ಮಡಿಕೇರಿ, ಸೆ. ೨೯: ವಿಶ್ವ ಹೃದಯ ದಿನಾಚರಣೆಯನ್ನು ಮಡಿಕೇರಿಯ ರವಿ ಆರ್ಥೋಪೆಡಿಕ್ ಕೇಂದ್ರದ ವತಿಯಿಂದ ಮೈಸೂರಿನ ನಾರಾಯಣ ಹೃದಯಾಲಯದ ಆಶ್ರಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಆಚರಿಸಲಾಯಿತು.
ರವಿ ಆರ್ಥೋಪೆಡಿಕ್ ಕೇಂದ್ರದಲ್ಲಿ ಆಯೋಜಿತ ವಿಶ್ವ ಹೃದಯ ದಿನಾಚರಣೆಯನ್ನು ಕೊಡಗು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲೋಕೇಶ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ಆಧುನಿಕ ದಿನಗಳು ಒತ್ತಡದ ದಿನಗಳಾಗಿದ್ದು ಹೀಗಾಗಿಯೇ ಹೃದಯ ಕಾಯಿಲೆ ಹೆಚ್ಚಾಗುತ್ತಿದೆ. ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬದಲಾವಣೆ ಜತೆಗೆ ಶಿಸ್ತುಬದ್ದ ಜೀವನ ಕ್ರಮದ ಅಳವಡಿಕೆ ಮೂಲಕ ಹೃದಯ ಕಾಯಿಲೆಯಿಂದ ದೂರ ಇರಬಹುದಾಗಿದೆ. ನಗರ ಪ್ರದೇಶ ಮಾತ್ರವಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಯೂ ಇತ್ತೀಚಿನ ವರ್ಷಗಳಲ್ಲಿ ಹೃದಯ ಸಂಬAಧಿ ಕಾಯಿಲೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವುದು ಬದಲಾದ ಜೀವನ ಕ್ರಮಕ್ಕೆ ಸಾಕ್ಷಿ ಯಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ಹೃದಯ ಸಂಬAಧಿ ಆರೋಗ್ಯ ತಪಾಸಣಾ ಶಿಬಿರಗಳು ನಡೆಯಬೇಕು ಎಂದರು.
ರವಿ ಆರ್ಥೋಪೆಡಿಕ್ ಕೇಂದ್ರದ ಮುಖ್ಯಸ್ಥ ಡಾ. ರವಿ ಅಪ್ಪಾಜಿ ಮಾತನಾಡಿ, ವಿಶ್ವದಲ್ಲಿ ೨೦೧೧ ರಿಂದ ಹೃದಯ ದಿನಾಚರಣೆಯನ್ನು ಆಯೋಜಿಸುವ ಮೂಲಕ ಹೃದಯದ ಆರೋಗ್ಯ ಸಂರಕ್ಷಣೆ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವೈದ್ಯಕೀಯ ವಿದ್ಯಾರ್ಥಿಗಳು ಆಧುನಿಕ ಸಂದರ್ಭದ ವೈದ್ಯಕೀಯ ಕ್ಷೇತ್ರದ ಮಾಹಿತಿಗಳ ಬಗ್ಗೆ ತಿಳುವಳಿಕೆ ಹೊಂದಿರಬೇಕೆAದು ಸಲಹೆ ನೀಡಿದರು.
ಮೈಸೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ದರ್ಶನ್ ಹಾಜರಿದ್ದು ಮಾಹಿತಿ ನೀಡಿದರು. ಇನ್ನರ್ ವೀಲ್ ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ ರವಿ, ಡಾ. ವರ್ಷ ಹಾಜರಿದ್ದರು. ಇದೇ ಸಂದರ್ಭ ಹೃದಯದ ಆರೋಗ್ಯ ಸಂರಕ್ಷಣೆ ಸಂಬAಧಿತ ನಗರದಲ್ಲಿ ಜಾಥಾ ಆಯೋಜಿಸಲಾಗಿತ್ತು.