ಚೆಯ್ಯಂಡಾಣೆ, ಸೆ. ೨೯: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆಯ್ಯಂಡಾಣೆಯಿAದ ಪಾರಾಣೆ, ನಾಪೋಕ್ಲು, ಮಡಿಕೇರಿ ಸಂಪರ್ಕ ರಸ್ತೆ ದುರಸ್ತಿಪಡಿಸದೆ ಹಲವಾರು ವರ್ಷಗಳೇ ಕಳೆದಿವೆ. ಸಂಬAಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ರಸ್ತೆ ದುರಸ್ತಿಪಡಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಚೆಯ್ಯಂಡಾಣೆಯಿAದ ಮಡಿಕೇರಿ, ನಾಪೋಕ್ಲುವಿಗೆ ತೆರಳಲು ಈ ರಸ್ತೆ ಹತ್ತಿರವಾಗಿದ್ದು, ರಸ್ತೆ ಸಂಚಾರಕ್ಕೆ ಯೋಗ್ಯವಲ್ಲದ್ದರಿಂದ ವಾಹನ ಸವಾರರಿಗೆ ಮಾತ್ರವಲ್ಲದೆ ಪಾದಚಾರಿಗಳಿಗೆ ಕೂಡ ಪ್ರಯಾಣ ದುಸ್ತರವಾಗಿದೆ. ಈ ರಸ್ತೆಯನ್ನು ತ್ವರಿತವಾಗಿ ದುರಸ್ತಿಪಡಿಸಿ ವಾಹನ ಸವಾರರಿಗೆ ಅನುಕೂಲವಾಗಲು ಪೂರಕವಾದ ಕ್ರಮಕೈಗೊಳ್ಳಲು ಸಂಬAಧಪಟ್ಟ ಅಧಿಕಾರಿಗಳು ಮುತುವರ್ಜಿವಹಿಸಲಿ ಎಂದು ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ತೋಟಂಬೈಲು ಅನಂತ್ ಕುಮಾರ್ ಆಗ್ರಹಿಸಿದ್ದಾರೆ.
ಈ ರಸ್ತೆ ದುರಸ್ತಿ ಕಾಣದೆ ಹಲವಾರು ವರ್ಷಗಳೇ ಕಳೆದಿವೆ. ಈ ರಸ್ತೆಯಲ್ಲಿ ಸಂಚರಿಸಿದರೆ ಬಾಡಿಗೆ ಮೂಲಕ ರೂಪಾಯಿ ೨೦೦ ಸಿಕ್ಕಿದರೆ ಅದಕ್ಕೆ ೫೦೦ ರೂಪಾಯಿ ಸೇರಿಸಿ ಆಟೋ ದುರಸ್ತಿ ಪಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ಎಚ್ಚೆತ್ತು ರಸ್ತೆ ದುರಸ್ತಿಪಡಿಸಬೇಕೆಂದು ಆಟೋ ಚಾಲಕ ಸಜನ್ ನಂಜುAಡ ಒತ್ತಾಯಿಸಿದ್ದಾರೆ.
- ಅಶ್ರಫ್ ಚೆಯ್ಯಂಡಾಣೆ