ಕಿಡ್ಸ್ ಟ್ಯಾಲೆಂಟ್ಸ್ ಪ್ರಶಸ್ತಿ ಪ್ರದಾನ
ಮಡಿಕೇರಿ, ಸೆ. ೨೮: ಬೆಂಗಳೂರಿನ ಗಾಂಧಿ ಭವನದಲ್ಲಿ ಎಸ್.ಎಸ್. ಕಲಾ ಸಂಗಮ ವತಿಯಿಂದ ಸಿ.ಎಂ. ತನುಷ ಅವರಿಗೆ ಕಿಡ್ಸ್ ಟ್ಯಾಲೆಂಟ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಅವರು ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದೂಷಿ ಪ್ರೇಮಾಂಜಲಿ ಆಚಾರ್ಯ ಅವರ ಶಿಷ್ಯೆ. ಈಕೆ ಕದನೂರು ಗ್ರಾಮದ ಸಿ.ಎ. ಮಹೇಶ್ ಹಾಗೂ ಎನ್.ಜಿ. ಸಿಂಧು ದಂಪತಿಯ ಪುತ್ರಿ. ಇವರು ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯಲ್ಲಿ ೨ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.