ಮಡಿಕೇರಿ, ಸೆ. ೩೦: ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ರಾಷ್ಟಿçÃಯ ಹಸಿರು ಪಡೆಯ ಇಕೋ ಕ್ಲಬ್ ವತಿಯಿಂದ ಅರಣ್ಯ ಇಲಾಖೆಯ ಕೊಡಗು ವೃತ್ತದ ಮಡಿಕೇರಿ ವನ್ಯಜೀವಿ ವಿಭಾಗದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ ೨ ರಿಂದ ೮ ರತನಕ ೬೭ನೇ ವನ್ಯಜೀವಿ ಸಪ್ತಾಹ -೨೦೨೧ ಅಂಗವಾಗಿ ‘ನಮ್ಮ ನಡೆ ವನ್ಯಜೀವಿಗಳ ಸಂರಕ್ಷಣೆ ಕಡೆಗೆ’ ಎಂಬ ಘೋಷಣೆಯಡಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಅಂಚೆ ಕಾರ್ಡ್ನಿಂದ ವಿಶೇಷವಾಗಿ ವನ್ಯಜೀವಿಗಳು-ಪಕ್ಷಿಗಳ ಚಿತ್ರ ಬರೆಯುವ ಪರಿಸರ ಜಾಗೃತಿ ಅಭಿಯಾನ ಏರ್ಪಡಿಸಲಾಗಿದೆ.
ಕೋವಿಡ್-೧೯ ರ ಮಾರ್ಗಸೂಚಿಯನ್ವಯ ಶಾಲೆಗಳಲ್ಲಿ ಇಕೋ ಕ್ಲಬ್, ಎನ್ಎಸ್ಎಸ್ ಘಟಕ, ಎಸ್ಡಿಎಂಸಿ., ಆಶ್ರಯದಲ್ಲಿ ಅ. ೨ ರಂದು ಗಾಂಧೀಜಿ ಜಯಂತಿ ಸಂದರ್ಭ ಸ್ವಚ್ಛತಾ ಅಭಿಯಾನ ದೊಂದಿಗೆ ಶಿಕ್ಷಕರು ಮಕ್ಕಳಲ್ಲಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ಹಾಗೂ ಪ್ರಾಣಿ-ಪಕ್ಷಿಗಳ ಸಂಪತ್ತಿನ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ದಿಸೆಯಲ್ಲಿ ಅಕ್ಟೋಬರ್ ಮೊದಲ ಒಂದು ವಾರ ಏಕಕಾಲದಲ್ಲಿ ವೈವಿಧ್ಯಮಯ ಪರಿಸರಾತ್ಮಕ ಚಟುವಟಿಕೆಗಳನ್ನು ಸಂಘಟಿಸಲಾಗಿದೆ. ಮಕ್ಕಳಿಗೆ ಅಂಚೆ ಕಾರ್ಡ್ನಿಂದ ಚಿತ್ರ ಬರೆಯಲು ಶಾಲೆ ವತಿಯಿಂದ ಪ್ರತಿ ವಿದ್ಯಾರ್ಥಿಗೂ ಅಂಚೆ ಕಾರ್ಡ್ ಒದಗಿಸಲು ತಿಳಿಸಲಾಗಿದೆ ಎಂದು ಡಿಡಿಪಿಐ ಎ. ಶ್ರೀಧರನ್ ತಿಳಿಸಿದ್ದಾರೆ.
ಎರಡು ವಿಭಾಗಗಳಲ್ಲಿ ನಡೆಯುವ ಈ ಅಂಚೆ ಕಾರ್ಡ್ ಅಭಿಯಾನದಲ್ಲಿ ಪ್ರಾಥಮಿಕ ಶಾಲಾ ವಿಭಾಗ (೫ ರಿಂದ ೭ನೇ ತರಗತಿ) ಹಾಗೂ ಪ್ರೌಢಶಾಲಾ ವಿಭಾಗ (೮-೧೦ನೇ ತರಗತಿ)ದ ಮಕ್ಕಳಿಗೆ ಪ್ರತಿ ವಿದ್ಯಾರ್ಥಿ ಕೂಡ ಸ್ವಇಚ್ಛೆಯಿಂದ ಕನಿಷ್ಟ ಎರಡು ಕಾರ್ಡ್ಗಳಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತ ಘೋಷವಾಕ್ಯ ಸಂದೇಶ ದೊಂದಿಗೆ ತನಗಿಷ್ಟವಾದ ಒಂದು ಪಕ್ಷಿ/ಪ್ರಾಣಿಯ ನೈಜ ಚಿತ್ರವನ್ನು ಪೆನ್ಸಿಲ್ ಅಥವಾ ಬಣ್ಣದಿಂದ ಸ್ವತಃ ರಚಿಸಿ ತನ್ನ ಸ್ನೇಹಿತರು, ಸಂಬAಧಿಕರು, ನೆರೆಹೊರೆಯವರು/ ನಾಗರಿಕರಿಗೆ / ಇತರೆ ಯಾರಿಗಾದರೂ ಅಂಚೆ ಮೂಲಕ ಕಳುಹಿಸಲು ಶಿಕ್ಷಕರು ಮಕ್ಕಳಲ್ಲಿ ಪ್ರೇರೇಪಣೆ ನೀಡಲು ತಿಳಿಸಿದ್ದಾರೆ.
