ಮಡಿಕೇರಿ, ಸೆ. ೨೯: ೨೦೨೦-೨೦೨೧ರ ಸಾಲಿನ ದೇಚೂರು ಶ್ರೀರಾಮ ಮಂದಿರ ದಸರಾ ಸಮಿತಿಯ ಅಧ್ಯಕ್ಷರಾಗಿ ವೇಣುಗೋಪಾಲ್ ಕಾರ್ಯದರ್ಶಿಯಾಗಿ ದೇವು ಖಜಾಂಚಿಯಾಗಿ ಸುಜಿತ್ ಆಯ್ಕೆಯಾಗಿದ್ದಾರೆ. ದೇಚೂರು, ಕನ್ನಂಡಬಾಣೆಯ ಸುಮಾರು ನೂರ ಐವತ್ತಕ್ಕೂ ಹೆಚ್ಚು ಸದಸ್ಯರಿರುವ ಸಮಿತಿಯನ್ನು ರಚಿಸಲಾಗಿದ್ದು, ಈ ಬಾರಿ ೧೦೩ನೇ ವರ್ಷದ ದಸರಾವನ್ನು ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ.