ್ಬಂದಿ ವರ್ಗ ಮತ್ತು ನಗರಸಭೆಯಲ್ಲಿ ಆಯೋಜಿತ ಶಿಬಿರದಲ್ಲಿ ನಗರಸಭೆಯ ಪೌರಕಾರ್ಮಿಕರು, ಸಿಬ್ಬಂದಿಗಳು, ಸಾರ್ವಜನಿಕರಿಗೆ ಮಧುಮೇಹ ತಪಾಸಣೆ ಕೈಗೊಳ್ಳಲಾಯಿತು.

ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ. ಶಿಬಿರದ ಬಗ್ಗೆ ಮಾಹಿತಿ ನೀಡಿ, ಸೆ. ೨೯ ರಂದು ವಿಶ್ವ ಹೃದಯ ರೋಗದ ದಿನಾಚರಣೆ ಪ್ರಯುಕ್ತ ಭಾರತದಾದ್ಯಂತಲಿನ ರೋಟರಿ ಸಂಸ್ಥೆಗಳ ವತಿಯಿಂದ ಮಧುಮೇಹ ತಪಾಸಣೆ ಕೈಗೊಳ್ಳಲಾಯಿತು. ೧ ದೇಶ, ೧ ದಿನ, ೧೦ ಲಕ್ಷ ತಪಾಸಣೆ ಎಂಬ ಗುರಿಯಂತೆ ದೇಶವ್ಯಾಪಿ ರೋಟರಿ ಸಂಸ್ಥೆಗಳು ಮಧುಮೇಹ ತಪಾಸಣೆಯನ್ನು ಹಮ್ಮಿಕೊಂಡು ದಾಖಲೆಗೆ ಪಾತ್ರವಾಯಿತು ಎಂದರು.

ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಪಿ.ಆರ್. ರಾಜೇಶ್, ಮುಂದಿನ ಸಾಲಿನ ಅಧ್ಯಕ್ಷ ಪ್ರಸಾದ್ ಗೌಡ, ಇನ್ನರ್ ವೀಲ್ ಅಧ್ಯಕ್ಷೆ ಶಪಾಲಿ ರೈ, ಕಾರ್ಯದರ್ಶಿ ಶಮ್ಮಿ ಪ್ರಭು, ನಿರ್ದೇಶಕಿ ಪ್ರಿಯಾ ಪ್ರಶಾಂತ್, ರೂಪಾಸುಮಂತ್, ನಮಿತಾ ರೈ, ಮಿಸ್ಟಿ ಹಿಲ್ಸ್ ನಿರ್ದೇಶಕರಾದ ಮೋಹನ್ ಪ್ರಭು, ಬಿ.ಕೆ. ರವೀಂದ್ರ ರೈ. ಕ್ಯಾರಿ ಕಾರ್ಯಪ್ಪ, ಅಜಿತ್ ನಾಣಯ್ಯ, ಎಂ. ಧನಂಜಯ್ ಶಿಬಿರ ನಿರ್ವಹಿಸಿದರು.