ಶಾಲಾ ಮಕ್ಕಳಲ್ಲಿ ‘ಕಾಡು ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ’ ಎಂಬ ಸಂಪತ್ತಿನ ಸಂರಕ್ಷಣೆಯ ಕುರಿತು ಅರಿವು ಮೂಡಿಸುವ ದಿಸೆಯಲ್ಲಿ ಅಕ್ಟೋಬರ್ ಮೊದಲ ಒಂದು ವಾರ ಏಕಕಾಲದಲ್ಲಿ ವೈವಿಧ್ಯಮಯ ಪರಿಸರಾತ್ಮಕ ಚಟುವಟಿಕೆಗಳನ್ನು ಸಂಘಟಿಸಲಾಗಿದೆ. ಮಕ್ಕಳಿಗೆ ಅಂಚೆ ಕಾರ್ಡ್ನಿಂದ ಚಿತ್ರ ಬರೆಯಲು ಶಾಲೆ ವತಿಯಿಂದ ಪ್ರತಿ ವಿದ್ಯಾರ್ಥಿಗೂ ಅಂಚೆ ಕಾರ್ಡ್ ಒದಗಿಸಲು ತಿಳಿಸಲಾಗಿದೆ ಎಂದು ಡಿಡಿಪಿಐ ಎ. ಶ್ರೀಧರನ್ ತಿಳಿಸಿದ್ದಾರೆ.
ಎರಡು ವಿಭಾಗಗಳಲ್ಲಿ ನಡೆಯುವ ಈ ಅಂಚೆ ಕಾರ್ಡ್ ಅಭಿಯಾನದಲ್ಲಿ ಪ್ರಾಥಮಿಕ ಶಾಲಾ ವಿಭಾಗ (೫ ರಿಂದ ೭ನೇ ತರಗತಿ) ಹಾಗೂ ಪ್ರೌಢಶಾಲಾ ವಿಭಾಗ (೮-೧೦ನೇ ತರಗತಿ)ದ ಮಕ್ಕಳಿಗೆ ಪ್ರತಿ ವಿದ್ಯಾರ್ಥಿ ಕೂಡ ಸ್ವಇಚ್ಛೆಯಿಂದ ಕನಿಷ್ಟ ಎರಡು ಕಾರ್ಡ್ಗಳಲ್ಲಿ ವನ್ಯಜೀವಿಗಳ ಸಂರಕ್ಷಣೆ ಕುರಿತ ಘೋಷವಾಕ್ಯ ಸಂದೇಶ ದೊಂದಿಗೆ ತನಗಿಷ್ಟವಾದ ಒಂದು ಪಕ್ಷಿ/ಪ್ರಾಣಿಯ ನೈಜ ಚಿತ್ರವನ್ನು ಪೆನ್ಸಿಲ್ ಅಥವಾ ಬಣ್ಣದಿಂದ ಸ್ವತಃ ರಚಿಸಿ ತನ್ನ ಸ್ನೇಹಿತರು, ಸಂಬAಧಿಕರು, ನೆರೆಹೊರೆಯವರು/ ನಾಗರಿಕರಿಗೆ / ಇತರೆ ಯಾರಿಗಾದರೂ ಅಂಚೆ ಮೂಲಕ ಕಳುಹಿಸಲು ಶಿಕ್ಷಕರು ಮಕ್ಕಳಲ್ಲಿ ಪ್ರೇರೇಪಣೆ ನೀಡಲು ತಿಳಿಸಿದ್ದಾರೆ.
