ಕಾಫಿಗೆ ಬೆಲೆ ಕುಸಿತ ಮುಂದುವರೆದು ಜೀವನ ನಿರ್ವ ಹಣೆಯೇ ಕಷ್ಟಕರ ಎಂಬAತ್ತಿದ್ದ ದಿನಗಳು ಅವು. ಕಾಫಿ ಮಾರಾಟಕ್ಕೆ ಕಾಫಿ ಮಂಡಳಿಯನ್ನೇ ಬೆಳೆಗಾರರು ಆಶ್ರಯಿಸಿದ್ದ ವರ್ಷಗಳು ಅವು.

ಮುಕ್ತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಕಾಫಿ ಮಾರಾಟ ಮಾಡುವುದು ಕನಸಾಗಿಯೇ ಉಳಿದಿದ್ದ ತಿಂಗಳುಗಳು. ಕಾಫಿ ತೋಟಗಳನ್ನು ನಿರ್ವಹಿಸಲಾಗದೇ ಕುಟುಂಬದ ಖರ್ಚುವೆಚ್ಚ ಭರಿಸಲಾಗದೇ ಕಂಗಾಲಾಗಿದ್ದ ಕಾಫಿ ತೋಟ ಮಾಲೀಕನ ದುಸ್ಥಿತಿ ಅಂದಿನ ಸಂದರ್ಭದಲ್ಲಿ ನರಕ ಯಾತನೆಯಿಂದ ಕೂಡಿತ್ತು.

ಇಂತಹ ಕಠಿಣ ಸ್ಥಿತಿಯಲ್ಲಿ ಕಾಫಿ ಬೆಳೆಗಾರರ ನೆರವಿಗೆ ಬಂದವರು ಬೇರೆ ಯಾರೂ ಆಗಿರಲಿಲ್ಲ. ಅವರ ಮನೆಯ ಮಹಿಳೆಯರೇ ತಮ್ಮದೇ ರೀತಿಯಲ್ಲಿ ನೆರವಿಗೆ ಮುಂದಾದರು. ಹಾಗೆಂದು ಈ ಮಹಿಳೆಯರು ಮನೆಗೆ ನೇರವಾಗಿ ಹಣಕಾಸಿನ ನೆರವು ನೀಡಲಿಲ್ಲ. ಬದಲಿಗೆ ತಮ್ಮ ಕುಟುಂಬ, ತಾವಿರುವ ಸಮಾಜ ಜೀವನಕ್ಕಾಗಿ ನಂಬಿಕೊAಡಿದ್ದ ಕಾಫಿ ಕೃಷಿಯ ಉತ್ತೇಜನಕ್ಕೆ ಮುಂದಾದರು. ಕಾಫಿ ಫಸಲು ಅಂರ‍್ರಾಷ್ಟಿçÃಯ ಮಾರುಕಟ್ಟೆಯಲ್ಲಿ ದೊರಕುವ ಬೆಲೆಯನ್ನೇ ನಂಬಿಕೊAಡಿದ್ದರೆ ತಮಗೆಂದೂ ಉಳಿಗಾಲವಿಲ್ಲ ಎಂಬುದನ್ನು ಚೆನ್ನಾಗಿಯೇ ಅರಿತುಕೊಂಡ ಅನೇಕ ಮಹಿಳೆಯರು, ಯಾವಾಗ ಭಾರತದ ಕಾಫಿ ತೋಟದಲ್ಲಿ ಬೆಳೆಸಲಾದ ಕಾಫಿಗೆ ಭಾರತದಲ್ಲಿಯೇ ಹೆಚ್ಚಿನ ಬೇಡಿಕೆ ದೊರಕುತ್ತದೆಯೋ, ಯಾವಾಗ ಸ್ಥಳೀಯವಾಗಿ ಬೆಳೆದ ಕಾಫಿಗೆ ದೇಶವ್ಯಾಪಿ ಬ್ರಾಂಡ್ ಇಮೇಜ್ ದೊರಕುತ್ತದೆಯೋ ಆಗಲೇ ತಮ್ಮ ಕಾಫಿ ತೋಟಗಳು ಉಳಿಯಬಲ್ಲವು ಎಂದು ತಿಳಿದುಕೊಂಡರು.

ಇAತಹ ಸಂದರ್ಭ ಕರ್ನಾಟಕದ ಕಾಫಿ ಜಿಲ್ಲೆಗಳಲ್ಲಿ ಉದಯವಾದದ್ದೇ ಮಹಿಳೆಯರ ಕಾಫಿ ಸಂಘಗಳು. ಅಂರ‍್ರಾಷ್ಟಿçÃÃಯ ಕಾಫಿ ದಿನವನ್ನು ಆಚರಿಸುತ್ತಿರುವ ಈ ಸಂದರ್ಭ ಮಲೆನಾಡಿನ ಮಹಿಳೆಯರು ತಮ್ಮದೇ ಸಂಘ ಸ್ಥಾಪಿಸಿ ಕಾಫಿ ಮಾರುಕಟ್ಟೆಗೆ ನೀಡಿದ ಗಮನಾರ್ಹ ಕೊಡುಗೆಯನ್ನು ಸ್ಮರಿಸಲೇಬೇಕು.

....

ನಿಮ್ಮೊಂದಿಗೆ ನಾವಿದ್ದೇವೆ ಎಂದವರು ಕೊಡಗಿನ ಗಟ್ಟಿಗಿತ್ತಿಯರು

...

ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆ ಸಹಕಾರ ನಿಯಮದಡಿ ನೋಂದಾಯಿಸಲ್ಪಟ್ಟ ಕೊಡಗಿನ ಸಂಸ್ಥೆಗೆ ಈಗ ೧೭ ವರ್ಷಗಳು.

ಭಾರತೀಯ ಕಾಫಿಗೆ ನಮ್ಮದೇ ದೇಶದಲ್ಲಿ ಹೆಚ್ಚು ಬೇಡಿಕೆ ದೊರಕಿಸಬೇಕು ಎಂಬ ನಿಟ್ಟಿನಲ್ಲಿ ಕೊಡಗಿನ ಹಲವು ಮಹಿಳೆಯರು ಒಗ್ಗೂಡಿ ಹುಟ್ಟು ಹಾಕಿದ ಈ ಸಂಸ್ಥೆ ಕಾಫಿ ಜಾಗೃತಿ ಮೂಡಿಸುತ್ತಿರುವ ಭಾರತದ ಪ್ರಮುಖ ಸಂಸ್ಥೆಗಳ ಲ್ಲೊಂದಾಗಿ ಗುರುತಿಸಲ್ಪಟ್ಟಿದೆ.

ಆರಂಭದಲ್ಲಿ ೩೦ ಮಹಿಳಾ ಕಾಫಿ ಬೆಳೆಗಾರರಿಂದ ಪ್ರಾರಂಭವಾದ ಸಂಸ್ಥೆಯಲ್ಲಿ ಪ್ರಸ್ತುತ ೪೦೦ ಸದಸ್ಯೆಯರಿದ್ದಾರೆ. ಕಾಫಿಗೆ ಹೆಚ್ಚಿನ ಬೇಡಿಕೆ, ಮಾನ್ಯತೆ ದೊರಕಿಸುವುದು ಮತ್ತು ಕಾಫಿ ಸೇವನೆ ಹೇಗೆ ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ ಎಂಬುದನ್ನು ಜನತೆಗೆ ತಿಳಿಸುವುದೇ ಈ ಸಂಸ್ಥೆಯ ಮುಖ್ಯ ಧ್ಯೇಯ.

ಭಾರತದಲ್ಲಿ ಕಾಫಿ ಸೇವನೆ ಹೆಚ್ಚಾದಲ್ಲಿ ಕಾಫಿ ಬೆಳೆಗಾರ ಜಿಲ್ಲೆಗಳಲ್ಲಿನ ಜನತೆಯ ಜೀವನ ಕೂಡ ಮತ್ತಷ್ಟು ಅಭಿವೃದ್ಧಿಯಾಗುತ್ತದೆ ಎಂಬುದನ್ನು ಅರಿತು ಮಲೆನಾಡು ಪ್ರದೇಶದ ಗ್ರಾಮೀಣ ಪ್ರದೇಶಗಳಿಗೂ ತೆರಳಿದ್ದ ಸಂಸ್ಥೆಯ ಮಹಿಳೆಯರು ಕಾಫಿ ಕುಡಿಯಿರಿ, ಆರೋಗ್ಯ ಉತ್ತಮ ವಾಗಿಸಿಕೊಳ್ಳಿ ಎಂಬ ಮಹತ್ವದ ಕಾಫಿ ಸಂದೇಶವನ್ನು ಸಾರುವ ಅನೇಕ ಕಾರ್ಯ ಕ್ರಮಗಳನ್ನು ಜಾರಿಗೊಳಿಸಿದ್ದಾರೆ.

ನವದೆಹಲಿಯಲ್ಲಿ ಆಯೋಜಿತವಾಗಿದ್ದ ಅಂರ‍್ರಾಷ್ಟಿçÃಯ ಕಾಫಿ ಉತ್ಸವದಲ್ಲಿ ಕೊಡಗಿನ ಮಹಿಳೆಯರು ಈ ಸಂಸ್ಥೆಗೆ ಕಾಫಿ ಮಂಡಳಿಯೂ ಮಳಿಗೆಯನ್ನು ಕಲ್ಪಿಸಿತ್ತು. ಭಾರತೀಯ ರೈಲ್ವೆಯಲ್ಲಿ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳ ಕಚೇರಿಗಳಲ್ಲಿ ಫಿಲ್ಟರ್ ಕಾಫಿಯನ್ನು ಆದ್ಯತೆಯಾಗಿ ಸರಬರಾಜು ಮಾಡಬೇಕು. ಹಾಗೇ ಆರ್ಮಿ ಕ್ಯಾಂಟೀನ್‌ಗಳಲ್ಲಿಯೂ ಫಿಲ್ಟರ್ ಕಾಫಿ ದೊರಕಬೇಕು. ಎಂದು ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘವು ಕೇಂದ್ರದ ರೈಲ್ವೇ ಮತ್ತು ರಕ್ಷಣಾ ಸಚಿವರಿಗೆ ಮನವಿ ಸಲ್ಲಿಸಿತ್ತು.

ಪ್ರತೀ ವರ್ಷ ಅಕ್ಟೋಬರ್ ೧ ರಂದು ಕೊಡಗು ಮಹಿಳಾ ಕಾಫಿ ಜಾಗೃತಿ ಸಂಸ್ಥೆಯು ಜಿಲ್ಲೆಯಲ್ಲಿ ಕಾಫಿ ಬಗ್ಗೆ ಮಾಹಿತಿ ನೀಡುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಜತೆಗೇ ಪ್ರವಾಸಿಗರಿಗೂ ಕೊಡಗಿನ ಸ್ವಾದಿಷ್ಟ ಕಾಫಿಯನ್ನು ವಿವಿಧ ಪ್ರವಾಸಿ ತಾಣಗಳಲ್ಲಿ ಕೋವಿಡ್ ಪೂರ್ವದಲ್ಲಿ ಸರಬರಾಜು ಮಾಡುವ ಮೂಲಕ ಅಂರ‍್ರಾಷ್ಟಿçÃಯ ಕಾಫಿ ದಿನಾಚರಣೆಯನ್ನು ಮಹಿಳಾಮಣಿಯರು ವಿಭಿನ್ನವಾಗಿ ಆಚರಿಸುತ್ತಾ ಬಂದಿದ್ದಾರೆ.

ತನ್ನ ಸದಸ್ಯೆಯರಿಗೆ ಮಲೆನಾಡು ಜಿಲ್ಲೆಗಳ ವಿವಿಧ ಕಾಫಿ ತೋಟಗಳಿಗೆ ಪ್ರವಾಸ ಆಯೋಜಿಸಿ ಕಾಫಿ, ಕರಿಮೆಣಸು, ಏಲಕ್ಕಿ ಕೃಷಿಯಲ್ಲಿ ಆಗುತ್ತಿರುವ ಹೊಸ ಆವಿಷ್ಕಾರಗಳನ್ನೂ ತಿಳಿಸಿ ಹೇಳುವ ಪ್ರಯತ್ನವೂ ಸಂಘದಿAದ ನಡೆದಿದೆ. ಸಂಘದ ಉತ್ಸಾಹಿ ಅಧ್ಯಕ್ಷೆ ಚಿತ್ರಾ ಸುಬ್ಬಯ್ಯ ಎಲ್ಲಾ ಸದಸ್ಯೆಯರನ್ನು ಒಗ್ಗೂಡಿ ಕಾರ್ಯಕ್ರಮ ರೂಪಿಸುತ್ತಾ ಉತ್ಸಾಹ ತುಂಬುತ್ತಿರುವ ಫಲ ವಾಗಿಯೇ ಕಾಫಿ ಜಾಗೃತಿಯಲ್ಲಿ ಮಹಿಳೆಯರೂ ಕೂಡ ಸಂಭ್ರಮ ದಿಂದಲೇ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ಸಂಘದ ಸದಸ್ಯೆಯರ ಒಮ್ಮತದ ಅನಿಸಿಕೆ..

ಕೊಡಗಿನ ಕಾಫಿ ತೋಟಗಳು ಜೀವವೈವಿಧ್ಯತೆಗಳ ಅಪೂರ್ವ ತಾಣವಾಗಿದ್ದು ಇಲ್ಲಿನ ಕಾಫಿ ತೋಟಗಳು ಕೇವಲ ಕಾಫಿ ಕೃಷಿಗೆ ಮಾತ್ರ ಸೀಮಿತವಾಗದೇ ಕಾಫಿ ತೋಟಗಳಲ್ಲಿ ಅಪೂರ್ವವಾದ ಪುಪ್ಪ, ಸಸ್ಯ ತಳಿಗಳು ಬೆಳೆಯಲೂ ಕಾರಣವಾಗಿವೆ. ಕಾಫಿ ತೋಟಗಳಿಗೆ ತಂಪು ನೀಡುವ ಮರಗಳಿಂದಾಗಿ ಕೊಡಗಿನಲ್ಲಿ ವನ ಸಂಪತ್ತು ಅಗಾಧವಾಗಿದೆ. ಹಾಗೇ ವಿವಿಧ ಜಾತಿಯ ಪಕ್ಷಿಗಳು, ವನ್ಯ ಜೀವಿಗಳಿಗೂ ಕೊಡಗಿನ ವನ ಸಂಪತ್ತು ನೆಲೆ ನೀಡಿದೆ. ಇಂಥ ಅನೇಕ ವಿಶೇಷತೆಗಳಿಗೆ ಕಾಫಿ ಕಾರಣವಾಗಿದ್ದು ಹೀಗಾಗಿಯೇ ಕೊಡಗಿನ ಅನೇಕ ಮಹಿಳೆಯರಿಗೆ ತಾವೂ ಮಹಿಳಾ ಕಾಫಿ ಜಾಗೃತಿ ಸಂಘದ ಸದಸ್ಯೆಯರು ಎಂದು ಹೇಳಿಕೊಳ್ಳಲು ಹೆಮ್ಮೆಯಿದೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಸಂಘದ ಪ್ರಧಾನ ಕಾರ್ಯದರ್ಶಿ ಅನಿತಾ ನಂದ.

ಮನೆಯಲ್ಲಿ ಮಾದರಿ ಗೃಹಿಣಿಯಾಗಿ ಹೆಸರು ಮಾಡಿರುವ ಕೊಡಗಿನ ಮಹಿಳೆಯರು ಕೈಯಲ್ಲಿ ಕೋವಿ ಹಿಡಿದು ಶೌರ್ಯಕ್ಕೆ ಕೂಡ ಹೆಸರಾಗಿದ್ದಾರೆ. ಅಂತೆಯೇ ತಮ್ಮ ಜೀವನಾಧಾರವಾಗಿರುವ ಕಾಫಿ ಬೆಳೆಯನ್ನು ಸಂರಕ್ಷಿಸಲು ಸವಿಯಾದ ಕಾಫಿಯನ್ನು ಸೇವಿಸಿ ಎಂದು ಕಾಫಿ ಸೇವನೆ ಉತ್ತೇಜನೆಗೂ ಈ ಮಹಿಳೆಯರು ಕಾರಣರಾಗಿದ್ದಾರೆ. ತಮ್ಮದೇ ಸಂಘದ ಮೂಲಕ ಕಾಫಿಗೆ ಪ್ರೋತ್ಸಾಹ ನೀಡಲು ೧೭ ವರ್ಷಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿ ಸುತ್ತಿರುವುದು ಹೆಮ್ಮೆಯ ಸಂಗತಿ.

…

ಕಾಫಿ ಕಪ್‌ನೊಂದಿಗೆ ಕೋವಿಯನ್ನೂ ಹಿಡಿದ ಮಹಿಳೆಯರು

ಕರ್ನಾಟಕದಲ್ಲಿರುವ ಕಾಫಿ ಸೇವನೆಯನ್ನು ಉತ್ತೇಜಿಸುವ ಮಹಿಳೆಯರ ಮತ್ತೊಂದು ಸಂಘ ಸಕಲೇಶಪುರದಲ್ಲಿದೆ. ೨೦ ವರ್ಷಗಳ ಹಿಂದೆ ಕಾಫಿಗೆ ಬೆಲೆ ಕುಸಿತವಿದ್ದಾಗ ಕಾಫಿಗೆ ಆಂತರಿಕೆ ಬೇಡಿಕೆ ಹೆಚ್ಚಿಸುವ ಮೂಲ ಉದ್ದೇಶದಿಂದ ಪ್ರಾರಂಭವಾದ ಮಹಿಳಾ ಕಾಫಿ ಪ್ರಮೋಶನ್ ಕೌನ್ಸಿಲ್ ಎರಡು ದಶಕಗಳಲ್ಲಿ ಸಾಕಷ್ಟು ಕಾರ್ಯಯೋಜನೆ ಹಮ್ಮಿಕೊಂಡು ಕಾಫಿ ಉದ್ಯಮಕ್ಕೆ ಪ್ರೋತ್ಸಾಹ ನೀಡಿದೆ. ೬೦ ಸದಸ್ಯರಿಂದ ಪ್ರಾರಂಭವಾದ ಸಂಘದಲ್ಲಿ ಈಗ ೧೯೩ ಸದಸ್ಯೆಯರಿದ್ದಾರೆ.

ಸಂಘದ ಕಾರ್ಯಚಟುವಟಿಕೆ ಗಮನಿಸಿ ಕಾಫಿ ಮಂಡಳಿಯು ಸಕಲೇಶಪುರದಲ್ಲಿನ ಸಂಘಕ್ಕೆ ಕಾಫಿ ರೋಸ್ಟರ್ ಮತ್ತು ಗ್ರೆöÊಂಡಿAಗ್ ಯಂತ್ರವನ್ನು ನೀಡಿತ್ತು. ಇದರ ಸಹಾಯದಿಂದ ಸಂಘದ ಸದಸ್ಯೆಯರು ತಮ್ಮದೇ ಬ್ರಾಂಡ್ ಕಾಫಿ ಪುಡಿ ಉತ್ಪಾದಿಸಿ ಮಾರಾಟ ಮಾಡುವ ಮೂಲಕ ಕಾಫಿ ಸೇವನೆಗೆ ಕೊಡುಗೆ ನೀಡಿದರು.

ಬಿಸಿ ಮತ್ತು ತಣ್ಣನೆ ಕಾಫಿ, ಕಾಫಿಯಿಂದ ಕೇಕ್ ತಯಾರಿ, ಕಾಫಿ ಪಾಸ್ಟ, ಬಿಸ್ಟತ್‌ಗಳು, ಕಾಫಿಯ ಮಹತ್ವ ಸಾರುವ ಸಂದೇಶವುಳ್ಳ ಟೀಶರ್ಟ್ ಗಳು, ಕಾಫಿ ಮಗ್‌ಗಳು, ಇತ್ಯಾದಿ ಗಳನ್ನೂ ಸಂಘದ ವತಿಯಿಂದ ತಯಾರಿಸಿ ಮಾರಾಟ ಮಾಡಲಾ ಗುತ್ತಿದೆ. ಅಂತೆಯೇ ಸ್ವಾದಿಷ್ಟವಾದ ಫಿಲ್ಟರ್ ಕಾಫಿ ಜತೆಗೆ ಬೆಲ್ಲದ ಕಾಫಿಗೂ ಸಂಘದ ಮಹಿಳೆಯರು ಪ್ರಾಮುಖ್ಯತೆ ನೀಡಿದ್ದಾರೆ.

