ಮಡಿಕೇರಿ: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ಕೋಟೆ ಮಾರಿಯಮ್ಮ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಶ್ರಮದಾನ ನಡೆಯಿತು.

ಶ್ರೀ ಕೋಟೆ ಮಾರಿಯಮ್ಮ ಯುವಕ ಮಿತ್ರ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ನಗರಸಭಾ ಸದಸ್ಯ ಬಿ.ವೈ. ರಾಜೇಶ್ ಶ್ರಮದಾನ ನಡೆಸಿ ಸ್ವಚ್ಛತೆಗೆ ಆದ್ಯತೆ ನೀಡಿದರು.ಸೋಮವಾರಪೇಟೆ: ತಾಲೂಕಿನ ಕುಂಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನವನ್ನು ಕುಂಬೂರಿನ ಭಜರಂಗದಳ ಅಧ್ಯಕ್ಷ ಮನೋಜ್, ಸದಸ್ಯರುಗಳಾದ ಮದನ್, ಶಶಿ, ಸಂತು, ಅನಿಲ್ ದೇವಯ್ಯ, ಈಶ, ನಿಖಿಲ್‌ರಾಜು ಮತ್ತು ನಿವೃತ್ತ ಯೋಧ ಮಂಜು ಅವರುಗಳು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.ಮರಂದೋಡ: ಮರಂದೋಡ ಗ್ರಾಮದ ಅಂಗನವಾಡಿ ಆವರಣ ಹಾಗೂ ಕಿರಿಯ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ದಟ್ಟವಾಗಿ ಬೆಳೆದಿದ್ದ ಕಾಡುಗಳನ್ನು ಮರಂದೋಡ ಕ್ರೀಡಾ ಸಮಿತಿಯ ವತಿಯಿಂದ ಶುಚಿತ್ವಗೊಳಿಸಲಾಯಿತು.

ಈ ಸಂದರ್ಭ ಸಮಿತಿ ಅಧ್ಯಕ್ಷ ಸಿ.ಎ. ಹರೀಶ್ ಮೊಣ್ಣಪ್ಪ, ಕಾರ್ಯದರ್ಶಿ ಎಂ.ಪಿ. ಅಜಿತ್‌ಕುಮಾರ್, ಖಜಾಂಚಿ ರ‍್ಯಾಲಿ ಗಣಪತಿ, ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ. ಪೂಣಚ್ಚ, ವಕೀಲ ಎ.ಜಿ. ಮುದ್ದಯ್ಯ ಹಾಗೂ ಸಮಿತಿ ಸದಸ್ಯರಾದ ಟಿಂಕಲ್, ಮನೋಜ್, ರಾಯಲ್, ಬಿಪಿನ್, ಸೋಮಣ್ಣ, ರೋಶನ್, ನೂತನ್, ಗಿರೀಶ್, ಲಿಂಪಿತ್, ಧ್ಯಾನ್, ಮುತ್ತಣ್ಣ, ಬೋಪಣ್ಣ ಸೇರಿದಂತೆ ೩೦ ಮಂದಿ ಸದಸ್ಯರು, ಶಾಲಾ ಹಾಗೂ ಅಂಗನವಾಡಿಯನ್ನು ಶುಚಿಗೊಳಿಸಿದರು.