ವೀರಾಜಪೇಟೆ, ಸೆ. ೨೯: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಎನ್.ಎಸ್.ಎಸ್. ದಿನದ ಅಂಗವಾಗಿ ಧ್ವಜಾರೋಹಣ ಮಾಡಿ, ಎನ್.ಎಸ್. ಎಸ್. ಗೀತೆ ಹಾಡು ವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭ ಮಾತನಾಡಿದ ಪ್ರಾಂಶುಪಾಲೆ. ಡಾ. ಎ.ಎಸ್. ಪೂವಮ್ಮ ಎನ್.ಎಸ್.ಎಸ್. ಶಿಬಿರಗಳು ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಸಲು ಸಹಾಯ ಮಾಡುತ್ತವೆ. ವಿದ್ಯಾರ್ಥಿ ಜೀವನದಲ್ಲಿ ಕಲಿತ ಪಾಠಗಳು ಉತ್ತಮ ಪ್ರಜೆಯಾಗಿ ಮಾಡುವುದರಲ್ಲಿ ಸಂಶಯವಿಲ್ಲ್ಲ ಎಂದರು. ಈ ಸಂದರ್ಭ ಎನ್.ಎಸ್.ಎಸ್. ಅಧಿಕಾರಿ ನಾಗರಾಜ್, ಪ್ರಾಧ್ಯಾಪಕರಾದ ಡಾ. ವೀಣಾ, ಶಂಕರನಾರಯಣ ಹಾಗೂ ಇತ್ತರರು ಇದರು.