ಶಾಲಾ ಮಕ್ಕಳಲ್ಲಿ ‘ಕಾಡು ಉಳಿಸಿ, ವನ್ಯಜೀವಿಗಳನ್ನು ರಕ್ಷಿಸಿ’ ಎಂಬ ಅಕ್ಟೋಬರ್ ೯ ರೊಳಗೆ ಸಲ್ಲಿಸಲು ತಿಳಿಸಲಾಗಿದೆ. ನಂತರ ಬಿ.ಆರ್.ಸಿ. ಕೇಂದ್ರಗಳು ಕ್ಲಸ್ಟರ್ ವ್ಯಾಪ್ತಿಯಿಂದ ಮಾಹಿತಿಯನ್ನು ಸಂಗ್ರಹಿಸಿ ಡಿಡಿಪಿಐ ಕಚೇರಿಯ ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ನೋಡಲ್ ಅಧಿಕಾರಿಗೆ ನೀಡಲು ತಿಳಿಸಲಾಗಿದೆ. ಶಾಲಾ ಹಂತದಲ್ಲಿ ಅಂಚೆ ಕಾರ್ಡ್ ಚಿತ್ರ ರಚನೆಯೊಂದಿಗೆ ಮಕ್ಕಳಿಗೆ ವನ್ಯಜೀವಿಗಳ ಸಂರಕ್ಷಣೆಗಾಗಿ ವನ್ಯಜೀವಿ- ಪರಿಸರ ಸಂರಕ್ಷಣೆಯ ಘೋಷಣೆ ಫಲಕಗಳೊಂದಿಗೆ ಕಡಿಮೆ ಅವಧಿಯಲ್ಲಿ ನಡಿಗೆ(ವಾಕಥಾನ್) ಯೊಂದಿಗೆ ವನ್ಯಜೀವಿಗಳ ಸಂರಕ್ಷಣೆ ಕುರಿತಂತೆ ಚಿತ್ರಕಲೆ, ಪ್ರಬಂಧ, ಭಾಷಣ, ಆಶುಭಾಷಣ, ರಸಪ್ರಶ್ನೆ ಸ್ಪರ್ಧೆಗಳು ಸೇರಿದಂತೆ ಪಕ್ಷಿಗಳು/ಚಿಟ್ಟೆಗಳ ವೀಕ್ಷಣೆ, ಕೆರೆಗಳ ಅಧ್ಯಯನ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ಪೂರಕವಾದ ಗಿಡಗಳನ್ನು ನೆಡುವುದು ಇತ್ಯಾದಿ ಪರಿಸರಾತ್ಮಕ ಚಟುವಟಿಕೆ ಗಳನ್ನು ಕೋವಿಡ್ ಮಾರ್ಗಸೂಚಿ ಯನ್ವಯ ನಡೆಸಲು ತಿಳಿಸಿದೆ. ಶಾಲಾಹಂತದಲ್ಲಿ ಸ್ಪರ್ಧಿಗಳಿಗೆ ಬಹುಮಾನ ನೀಡಲು ತಿಳಿಸಲಾಗಿದೆ.
ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಕುರಿತಂತೆ ಶಾಲೆಗಳಲ್ಲಿ ಇಕೋ ಕ್ಲಬ್, ಎನ್ನೆಸ್ಸೆಸ್, ಚಿತ್ರಕಲಾ, ವೃತ್ತಿ ಶಿಕ್ಷಣ, ದೈಹಿಕ ಶಿಕ್ಷಣ ಶಿಕ್ಷಕರು, ಇತರೆ ಶಿಕ್ಷಕರ ಸಹಕಾರದೊಂದಿಗೆ ವನ್ಯಜೀವಿ ಸಪ್ತಾಹದ ಯಶಸ್ವಿ ಸಂಘಟನೆಗೆ ತಾಲೂಕಿನ ದೈಹಿಕ ಶಿಕ್ಷಣಾಧಿಕಾರಿಗಳು ಈ ಅಭಿಯಾನದ ತಾಲೂಕು ನೋಡಲ್ ಅಧಿಕಾರಿ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶಾಲಾ ಕಾರ್ಯಕ್ರಮದ ಹೆಚ್ಚಿನ ಮಾಹಿತಿಗೆ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ. ಪ್ರೇಮಕುಮಾರ್ (ಮೊ.೯೪೪೮೫ ೮೮೩೫೨), ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್ (ಮೊ.೯೪೪೮೮ ೭೩೯೯೯), ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಡಾ. ಸದಾಶಿವಯ್ಯ ಎಸ್. ಪಲ್ಲೇದ್ (ಮೊ. ೯೦೩೬೯ ೩೭೫೯೯) ಸೋಮವಾರ ಪೇಟೆ (ತಾ), ಶ್ರೀನಿವಾಸ್ (ಮೊ. ೯೪೪೮೫ ೦೪೬೩೬) ಮಡಿಕೇರಿ (ತಾ) ಹಾಗೂ ಬಿ.ಆರ್. ಗಾಯತ್ರಿ (ಮೊ. ೯೫೩೫೫ ೧೮೯೬೬) ವೀರಾಜಪೇಟೆ (ತಾ) ಅವರನ್ನು ಸಂಪರ್ಕಿಸಲು ತಿಳಿಸಿದೆ. ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಸಂಘಟನೆ ಕುರಿತಂತೆ ವನ್ಯಜೀವಿ ವಿಭಾಗದ ಆರ್.ಎಫ್.ಓ. ಗಳಾದ ಪುಷ್ಪಗಿರಿ ವಲಯದ ವಿಮಲ್ ಬಾಬು (ಮೊ: ೯೭೩೮೪ ೭೫೮೯೯), ತಲಕಾವೇರಿ ವಲಯದ ಮರಿಸ್ವಾಮಿ (ಮೊ: ೯೬೧೧೮ ೫೪೨೧೭), ಶ್ರೀಮಂಗಲ ಬ್ರಹ್ಮಗಿರಿ ವಲಯದ ವೀರೇಂದ್ರ (ಮೊ: ೯೬೧೧೭ ೫೮೧೫೩) ಹಾಗೂ ಮಾಕುಟ್ಟ ಬ್ರಹ್ಮಗಿರಿ ವಲಯದ ದೇಚಮ್ಮ (ಮೊ: ೯೧೦೮೩೫೯೦೦೯) ಅವರನ್ನು ತಿಳಿಸಲಾಗಿದೆ.