ಸೋಮವಾರಪೇಟೆ, ಸೆ. ೩೦: ಇಂದಿನ ಕಾಲಘಟ್ಟದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರೇಮಿಗಳ ದಿನಾಚರಣೆ ಯನ್ನು ಸಂಭ್ರಮಿಸುವ ಮಂದಿ, ಈ ನೆಲಕ್ಕೆ ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆಯನ್ನು ಮಾಡುವಲ್ಲಿ ನಿರ್ಲಕ್ಷö್ಯ ತೋರುತ್ತಿರುವುದು ಖೇದಕರ ಎಂದು ಇಲ್ಲಿನ ಪಟ್ಟಣ ಪಂಚಾಯಿತಿಯ ಅಭಿಯಂತರ ಹೇಮಕುಮಾರ್ ಹೇಳಿದರು. ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯ ಇಂಜಿನಿರ‍್ಸ್ ಡೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಂಚಾಯಿತಿಯಿAದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸರ್ ಎಂ. ವಿಶ್ವೇಶ್ವರಯ್ಯ ಅವರು ಇಂಜಿನಿಯರ್ ಹಾಗೂ ಮೈಸೂರು ಸಂಸ್ಥಾನದ ದಿವಾನರಾಗಿ ಸೇವೆ ಸಲ್ಲಿಸಿರುವುದು ಅವಿಸ್ಮರಣೀಯ. ಇವರ ಅಧಿಕಾರಾವಧಿಯಲ್ಲಿ ಕೆಆರ್‌ಎಸ್ ಜಲಾಶಯ, ಮೈಸೂರು ಬ್ಯಾಂಕ್, ಭದ್ರಾವತಿ ಕಾರ್ಖಾನೆ, ಕಾಲೇಜುಗಳ ಸ್ಥಾಪನೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಪ್ರೇಮಿಗಳ ದಿನಾಚರಣೆ ಮಾಡುವಷ್ಟು ಹುರುಪು ಇಂತಹ ಮಹನೀಯರ ಸ್ಮರಣೆಗೆ ಇಲ್ಲದಿರುವುದು ವಿಷಾದ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ. ಸಂಜೀವ ಸುವರ್ಣ ವಹಿಸಿ ಮಾತನಾಡಿ, ಪಟ್ಟಣ ಪಂಚಾಯಿತಿ ಯಲ್ಲಿ ಇದೇ ಪ್ರಥಮ ಬಾರಿಗೆ ಇಂಜಿನಿರ‍್ಸ್ ದಿನಾಚರಣೆ ಆಚರಿಸಲಾಗಿದ್ದು, ಇದನ್ನು ಮುಂದಿನ ದಿನಗಳಲ್ಲೂ ಮುಂದುವರೆಸಬೇಕು. ಹಿಂದಿನ ಸಾಲಿನ ಆಡಳಿತ ಮಂಡಳಿಯ ಹೊಂದಾಣಿಕೆ ಕೊರತೆಯಿಂದ ನೆನೆಗುದಿಗೆ ಬಿದ್ದಿದ್ದ ರೂ. ೩ ಕೋಟಿ ಅನುದಾನದ ಯೋಜನೆಗಳನ್ನು ಈ ಸಾಲಿನಲ್ಲಿ ಪೂರ್ಣಗೊಳಿಸಲಾಗಿದೆ ಎಂದರು. ಪ.ಪಂ. ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ತಂತ್ರಜ್ಞಾನ ಇಲ್ಲದ ದಿನಗಳಲ್ಲಿಯೇ ಅಭೂತ ಪೂರ್ವ ಕಾರ್ಯಯೋಜನೆಗಳನ್ನು ಮಾಡಿದ ವಿಶ್ವೇಶ್ವರಯ್ಯ ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸದಸ್ಯರುಗಳಾದ ಶೀಲಾ ಡಿಸೋಜ, ನಾಗರತ್ನ, ಮೋಹಿನಿ, ಬಿ.ಆರ್. ಮಹೇಶ್, ಪಿ.ಕೆ. ಚಂದ್ರು, ಶುಭಕರ್, ಮೃತ್ಯುಂಜಯ, ನಾಮ ನಿರ್ದೇಶನ ಸದಸ್ಯರಾದ ಎಸ್. ಮಹೇಶ್, ಎಸ್.ಆರ್. ಸೋಮೇಶ್, ಶರತ್‌ಚಂದ್ರ, ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ನಟರಾಜ್ ಅವರುಗಳು ಉಪಸ್ಥಿತರಿದ್ದರು.