ಸ್ವಾದಿಷ್ಟ ಕಾಫಿಯನ್ನು ತಯಾರಿಸುವ ಬಗ್ಗೆ ಮಲೆನಾಡು ಜಿಲ್ಲೆಗಳ ಮಹಿಳೆಯರಿಗೆ ಮೊದಲು ತಿಳಿಸಿಹೇಳಬೇಕು. ಪ್ರತೀ ಮನೆಯಲ್ಲಿಯೂ ರುಚಿರುಚಿಯಾದ ಕಾಫಿ ತಯಾರಾದಾಗ ಕಾಫಿ ಸೇವನೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಹಲವರಿಗೆ ಕಾಫಿಯನ್ನು ಸ್ವಾದಿಷ್ಟ ರೀತಿಯಲ್ಲಿ ತಯಾರಿಸುವ ವಿಧಾನವೇ ತಿಳಿದಿಲ್ಲ ಎಂದು ಹೇಳುವ ಸಂಘದ ಅಧ್ಯಕ್ಷ ಕರುಣಾ ಕಿರಣ್, ಈ ನಿಟ್ಟಿನಲ್ಲಿ ಕಾಫಿಯನ್ನು ರುಚಿಯಾಗಿ ತಯಾರಿಸಲು ಯಾವೆಲ್ಲಾ ಸಿದ್ಧತೆ ಕೈಗೊಳ್ಳಬೇಕು. ಕುದಿನೀರಿಗೆ ಎಷ್ಟು ಕಾಫಿ ಪುಡಿ ಬೆರಸಬೇಕು. ಎಷ್ಟು ಹಾಲು ಹಾಕಬೇಕು ಎಂದೂ ನಾವು ಮಾಹಿತಿ ನೀಡುತ್ತಿದ್ದೇವೆ. ಈ ಮಾಹಿತಿಯಿಂದ ನಿಜಕ್ಕೂ ಅನೇಕ ಮಹಿಳೆಯರಿಗೆ ರುಚಿಯಾಗಿ ಕಾಫಿ ತಯಾರಿಕೆ ತಿಳಿಯಿತು. ಹಲವಾರು ಮನೆಗಳಲ್ಲಿ ಕಾಫಿ ಬಳಕೆಯೂ ಗಣನೀಯವಾಗಿ ಹೆಚ್ಚಿರುವುದು ವಾಸ್ತವ ಎಂದೂ ಹೇಳಿದರು.

ಮಹಿಳೆಯರ ಕಾಫಿ ಸಂಸ್ಥೆಯ ಮೂಲಕ ಮತ್ತೊಂದು ಮಹತ್ವದ ಸಾಧನೆಯಾಗಿದ್ದು ಏನೆಂದರೆ, ಕಾಫಿ ತಯಾರಿಕೆ ಜತೆಜತೆಗೆಯೇ ಕಾಫಿ ನಾಡಿನ ಮಹಿಳೆಯರು ಕಾಫಿ ತೋಟಗಳ ನಿರ್ವಹಣೆಯನ್ನೂ ಅರಿತರು. ಕಾಫಿ ತೋಟಕ್ಕೆ ಭೇಟಿ ನೀಡಿ ಕಾಫಿ ಕೃಷಿಯನ್ನೂ ಸಂಭಾ ಳಿಸಿದರು. ತೋಟಕ್ಕೆ ಸಿಂಪಡಿಸುವ ಗೊಬ್ಬರದ ಪ್ರಮಾಣ, ಮನೆ ಬಳಿಯ ಕಾಫಿ ಕಣದ ಸ್ವಚ್ಛತೆ ಬಗ್ಗೆಯೂ ಮಹಿಳೆಯರು ತಿಳಿದುಕೊಂಡರು. ಕಾರ್ಮಿಕರ ವೇತನ, ಕಾಫಿ ತೋಟಕ್ಕೆ ಬೇಕಾದ ವಾರ್ಷಿಕ ವೆಚ್ಚ, ಬರುವ ಆದಾಯ ಹೀಗೆ.. ಕಾಫಿ ಕೃಷಿಯ ಕಷ್ಟನಷ್ಟಗಳ ಬಗ್ಗೆಯೂ ಮನೆಗೆ ಸೀಮಿತವಾಗಿದ್ದ ಮಹಿಳೆಯರು ಸಂಘದ ಕಾರ್ಯಕ್ರಮಗಳಿಂದಾಗಿ ತಿಳಿದುಕೊಳ್ಳುವಂತಾಯಿತು.

ಕಾಫಿ ತೋಟಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾದಾಗ ಸಂಘದ ಪ್ರಮುಖರು ಸುಮ್ಮನಿರಲಿಲ್ಲ. ಸಂಘದ ಆಸಕ್ತ ಮಹಿಳೆಯರಿಗೆ ಕೋವಿಯಿಂದ ಗುಂಡು ಹೊಡೆಯುವ ತರಬೇತಿಯನ್ನೂ ನೀಡಲಾಯಿತು. ಕಾಫಿ ತಯಾರಿಸುವ ಮಹಿಳೆಯರ ಮೃದುವಾದ ಕೈಗಳು ಬಂದೂಕು ಹಿಡಿದು ಕಾಫಿ ತೋಟದ ರಕ್ಷಣೆಗೆ ನಾವು ಕೂಡ ಸಿದ್ಧರಿದ್ದೇವೆ ಎಂಬ ಪರಿಣಾಮಕಾರಿ ಸಂದೇಶ ಸಾರಿದರು.

