ಕೂಡಿಗೆ, ಸೆ. ೨೯: ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ವತಿಯಿಂದ ಕೂಡಿಗೆ ವಿಭಾಗದ ಪೊಲೀಸ್ ಬೀಟ್ ಸಭೆಯು ಕೂಡಿಗೆ ಗಣಪತಿ ಫೇಡಾಲ್‌ನ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಕುಶಾಲನಗರ ಪೋಲಿಸ್ ವೃತ್ತ ನಿರೀಕ್ಷಕ ಮಹೇಶ್ ವಹಿಸಿ ಪೊಲೀಸ್ ಇಲಾಖೆಯ ನೂತನ ೧೧೨ ಸಂಖ್ಯೆ ವಿಷಯಗಳನ್ನು ಸಾರ್ವಜನಿಕರಿಗೆ ತಿಳಿಸಿದರು ಸಾರ್ವಜನಿಕರು ಪೊಲೀಸರೊಂದಿಗೆ ಸಹಕಾರ ನೀಡಿದರೆ ಗ್ರಾಮಗಳಲ್ಲಿ ಅಗುವ ಅಹಿತಕರ ಘಟನೆಗಳನ್ನು ತಡೆಯಲು ಸಹಕಾರವಾಗುವುದು ಎಂದರು. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಶಿವಶಂಕರ್ ಮಾತನಾಡಿ, ಗ್ರಾಮದ ಯುವಕರು ಮೊದಲು ಸಂಚಾರಿ ನಿಯಮಗಳನ್ನು ತಿಳಿದುಕೊಂಡು ಅದನ್ನು ಪಾಲಿಸುವಂತೆ ಮನವಿಯನ್ನು ಮಾಡಿದರು ಅಲ್ಲದೆ ಅನಧಿಕೃತವಾಗಿ ನಡೆಯುವ ಮದ್ಯ ಮಾರಾಟ ಮತ್ತು ಗಾಂಜಾಗಳAತಹ ವಿಷಯಗಳನ್ನು ಸೂಕ್ಷö್ಮವಾಗಿ ತಿಳಿದರೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಗ್ರಾಮದಲ್ಲಿ ಸಾಮಾರಸ್ಯವಾಗಿ ಜೀವನ ನಡೆಸಲು ಇಲಾಖೆ ಸಹಕಾರ ನೀಡುವುದು. ಸಭೆಯಲ್ಲಿ ಕೂಡಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಳಾ ಪ್ರಕಾಶ್ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ ಸಹಾಯಕ ಠಾಣಾಧಿಕಾರಿ ರವಿ ಸೇರಿದಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪಿ. ಹಮೀದ್ ಗಿರೀಶ್ ಕುಮಾರ್ ದೇವಾಲಯ ಸಮಿತಿಯ ಅಧ್ಯಕ್ಷ ಭೀಮಣ್ಣ ಸೇರಿದಂತೆ ಗ್ರಾಮದ ವಿವಿಧ ಸಂಘಟನೆಯ ಪ್ರಮುಖರು ಆಟೋ ಚಾಲಕರು, ಮಾಲಿಕರು, ಗ್ರಾಮಸ್ಥರು ಭಾಗವಹಿಸಿದ್ದರು.