ಲಾಕ್‌ಡೌನ್ ದಿನಗಳಲ್ಲಿಯೂ ಮನೆಯಿಂದಲೇ ವಿನೂತನ ಕಾರ್ಯಕ್ರಮ ರೂಪಿಸಿದ ಮಹಿಳೆ ಯರು ಕಾಫಿ ಸೇವನೆ ಉತ್ತೇಜಿಸುವ ವಿವಿಧ ವೀಡಿಯೋಗಳನ್ನು ಮನೆಯಿಂದಲೇ ತಯಾರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಪ್ರಸಾರ ಮಾಡಿ ಕಾಫಿಯ ಮಹತ್ವ ಸಾರಿದ್ದು ವಿಶೇಷ.

ಕಾಫಿಯನ್ನು ಆಂತರಿಕ ಬಳಕೆಗೆ ಹೆಚ್ಚಾಗಿ ಉಪಯೋಗಿಸುವ ನಿಟ್ಟಿನಲ್ಲಿ ವ್ಯಾಪಕ ಪ್ರಚಾರಕ್ಕೆ ಮುಂದಾದ ಮಹಿಳಾ ಕಾಫಿ ಪ್ರಮೋಶನ್ ಕೌನ್ಸಿಲ್ ಕಳೆದ ೨೦ ವರ್ಷಗಳಲ್ಲಿ ದೆಹಲಿ, ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ಕಾರ್ಯಕ್ರಮಗಳಲ್ಲಿ ತನ್ನ ಮಳಿಗೆಯ ಮೂಲಕ ಕಾಫಿಗೆ ಪ್ರೋತ್ಸಾಹ ನೀಡಿದೆ. ಸಕಲೇಶ ಪುರದಲ್ಲಿ ಮುಖ್ಯ ಕಚೇರಿ ಹೊಂದಿದ್ದರೂ ಮಹಿಳೆಯರ ಕಾಫಿ ಸಂಘದ ಕಾರ್ಯಕ್ರಮಗಳು ದೇಶದ ವಿವಿಧೆಡೆ ಸವಿಯಾದ ಕಾಫಿ ಯಂತೆಯೇ ಗಮನಸೆಳೆದಿದೆ. ಮನೆಯ ಗಂಡಸಿನ ಕಷ್ಟಕ್ಕೂ ತಾವುಗಳು ಹೆಗಲಾಗುತ್ತೇವೆ.

ಕಾಫಿ ಕೃಷಿಗೆ ಸಂಕಷ್ಟ ಬಂದಾಗ ತಾವು ಮನೆಗೆ ಮಾತ್ರ ಸೀಮಿತ ವಾಗದೇ ಕಾಫಿ ಉದ್ಯಮದ ಸಮಸ್ಯೆ ನಿವಾರಣೆಗೆ ತಮ್ಮ ಕೊಡುಗೆಯನ್ನೂ ನೀಡುತ್ತೇವೆ ಎಂಬ ಸಂದೇಶ ಈ ಮಹಿಳಾ ಕಾಫಿ ಸಂಘಗಳಲ್ಲಿದೆ. ಕಾಫಿ ತಯಾರಿ ಸುವ ಕೈಗಳು ಅದೇ ಕಾಫಿಯ ಸೇವನೆ ಹೆಚ್ಚಿಸುವ ನಿಟ್ಟಿನಲ್ಲಿಯೂ ಗಣನೀಯವಾಗಿ ಕಾರ್ಯಪ್ರವೃತ್ತ ರಾಗುತ್ತೇವೆ ಎಂದು ನಿರೂಪಿಸಿದ್ದಾರೆ. ಇಂತಹ ಮಹಿಳಾ ಮನಸ್ಸುಗಳಿಗೆ ಕಾಫಿ ಕಪ್‌ನೊಂದಿಗೆ ಚಿಯರ್ಸ್ ಹೇಳಿ..

- ಅನಿಲ್ ಎಚ್.ಟಿ.